BBK OTT ಯಲ್ಲಿ ತ್ರಿಕೋನ ಪ್ರೇಮ! `ರಾಕೇಶ್ ಅಡಿಗ ನಾನು ಬಳಸಿ ಬಿಟ್ಟ ಟಿಶ್ಯು` ಎಂದಿದ್ಯಾಕೆ ಸೋನು ಗೌಡ?
Bigg Boss Kannada OTT : ಬಿಗ್ ಬಾಸ್ ಮನೆಯಲ್ಲಿ ಸ್ಫೂರ್ತಿ ಗೌಡ ಹಾಗೂ ರಾಕೇಶ್ ಅಡಿಗ ಮಧ್ಯೆ ಏನೋ ನಡೀತಿದೆ ಎಂಬ ಅನುಮಾನ ಶುರುವಾಗಿದೆ. ಈ ಬೆನ್ನಲ್ಲೇ ರಾಕೇಶ್ ಅಡಿಗ ಹೆಸರಿಟ್ಟುಕೊಂಡೇ ಸೋನು ಗೌಡ ಆಗಾಗ ಸ್ಫೂರ್ತಿ ಗೌಡ ಜೊತೆ ಜಗಳವಾಡುತ್ತಿರುತ್ತಾರೆ.
Bigg Boss Kannada OTT : ಬಿಗ್ ಬಾಸ್ ಮನೆಯಲ್ಲಿ ಸ್ಫೂರ್ತಿ ಗೌಡ ಹಾಗೂ ರಾಕೇಶ್ ಅಡಿಗ ಮಧ್ಯೆ ಏನೋ ನಡೀತಿದೆ ಎಂಬ ಅನುಮಾನ ಶುರುವಾಗಿದೆ. ಈ ಬೆನ್ನಲ್ಲೇ ರಾಕೇಶ್ ಅಡಿಗ ಹೆಸರಿಟ್ಟುಕೊಂಡೇ ಸೋನು ಗೌಡ ಆಗಾಗ ಸ್ಫೂರ್ತಿ ಗೌಡ ಜೊತೆ ಜಗಳವಾಡುತ್ತಿರುತ್ತಾರೆ. ಸದ್ಯ ಸೋನು ಮತ್ತು ಸ್ಫೂರ್ತಿ ನಡುವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್ ನಡೆಯುತ್ತಿರುತ್ತದೆ. ಈಗ ಅದೇ ತಾರಕಕ್ಕೇರಿ ರಾಕೇಶ್ ನಾನು ಬಳಸಿ ಬಿಟ್ಟ ಟಿಶ್ಯು ಎಂದು ಸೋನು ಗೌಡ ಹೇಳಿದ್ದಾರೆ. ಈ ವಿಚಾರ ಸದ್ಯ ಗಂಭೀರವಾಗಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: Bigg Boss Kannada OTT: ಮನೆಯ ಮೊದಲ ಕ್ಯಾಪ್ಟನ್ ಆದ ಅರ್ಜುನ್ ರಮೇಶ್
ಬಿಗ್ ಬಾಸ್ ಮನೆಯಲ್ಲಿ ಏನೇ ಆದರೂ ಅಲ್ಲಿ ಸೋನು ಗೌಡ ಇದ್ದೇ ಇರುತ್ತಾರೆ. ಯಾರೇ ಜಗಳಾತ್ತಿದ್ದರು ಅಲ್ಲಿ ಸೋನು ಗೌಡ ಧ್ವನಿ ಕೇಳುತ್ತಿರುತ್ತದೆ. ಆಗಾಗ ರಾಕೇಶ್ ಅಡಿಗ ವಿಚಾರವಾಗಿ ಸ್ಫೂರ್ತಿ ಗೌಡ, ಸೋನು ಗೌಡ ನಡುವೆ ವಾಗ್ವಾದವಂತೂ ನಡೆಯುತ್ತಿರುತ್ತೆ. ಈಗ ರಾಕೇಶ್ ಅಡಿಗ ಅವರನ್ನು ಸೋನು ಟಿಶ್ಯು ಪೇಪರ್ ಎಂದು ಕರೆದಿದ್ದು, ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ಫೂರ್ತಿ ಗೌಡ ಅವರು ರಾಕೇಶ್ ನನ್ನ ಹುಡುಗ ಎನ್ನುತ್ತಾರೆ. "ಟಿಶ್ಯು ವನ್ನು ಬಳಸಿದ ಮೇಲೆ ಏನು ಮಾಡ್ತಾರೆ ಅಂತ ಸೋನು ಕೇಳ್ತಾರೆ. ಅದಕ್ಕೆ ನಾನು ಕಸದಬುಟ್ಟಿಗೆ ಹಾಕ್ತಾರೆ ಅಂತ ಹೇಳಿದೆ. ಅದೇ ಟಿಶ್ಯು ನಿನಗೆ ಕೊಟ್ಟಿರುವುದು ಎಂದು ಸೋನು ಗೌಡ ಅವರು ಸ್ಫೂರ್ತಿ ಗೌಡ ಅವರ ಬಳಿ ಹೇಳ್ತಾರೆ ಎಂದು ರಾಕೇಶ್ ಅಡಿಗ ಮುಂದೆ ಸ್ಫೂರ್ತಿ ಗೌಡ ಅವರು ಮಾತನಾಡಿದ್ದಾರೆ.
ಸೋನು, "ನನ್ನ ಹುಡುಗ ನನ್ನ ಹುಡುಗ ಅಂತ ಸ್ಫೂರ್ತಿ ಹೇಳಿದಳು. ಅದಕ್ಕೆ ನಾನು ಬಳಸಿ ಬಿಟ್ಟಿರುವ ಟಿಶ್ಯು ನೀನು ಯೂಸ್ ಮಾಡುತ್ತಿರುವೆ ಅಂತಾ ಹೇಳಿದೆ" ಎಂದು ರಾಕೇಶ್ ಅಡಿಗ ಮುಂದೆ ಸೋನು ಗೌಡ ಹೇಳಿದ್ದಾರೆ. ಸ್ಫೂರ್ತಿ, ಸೋನು ಮಾತುಕತೆ ಕೇಳಿದ ರಾಕೇಶ್ "ಇದ್ಯಾಕೋ ಸೀರಿಯಸ್ ಆಗಿ ಲೈನ್ ಕ್ರಾಸ್ ಆಗ್ತಿದೆ" ಎನ್ನುತ್ತಾ ಅಲ್ಲಿಂದ ಹೋಗಿದ್ದಾರೆ. ಇದೆಲ್ಲ ನಡೆದ ಬಳಿಕ ಸೋನು ಗೌಡ ಹೋಗಿ ರಾಕೇಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಆಗ ನನಗೆ ಬೇಜಾರಾಗಿಲ್ಲ, ಇನ್ಸಲ್ಟ್ ಆಗಿದೆ. ಟಿಶ್ಯು ಅನ್ನೋ ಬದಲು ನ್ಯಾಪ್‌ಕಿನ್, ಹ್ಯಾಂಡ್ ಕರ್ಚೀಫ್ ಅಂತಾನೂ ಹೇಳಬಹುದಿತ್ತಲ್ಲಾ ಎಂದು ರಾಕೇಶ್ ಹೇಳಿದ್ದಾರೆ. ಕೊನೆಯಲ್ಲಿ ತಮಾಷೆಯಲ್ಲಿಯೇ ಈ ಮಾತುಕತೆಗೆ ಅಂತ್ಯ ಸಿಕ್ಕಿದೆ.
ಇದನ್ನೂ ಓದಿ: ಈ ವಿಚಿತ್ರ ಕನಸುಗಳು ಶ್ರೀಮಂತರಾಗುವ ಸೂಚನೆಯಂತೆ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.