Bigg Boss Kannada OTT : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ರಿಯಾಲಿಟಿ ಶೋನಲ್ಲಿ ದೊಡ್ಮನೆಯಲ್ಲಿ ಸ್ಪರ್ಧಿಗಳು ಲಾಕ್ ಆಗಿದ್ದಾರೆ. ಮೊದಲವಾರದ ನಾಮಿನೇಷನ್ ಆಯ್ತು, ಟಾಸ್ಕ್ ಆಯ್ತು ಇದೀಗ ಮನೆಯ ಮೊದಲ ಕ್ಯಾಪ್ಟನ್ ಕೂಡ ಆಯ್ಕೆಯಾಗಿದ್ದಾರೆ. ಮನೆಯ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದರು. ಈ ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಲು ಮನೆಮಂದಿಗೆ ವೋಟ್ ಮಾಡುವಂತೆ ಬಿಗ್ ಬಾಸ್ ಹೇಳಿದ್ದರು. ಆ ಪ್ರಕಾರ ಸ್ಪರ್ಧೆಗಳ ಆಯ್ಕೆಯ ಪ್ರಕಾರ, ಅರ್ಜುನ್ ರಮೇಶ್, ಸೋಮಣ್ಣಮಾಚಿಮಾಡ, ಚೈತ್ರಾ ಹಳ್ಳಿಕೇರಿ ಮತ್ತು ನಂದು ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಆಯ್ಕೆಯಾದರು. ಬಳಿಕ ನಡೆದ ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಹೆಚ್ಚು ಆಟಗಳಲ್ಲಿ ಗೆದ್ದ ಕಿರುತೆರೆ ನಟ ಅರ್ಜುನ್ ರಮೇಶ್ ಮನೆಯ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾದರು.
ಇದನ್ನೂ ಓದಿ : BBK OTT: ಬಿಗ್ ಬಾಸ್ ಮನೆಯಲ್ಲಿ ಸ್ಫೂರ್ತಿ ಗೌಡ - ಸೋನು ಗೌಡ ಜಗಳಕ್ಕೆ ಕಾರಣವಾದ 'ಡವ್‌ರಾಣಿ'
ಕಿರುತೆರೆ ನಟ ಅರ್ಜುನ್ ರಮೇಶ್ 13ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದು, ಧಾರಾವಾಹಿ ಪ್ರಿಯರಿಗೆ ಬಹಳ ಅಚ್ಚುಮೆಚ್ಚು. ʻಇಂತಿ ನಿಮ್ಮ ಆಶಾʼ ಎನ್ನುವ ಪ್ರಸಿದ್ದ ಧಾರಾವಾಹಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಮಹಾಕಾಳಿ, ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿ ಅರ್ಜುನ್ ರಮೇಶ್ ಖ್ಯಾತರಾಗಿದ್ದರು. ಇದಲ್ಲದೇ, ಜನರ ಮೆಚ್ಚಿನ ಧಾರಾವಾಹಿಯಾಗಿದ್ದ ಅಗ್ನಿಸಾಕ್ಷಿಯಲ್ಲಿಯೂ ಸಹ ಅರ್ಜುನ್ ಅವರು ಶೌರ್ಯ ಎಂಬ ಪಾತ್ರ ಮಾಡಿದ್ದರು. ನಂತರ ನಾಗಿಣಿ ಧಾರಾವಾಹಿಯಲ್ಲಿ ಅರ್ಜುನ್ ಅವರು ರುದ್ರ ಪಾತ್ರ ಮಾಡಿದ್ದಾರೆ.
📢📢📢 ಮನೆಯ ಮೊದಲ ಕ್ಯಾಪ್ಟನ್ - ಅರ್ಜುನ್ ರಮೇಶ್ > ಸ್ಟ್ರೀಮಿಂಗ್ 24x7 ಲೈವ್ > https://t.co/M64wqSYStI#BiggBossOTT #BiggBossOTTKannada #BBOTTKOnVoot @VootSelect @endemolshineind @KicchaSudeep @vimalelaichi pic.twitter.com/xhsf2oqJ9N
— Colors Super (@ColorsSuper) August 11, 2022
ಕೇವಲ ಕಿರುತೆರೆ ಮಾತ್ರವಲ್ಲದೇ ಅರ್ಜುನ್ ರಮೇಶ್ ಬಿಗ್ ಸ್ಕ್ರೀನ್‌ನಲ್ಲೂ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್‌ಮ್ಯಾನ್ ಸಿನಿಮಾದಲ್ಲಿ ಅರ್ಜುನ್ ನಟಿಸಿದ್ದಾರೆ. ಪ್ರಿಯಾಂಕಾ ಚಿಂಚೋಳಿ ಅಭಿನಯದ 'ಕೌಟಿಲ್ಯ' ಚಿತ್ರದಲ್ಲಿ ಅರ್ಜುನ್ ರಮೇಶ್ ನಾಯಕ ನಟನಾಗಿದ್ದಾರೆ. ತಮ್ಮ ನಟನೆಯ ಮೂಲಕ ಜನರಿಗೆ ಹತ್ತಿರವಾಗಿರುವ ಅರ್ಜುನ್ ರಮೇಶ್ ಕೇವಲ ನಟ ಮಾತ್ರವಲ್ಲ ರಾಜಕಾರಣಿಯೂ ಹೌದು.
ಇದನ್ನೂ ಓದಿ : Bigg Boss OTT: ತಮ್ಮ ಫೋನ್ ನಂಬರ್ ಹೇಳಿದ ಸೋನು ಶ್ರೀನಿವಾಸ್ ಗೌಡ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.