ಬೆಂಗಳೂರು: 1973 ರಲ್ಲಿ ಪ್ರಾರಂಭವಾದ ವಿಲೇಜ್ ಕ್ಲೀನಿಕ್ ಗೆ ಇಂದು 50 ರ ಸಂಭ್ರಮ. ಐದು ದಶಕಗಳನ್ನು ಪೂರೈಸಿದ ಪದ್ಮಶ್ರೀ ಡಾ.ರಮಣರಾವ್ ರವರ ಆಸ್ಪತ್ರೆಗೆ ಗಣ್ಯರ ದಂಡು ಹರಿದು ಬಂದಿತ್ತು, ಸುವರ್ಣ ಮಹೋತ್ಸವಕ್ಕೆ ಎಲ್ಲರೂ ಸಾಕ್ಷಿಯಾದರು. ಒಂದೆಂಡೆ ಗಣ್ಯರ ದಂಡು, ವರನಟ ಡಾ.ರಾಜ್ ಕುಮಾರ್ ರವರಿಗೆ ಚಿಕಿತ್ಸೆ ನೀಡಿದ್ದ ಡಾ.ರಮಣರಾವ್ ವಿಲೇಜ್ ಕ್ಲೀನಿಕ್ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು, ಮಂಗಳ ವಾದ್ಯ ಮೊಳಗಿತ್ತು, ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿ ಬಳಿಯ ಡಾ.ರಮಣರಾವ್ ವಿಲೇಜ್ ಕ್ಲೀನಿಕ್ ಗೆ ಇಂದು, ಸಭಾಪತಿ ಬಸವರಾಜ ಹೊರಟ್ಟಿ, ಸಂಸದರಾದ ಪಿ.ಸಿ.ಮೋಹನ್, ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಗೃಹ ಸಚಿವರಾದ ಡಾ.ಪರಮೇಶ್ವರ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಜಿ.ಟಿ.ದೇವೇಗೌಡ, ರಾಜ್ಯಸಭಾ ಸದಸ್ಯ ಕೆ.ಬಿ. ಕೃಷ್ಣಮೂರ್ತಿ, ರೋಷನ್ ಬೇಗ್, ಇನ್ನಿತರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 


COMMERCIAL BREAK
SCROLL TO CONTINUE READING

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, 50 ವರ್ಷದ ಸಾಧನೆ-ಸೇವೆಯಾಗಿ ಕಾಣುತ್ತಿದೆ, ಸಣ್ಣವರಿಂದ ಪ್ರೇರಪಣೆ ಸಿಗುವುದು ಅಪರೂಪ, ಆಧುನಿಕ ಡಾಕ್ಟರ್ ಜೀವನ ಕ್ರಮ ನೋಡಿದ್ದೇವೆ, ಆದರೆ ಡಾ ರಮಣರಾವ್ ಸಾರ್ವಜನಿಕ ಬದುಕು ಮಾದರಿ, 28 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದಾರೇ, ಪದ್ಮ ಶ್ರೀ ಪ್ರಶಸ್ತಿ ಗಿಂತ, ಜನರ ಆಶೀರ್ವಾದ ನಿಮಗೆ ಇದೆ, ರಾಜ್ಯದಲ್ಲಿ ವರ್ಷಕ್ಕೆ 1 ಲಕ್ಷಕ್ಕೂ ಅಧಿಕ ವೈದ್ಯರು ಹೊರಬರತ್ತಾರೇ, ಆದರೆ ಸೇವಾಮನೋಭಾವದ ವೈದ್ಯರು ಸಂಖ್ಯೆ ಕಡಿಮೆ, ವಾರಕ್ಕೆ ಒಂದು ದಿನ ಪ್ರತಿ ವೈದ್ಯರು ಸಮಾಜಿಕ ಸೇವೆ ಮಾಡಬೇಕು, ಸರಕಾರದಲ್ಲಿ ಆರೋಗ್ಯ, ಶಿಕ್ಷಣ, ಮಹತ್ವ ನೀಡಿದ್ದೇವೆ, ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ, ಎಂ.ಆರ್.ಐ ಸ್ಕ್ಯಾನ್ ಉಚಿತವಾಗಿ ನೀಡಲು ಯೋಜನೆ ರೂಪಿಸುತ್ತೇವೆ, ಪ್ರಶಸ್ತಿ ಮುಖ್ಯ ಅಲ್ಲಾ ಸೇವೆ ಮುಖ್ಯ ಎಂದರು. 


ಇದನ್ನೂ ಓದಿ: ಸಾನ್ವಿ ಸುದೀಪ್‌ ಸೌಂದರ್ಯಕ್ಕೆ ಮನಸೋತ ನೆಟ್ಟಿಜನ್‌, ಕಿಚ್ಚನ ಪುತ್ರಿಯ ಸಿನಿಮಾ ಎಂಟ್ರಿ ಯಾವಾಗ?


ವೈದ್ಯ ಡಾ.ರಮಣರಾವ್ ಮಾತನಾಡಿ, ನನ್ನ ಜೀವನದಲ್ಲಿ ಅತೀ ಮುಖ್ಯ ಸಮಯ 50 ವರ್ಷ ಕಳೆದಿದೆ, ನನ್ನ ತಂದೆ ರಾಮರಾವ್, ತಾಯಿ ಶಕುಂತಲ, ಪ್ರತಿ ಭಾನುವಾರ ನಮ್ಮ ಸೇವೆಯಾಗಿದೆ, ನಮ್ಮೇಲ್ಲರ ಸಿಬ್ಬಂದಿ ಸಹಕಾರ ಪ್ರಾರಂಭದಿಂದಲೂ ಇದೆ, ನನ್ನ ಮಗ ಡಾ.ಚರಿತ್, ಡಾ.ಅಭಿಜಿತ್, ಡಾ.ಶಾಂತಿನಿ, ಡಾ.ಜಾಹ್ನವಿ, ನಾಲ್ಕು ತಲೆಮಾರಿನಿಂದ ವೈದ್ಯಕೀಯ ಸೇವೆ ಮಾಡಿದ್ದೇನೆ, ಸಮಾಜ ಸೇವೆ ಮುಂದುವರೆಯಲಿದೆ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಸ್ಯಾನಿಟೇಸರ್, ಸೋಪು, ಪೇಸ್ಟ್, ಹಲವಾರು ಸಹಕಾರದಿಂದ ವಿತರಿಸಿದ್ದೇವೆ. 10 ಜನರಲ್ಲಿ ೦6 ಜನ ಮಧುಮೇಹಿಗಳಾಗಿದ್ದಾರೆ, 28 ಲಕ್ಷ ಕ್ಕಿಂತಲು ಹೆಚ್ಚು ಬಡ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ, ಇದುವರೆಗೆ ಮಿಲಿಯನ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ ಎಂದರು. 


ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಐವತ್ತು ವರ್ಷದಿಂದ, ವೈದ್ಯರು ಜೀವವನ್ನು ಬದುಕಿಸಿದ್ದಾರೆ, ಮರುಜನ್ಮ ನೀಡಿದ್ದಾರೆ, ನಿಸ್ವಾರ್ಥ ಸೇವೆ, ನಾನು ಕೂಡ 30 ವರ್ಷದಿಂದ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದೇನೆ, ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದ್ದರೇ ಎಂದರೇ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಮಾತನಾಡಿ ನೆರವಾದವರನ್ನು ಪ್ರತಿಯೊಬ್ಬರನ್ನು ನೆನೆಪು ಮಾಡಿಕೊಳ್ಳುವುದು ನಿಜವಾದ ಸೇವೆ, ಡಾ.ರಮಣರಾವ್ ಕುಟುಂಬ ಆದರ್ಶ ಕುಟುಂಬ, ಪ್ರತಿ ಭಾನುವಾರ ಸೇವೆ, ಮೂರು ಲಕ್ಷ ಜನರಿಗೆ ಆರೋಗ್ಯ ಸೇವೆ ಸ್ವಾಗತಾರ್ಹ, ಬಡವರಿಗೆ ಆರೋಗ್ಯ ಅವರ ಧ್ಯೇಯ, ಹಣ ಮಾಡುವ ವೈದ್ಯರ ನಡುವೆ ವಿಭಿನ್ನವಾಗಿ ಡಾ.ರಮಣರಾವ್ ನಿಲ್ಲುತ್ತಾರೆ ಎಂದರು. ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಮಾತನಾಡಿ ನಮ್ಮ ಕುಟುಂಬದ ವೈದ್ಯರು, ಪ್ರತಿ ಭಾನುವಾರದ ಸೇವೆ, ಗಿನ್ನೀಸ್ ದಾಖಲೆಯಾಗಿದೆ, ಬಡ ಜನರಿಗೆ ದಾರಿದೀಪವಾಗಿದೆ ಎಂದರು.


ಈ ಸಂದರ್ಭದಲ್ಲಿ ಜಸ್ಟೀಸ್ ಡಿ. ಪದ್ಮರಾಜ್, ಸೀನಪ್ಪ,ವೆಂಕಟಾಚಲಯ್ಯ, ದಿಲೀಪ್ ಸುರಾನ್, ಜಯಶ್ರೀ ಉಲ್ಲಾಳ, ಪಂಕಜ್ ಕೊಠಾರಿ, ಬಿ.ಎಲ್.ರಾಂಕ, ಐ.ಐ.ಟಿ‌. ಸಡಗೋಪನ್, ಕ್ರಿಕೇಟಿಗ ವಿ.ವಿ.ಎಸ್.ಲಕ್ಷ್ಮಣ್,  ಟಿ.ಬೇಗೂರು ಗ್ರಾ.ಪಂ.ಅಧ್ಯಕ್ಷೆ ಮತ್ತು ಸದಸ್ಯರಾದ ಬಿ.ಕೆ.ಮುನಿರಾಜು ಮತ್ತು ತಂಡ, ಬಿವಿನ್ ರಾವ್. ಸ್ಥಳೀಯರಾದ ಬಿ.ಟಿ.ರಾಮಚಂದ್ರ, ಶ್ರೀನಾಥ್, ಮುನಿಯಪ್ಪಾ,  ಶೋಭಾ, ತ್ರಿಪರೇಂದ್ರ, ೪೯ ಜನ ಪ್ರತಿ ಭಾನುವಾರ ಸಹಕರಿಸತ್ತೀರು, ಸಿಬ್ಬಂದಿಗಳನ್ನು ಸನ್ಮಾನಿಸಿದರು.


ಇದನ್ನೂ ಓದಿ: ಬಣಜಿಗ ಸಮುದಾಯದ 2A ಸಮಸ್ಯೆ ಪರಿಹರಿಸಲಾಗುವುದು : ಸಚಿವ ನಾಗೇಂದ್ರ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ