ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗೌತಮ್ ಬೆನೆಗಲ್ ಇನ್ನಿಲ್ಲ
ಬರಹಗಾರ, ವ್ಯಂಗ್ಯಚಿತ್ರಕಾರ ಮತ್ತು ಚಲನಚಿತ್ರ ನಿರ್ಮಾಪಕ ಗೌತಮ್ ಬೆನೆಗಲ್ ಅವರು ತಮ್ಮ 56 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನವದೆಹಲಿ: ಬರಹಗಾರ, ವ್ಯಂಗ್ಯಚಿತ್ರಕಾರ ಮತ್ತು ಚಲನಚಿತ್ರ ನಿರ್ಮಾಪಕ ಗೌತಮ್ ಬೆನೆಗಲ್ ಅವರು ತಮ್ಮ 56 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರ ಸ್ನೇಹಿತ ಮತ್ತು ಕಲಾವಿದ ಕೈಜಾದ್ ಕೊಟ್ವಾಲ್ ಅವರು "ನಾನು ತೀವ್ರ ಆಘಾತದಲ್ಲಿದ್ದೇನೆ. ಗೌತಮ್ ಬೆನೆಗಲ್ ಇನ್ನು ಇಲ್ಲ. ನಿನ್ನೆ ನಾವು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಇಡೀ ಭಾರತಕ್ಕೆ ವಿಶೇಷವಾಗಿ ಅವರ ಕಲಾತ್ಮಕ, ಬೌದ್ಧಿಕ ಮತ್ತು ಪ್ರಗತಿಪರ ವರ್ಗಕ್ಕೆ ದೊಡ್ಡ ನಷ್ಟವಾಗಿದೆ. ನಾನು ಇದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಸಂತಾಪ್ ವ್ಯಕ್ತಪಡಿಸಿದ್ದಾರೆ.
ಗೌತಮ್ ಬೆನೆಗಲ್ ರಾಷ್ಟ್ರೀಯ ಪ್ರಶಸ್ತಿ ವಿಜೇತ ಅನಿಮೇಷನ್ ಚಲನಚಿತ್ರ ನಿರ್ಮಾಪಕ. ಅವರ ಆರಂಭಿಕ ವರ್ಷಗಳಿಂದ, ಅವರು ಬರವಣಿಗೆ ಮತ್ತು ಗ್ರಾಫಿಕ್ ಕರಕುಶಲ ಕಲೆಗಳಲ್ಲಿ ಗಮನಾರ್ಹ ಪಾಂಡಿತ್ಯವನ್ನು ಹೊಂದಿದ್ದರು. 16 ನೇ ವಯಸ್ಸಿನಲ್ಲಿ, ಮಕ್ಕಳ ಪತ್ರಿಕೆ ಸಂದೇಶ್ ನ ಖ್ಯಾತ ನಿರ್ದೇಶಕ ಮತ್ತು ಅಂಕಣಕಾರ ಸತ್ಯಜಿತ್ ರೇ ಅವರ ಆಹ್ವಾನದ ಮೇರೆಗೆ, ಅವರ ಚಿತ್ರಣಗಳು ಮತ್ತು ಲೇಖನಗಳು ಆಗಾಗ್ಗೆ 'ಸಂದೇಶ್ ಮತ್ತು ಇತರ ಪ್ರಕಟಣೆಗಳಲ್ಲಿ ಪ್ರಕಟವಾಗುತ್ತಿದ್ದವು.
ಇದನ್ನೂ ಓದಿ: Surekha Sikri Death:ಕಿರುತೆರೆಯ ಹಿರಿಯ ಕಲಾವಿದೆ ಸುರೇಖಾ ಸಿಕ್ರಿ ನಿಧನ
ಅವರ ಆನಿಮೇಷನ್ ಚಲನಚಿತ್ರಗಳು, ವಿಶೇಷವಾಗಿ 'ಕೆಲ್ವಿನೇಟರ್ ಪೆಂಗ್ವಿನ್ ಮತ್ತು 'ಹ್ಯಾಂಡಿಪ್ಲ್ಯಾಸ್ಟ್ ಬಾಯ್ 'ಜನಪ್ರಿಯವಾಗಿವೆ. ಅವರು ಫಿಲಂ ಡಿವಿಸನ್ ಆಫ್ ಇಂಡಿಯಾಗೆ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ಅವರ ಚಲನಚಿತ್ರಗಳು ಟೆಹರಾನ್, ಬೆಲಾರಸ್, ಹಿರೋಷಿಮಾ ಮತ್ತು ಕೈರೋದಲ್ಲಿ ಚಲನಚಿತ್ರೋತ್ಸವಗಳಿಗೆ ನಾಮನಿರ್ದೇಶನಗೊಂಡಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.