ಬೆಂಗಳೂರು : ದಿವವಂಗತ ಶ್ರೀ ಪ್ರಲ್ಹಾದ್ ಪಿ. ಛಾಬ್ರಿಯಾ ಅವರ ಜೀವನ ಕಥೆ ಆಧಾರಿತ ಕಿರು ಚಿತ್ರ ʼಪ್ರಲ್ಹಾದ್‌ʼ. ಭಾರತದ ಅತ್ಯಂತ ವಿಶ್ವಾಸಾರ್ಹ ಪಿವಿಸಿ ಪೈಪ್‌ಗಳು ಮತ್ತು ಫಿಟ್ಟಿಂಗ್‌ಗಳ ತಯಾರಕರು, ಫಿನೋಲೆಕ್ಸ್ ಗ್ರೂಪ್‌ನ (Finolex founder) ಸಂಸ್ಥಾಪಕರಾದ ಪ್ರಲ್ಹಾದ್‌ ಅವರ ಜೀವನ ಪ್ರಯಾಣದ ವಿವರಾಣಾತ್ಮ ಸಿನಿಮಾ ಯೂಟೂಬ್‌ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ವೀಕ್ಷಣೆ ಪಡೆಯುತ್ತಿದೆ.


COMMERCIAL BREAK
SCROLL TO CONTINUE READING

ʼಪ್ರಲ್ಹಾದ್ʼ ಎಂಬುದು 14ರ ಬಾಲಕನಾಗಿದ್ದಾಗ ಪ್ರಲ್ಹಾದ್ ಪಿ. ಛಾಬ್ರಿಯಾ ಅವರು ಅನುಭವಿಸಿದ ಜೀವನ ಕಥೆಯ ರೂಪಕ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಗೈದ ಅವರ ಜೀವನದ ಪ್ರಯಾಣವನ್ನು ಒಳಗೊಂಡಿರುವ ಈ ಕಿರು ಚಲನಚಿತ್ರ ಬಹು ಮೆಚ್ಚುಗೆಗೆ ಪಾತ್ರವಾಗಿದೆ. ಯಶಸ್ವಿ ಉದ್ಯಮಿಯಾಗಿ ದಯೆ, ಭಕ್ತಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದ ದಿವಂಗತ ಶ್ರೀ ಪ್ರಲ್ಹಾದ್ ಪಿ. ಛಾಬ್ರಿಯಾ ಅವರ ಜೀವನ ಯುವಪೀಳಿಗೆಗೆ ಒಂದು ಪಾಠ. 


ಇದನ್ನೂ ಓದಿ: ಕುಸ್ತಿಪಟು ಸುಶೀಲ್ ಕುಮಾರ್ ಮೇಲೆ ಕೊಲೆ ಪ್ರಕರಣ ದಾಖಲು


ಸದ್ಯ ಸೆಪ್ಟೆಂಬರ್‌ 1 ರಂದು ಬಿಡುಗಡೆಯಾದ ಪ್ರಲ್ಹಾದ್‌ ಸಿನಿಮಾ ಫಿನೋಲೆಕ್ಸ್ ಇಂಡಸ್ಟ್ರೀಸ್‌ನ ಬೆಂಬಲದೊಂದಿಗೆ ಷ್‌ಬಾಂಗ್ ಮೋಷನ್ ಪಿಕ್ಚರ್ಸ್‌ ಇದನ್ನು ನಿರ್ಮಿಸಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಶಾರ್ಟ್‌ ಫಿಲಂ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಪ್ರಶಸ್ತಿ ವಿಜೇತ ಕಿರುಚಿತ್ರವು ಮಿಲಿಯನ್-ಡಾಲರ್ ಕಲ್ಪನೆಯನ್ನು ಹೊಂದಿದ್ದ ಪ್ರಲ್ಹಾದ್‌ ಅವರ ವ್ಯಕ್ತಿತ್ವಕ್ಕೆ ನೀಡಿದ ಗೌರವ ಕಾಣಿಕೆಯಾಗಿದೆ. ಅಷ್ಟೆ ಅಲ್ಲ, ಈ ಚಿತ್ರವು ಮುಂಬರುವ ಯುವ ಉದ್ಯಮಿಗಳು ಮತ್ತು ಭಾರತೀಯ ಮಾರುಕಟ್ಟೆಯ ಕುರಿತು ಪ್ರೇರಣಾತ್ಮಕವಾಗಿದೆ.


ಈ ಕಿರುಚಿತ್ರವು ಪ್ರಲ್ಹಾದ್‌ ಅವರ ಧರ್ಯ ಮತ್ತು ದೃಢತೆಗೆ ಹಿಡಿದ ಕೈಗನ್ನಡಿಯಾಗಿದೆ. 1945 ರಲ್ಲಿ ನಡೆದ ಪ್ರಲ್ಹಾದ್‌ ಅವರ ಜೀವನ ಘಟನೆಗಳ ಕಥಾರೂಪ ಈ ʼಪ್ರಲ್ಹಾದ್‌ʼ ಸಿನಿಮಾ. ಅಮೃತಸರದ 14 ವರ್ಷದ ಹುಡುಗ ಪ್ರಲ್ಹಾದ್‌ ತನ್ನ ತಂದೆಯ ಅಕಾಲಿಕ ಮರಣದ ನಂತರ ತನ್ನ ಕುಟುಂಬದ ಜವಾಬ್ದಾರಿ ಅವನ ಹೆಗಲ ಮೇಲೆ ಬಿದ್ದಾಗ ನಡೆಯುವ ಸಂಗತಿಗಳ ಕಥಾಹಂದರವೇ ಈ ಕಿರು ಚಿತ್ರ. ಫಿನೋಲೆಕ್ಸ್ ಗ್ರೂಪ್ ಎಂಬ ದೊಡ್ಡ ಸಂಸ್ಥೆಯನ್ನು ಹುಟ್ಟುಹಾಕಿದ ಯಶಸ್ವಿ ವ್ಯಕ್ತಿಯ ಮೌಲ್ಯಗಳನ್ನು ಪ್ರಸ್ತುತಪಡಿಸುವ ಈ ಕಥೆಯು ಸರಳ ಮನುಷ್ಯನ ಬುದ್ಧಿಶಕ್ತಿ ಮತ್ತು ಹೋರಾಟವನ್ನು ಬಿಚ್ಚಿಡುತ್ತದೆ. 


ಇದನ್ನೂ ಓದಿ: ತಿಮ್ಮಪ್ಪನ ಭಕ್ತರ ಗಮನಕ್ಕೆ : ಎರಡು ದಿನ ತಿರುಮಲ ದೇವಸ್ಥಾ ಬಂದ್!


ಪ್ರಲ್ಹಾದ್‌ ಚಿತ್ರಕ್ಕೆ ಭಾರತ ಮತ್ತು ಅಂತರಾಷ್ಟ್ರೀಯ ಮಟ್ಟದ ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಬಿಡುಗಡೆಯಾದ ದಿನ ಟ್ವಿಟರ್‌ನಲ್ಲಿ 'ಸೆಲೆಬ್ರೇಟಿಂಗ್ ಪ್ರಲ್ಹಾದ್' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ರೆಂಡಿಂಗ್ ಆಗಿತ್ತು. ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಯೂಟ್ಯೂಬ್‌ನಲ್ಲಿ ಪ್ರಥಮ ಪ್ರದರ್ಶನಗೊಂಡ ನಂತರ, ಚಲನಚಿತ್ರವು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ವಿಮರ್ಶೆ ಪಡೆದಿದೆ.


ಇನ್ನು  ಚಿತ್ರ ನಿರ್ಮಾಪಕ, ಸ್ಚ್‌ಬಾಂಗ್‌ (Schbang) ಸಂಸ್ಥಾಪಕ ಹರ್ಷಿಲ್‌ ಕರಿಯಾ ಅವರು ಸಿನಿಮಾದ ಕುರಿತು ಮಾತನಾಡಿ, ಮಾನವೀಯತೆ ಬಗ್ಗೆ ತಿಳಿ ಹೇಳುವ ಶಕ್ತಿಯುತ ಕತೆಗಳ ಹುಡುಕಾಟದಲ್ಲಿದ್ದ ನಮಗೆ ಪ್ರೇರಣೆಗಾಗಿದ್ದು, ಫಿನೋಲೆಕ್ಸ್ ಗ್ರೂಪ್‌ನ ಸಂಸ್ಥಾಪಕರಾದ ಶ್ರೀ ಪ್ರಲ್ಹಾದ್ ಪಿ ಛಾಬ್ರಿಯಾ ಅವರ ಜೀವನ. ಅವರ ಸಾಧನೆಯ ಕಥಾ ಹಂದರದ ಸಿನಿಮಾವನ್ನು ಪ್ರಪಂಚದಾತ್ಯಂತ ಹಂಚಿಕೊಳ್ಳಲು ಸಂತೋಷವಾಗಿದೆ. ಈ ಸಿನಿಮಾ ಉದ್ಯಮಿಗಳಿಗೆ ಅಧ್ಯಯನದ ಪಾಠವಾಗಲಿದೆ ಎಂದರು.


ಇದನ್ನೂ ಓದಿ: ಟಿ20 ವಿಶ್ವಕಪ್‌ ಟೀಂ ಇಂಡಿಯಾದಿಂದ ಬೌಲರ್ ದೀಪಕ್ ಚಹಾರ್ ಔಟ್!


ಪಿವಿಸಿ ಪೈಪ್‌, ನೀರಿನ ಟ್ಯಾಪ್‌, ಸ್ಯಾನಿಟರಿ ಪ್ರಾಡಕ್ಟ್‌ ಉತ್ಪಾದನೆಗೆ ದೇಶಾದ್ಯಂತ ಫಿನೋಲೆಕ್ಸ್ ಗ್ರೂಪ್ ಹೆಸರುವಾಸಿಯಾಗಿದೆ. ಅಲ್ಲದೆ, ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೆಷನ್‌ ಪ್ರಾಡಕ್ಟ್‌, ಕೇಬಲ್‌ಗಳು, ಪಾಲಿವಿನೈಲ್‌ ಕ್ಲೋರೈಡ್‌, ಹಾಳೆ, ಸಿಗ್ನಲ್ಸ್‌, ರೂಪ್ಸ್‌, ಹೀಗೆ ಮುಂತಾದ ವಸ್ತುಗಳ ತಯಾರಿಕೆಯಲ್ಲಿ ಫಿನೋಲೆಕ್ಸ್ ಗ್ರೂಪ್ ಫೇಮಸ್‌. ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿದ ಒಬ್ಬ ಯಶಸ್ವಿ ಉದ್ಯಮಿಯ ಆಲೋಚನಾ ಕ್ರಮವೇ 'ಪ್ರಲ್ಹಾದ' ಕಥೆಯ ಪ್ರತಿಧ್ವನಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.