Surekha Sikri Death:ಕಿರುತೆರೆಯ ಹಿರಿಯ ಕಲಾವಿದೆ ಸುರೇಖಾ ಸಿಕ್ರಿ ನಿಧನ

Surekha Sikri Death: ಸುರೇಖಾ ಸಿಕ್ರಿ ನಿಧನದ ಕುರಿತು ಮಾಹಿತಿ ನೀಡಿರುವ ಅವರ ಮ್ಯಾನೇಜರ್, ಸುರೇಖಾ ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ. ದೀರ್ಘಾವಧಿಯಿಂದ ಸುರೇಖಾ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು 2020ರಲ್ಲಿ ಅವರು ಬ್ರೇನ್ ಸ್ಟ್ರೋಕ್ ಗೆ ಒಳಗಾಗಿದ್ದರು.

Written by - Nitin Tabib | Last Updated : Jul 16, 2021, 10:52 AM IST
  • ಕಿರುತೆರೆಯ ಖ್ಯಾತ ಹಿರಿಯ ಕಲಾವಿದೆ ಸುರೇಖಾ ಸಿಕ್ರಿ ತಮ್ಮ 75ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
  • ಸುರೇಖಾ ಅವರ ನಿಧನ ಹೃದಯಾಘಾತದಿಂದ ಸಂಭವಿಸಿದೆ.
  • ದೀರ್ಘಾವಧಿಯಿಂದ ಅವರ ಆರೋಗ್ಯ ಸ್ಥಿತಿ ಸರಿಯಾಗಿರಲಿಲ್ಲ.
Surekha Sikri Death:ಕಿರುತೆರೆಯ ಹಿರಿಯ ಕಲಾವಿದೆ ಸುರೇಖಾ ಸಿಕ್ರಿ ನಿಧನ title=
Surekha Sikri Death (File Photo)

Surekha Sikri Death: ಕಿರುತೆರೆಯ ಖ್ಯಾತ ಹಿರಿಯ ಕಲಾವಿದೆ ಸುರೇಖಾ ಸಿಕ್ರಿ (Surekha Sikri) ತಮ್ಮ 75ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಸುರೇಖಾ ಅವರ ನಿಧನ ಹೃದಯಾಘಾತದಿಂದ (Cardiac Arrest) ಸಂಭವಿಸಿದೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ದೀರ್ಘಾವಧಿಯಿಂದ ಅವರ ಆರೋಗ್ಯ ಸ್ಥಿತಿ ಸರಿಯಾಗಿರಲಿಲ್ಲ ಮತ್ತು 2020 ರಲ್ಲಿ ಅವರು ಬ್ರೇನ್ ಸ್ಟ್ರೋಕ್ ಗೆ ಒಳಗಾಗಿದ್ದರು.

ಸುರೇಖಾ ಸಿಕ್ರಿ ಅವರಿಗೆ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ಸುರೇಖಾ ಸಿಕ್ರಿ ಅವರು 'ಬಧಾಯಿ ಹೋ (Badhayi Ho)' ಹಾಗೂ 'ಬಾಲಿಕಾ ವಧು (Balika Vadhu)' ಗಳಂತಹ ಹಿಟ್ ಚಲನಚಿತ್ರ ಹಾಗೂ ಸಿರಿಯಲ್ ನಲ್ಲಿ ಕೆಲಸ ಮಾಡಿದ್ದಾರೆ. ಸಿರಿಯಲ್ ನಲ್ಲಿ ಅವರು ನಿಭಾಯಿಸಿದ ಪಾತ್ರ ಅವಿಸ್ಮರಣೀಯವಾಗಿತ್ತು.

ಈ ಕುರಿತು ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದಿಗೆ ಮಾತನಾಡಿರುವ ಸುರೇಖಾ ಸಿಕ್ರಿ ಅವರ ಮ್ಯಾನೇಜರ್, 'ಹೃದಯಾಘಾತದ ಕಾರಣ ಇಂದು ಬೆಳಗ್ಗೆ 75 ವರ್ಷದ ಸುರೇಖಾ ಸಿಕ್ರಿ ನಿಧನರಾಗಿದ್ದಾರೆ (Death). ಎರಡನೇ ಬಾರಿಗೆ ಬ್ರೇನ್ ಸ್ಟ್ರೋಕ್ (Brain Stroke)ಗೆ ಒಳಗಾದ ಕಾರಣ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ತಮ್ಮ ಕೊನೆಯ ಗಲಿಗೆಯಲ್ಲಿ ಸುರೇಖಾ ಸಿಕ್ರಿ ತಮ್ಮ ಕುಟುಂಬ ಸದಸ್ಯರ ಜೊತೆಗಿದ್ದರು. ದುಃಖದ ಈ ಸಂದರ್ಭದಲ್ಲಿ ಅವರ ಕುಟುಂಬ ಖಾಸಗಿತನ ಬಯಸುತ್ತದೆ. ಓಂ ಸಾಯಿ ರಾಮ್' ಎಂದು ಹೇಳಿದ್ದಾರೆ. 

ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಸುರೇಖಾ ಸಿಕ್ರಿ ಅವರು ಅಲ್ಮೋರಾ ಹಾಗೂ ನೈನಿತಾಲ್ ಗಳಲ್ಲಿ ತಮ್ಮ ಬಾಲ್ಯದ ದಿನಗಳನ್ನು ಕಳೆದಿದ್ದಾರೆ. ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ (Aligarh Muslim University) ಅವರು ತಮ್ಮ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಬಳಿಕ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ (National School Of Drama) ಸೇರಿಕೊಂಡಿದ್ದರು. 1989ರಲ್ಲಿ ಸುರೇಖಾ ಅವರಿಗೆ Sangeet Natak Akademi Award ಕೂಡ ಲಭಿಸಿದೆ.

ಇದನ್ನೂ ಓದಿ- Jeh Ali Khans first photo : ಹೀಗಿದೆ ನೋಡಿ ಕರಿನಾ ಕಪೂರ್ ಖಾನ್ ಎರಡನೇ ಮಗು

ಸುರೇಖಾ ಅವರ ಕುಟುಂಬದ ಕಿರುಪರಿಚಯ
ಸುರೇಖಾ ಸಿಕ್ರಿ ಅವರ ತಂದೆ ವಾಯುಸೇನೆಯಲ್ಲಿದ್ದರು ಹಾಗೂ ಅವರ ತಾಯಿ ಶಿಕ್ಷಕಿಯಾಗಿದ್ದರು. ಹೇಮಂತ್ ರೆಗೆ (Hemant Rege) ಜೊತೆಗೆ ಅವರು ವಿವಾಹವಾಗಿದ್ದರೂ. ಉಭಯ ದಂಪತಿಗಳಿಗೆ ರಾಹುಲ್ ಸಿಕ್ರಿ (Rahul Sikri) ಹೆಸರಿನ ಪುತ್ರ ಕೂಡ ಇದ್ದಾನೆ. ರಾಹುಲ್ ಪ್ರಸ್ತುತ ಮುಂಬೈ ನಲ್ಲಿದ್ದು ವೃತ್ತಿ ಪರವಾಗಿ ಅವರೊಬ್ಬ ಆರ್ಟಿಸ್ಟ್ ಆಗಿದ್ದಾರೆ.

ಇದನ್ನೂ ಓದಿ-ಮೈಸೂರಿನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಹಲ್ಲೆ: ಇಂದ್ರಜಿತ್ ಲಂಕೇಶ್ ದೂರು

ಖ್ಯಾತ ಹಿರಿಯ ಬಾಲಿವುಡ್ ನಟ ನಸೀರುದ್ದೀನ್ ಷಾ (Naseeruddin Shah) ಅವರು ಸುರೇಖಾ ಸಿಕ್ರಿ ಅವರ ಸಹೋದರ ಸಂಬಂಧಿಯಾಗಿದ್ದಾರೆ (Brother-in-Law). ಸುರೇಖಾ ಸಿಕ್ರಿ ಅವರ ಸಹೋದರಿ ಮನಾರಾ ಸಿಕ್ರಿ, ನಸೀರುದ್ದೀನ್ ಷಾ ಅವರ ಮೊದಲ ಪತ್ನಿಯಾಗಿದ್ದಾರೆ.

ಇದನ್ನೂ ಓದಿ-Rocking Star: ತಮ್ಮ ಸ್ಟಾರ್‌ಡಮ್ ಸೀಕ್ರೆಟ್ ಬಿಚ್ಚಿಟ್ಟ ರಾಕಿ ಬಾಯ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News