ಮೊದಲ ವಿಶ್ವ ಸುಂದರಿ ಕಿಕಿ ಹಾಕಾನ್ಸನ್ 95ನೇ ವಯಸ್ಸಿನಲ್ಲಿ ನಿಧನ..!
Kiki Hakansson death : ಮೊದಲ ವಿಶ್ವ ಸುಂದರಿ ಸ್ವೀಡನ್ನ ಕಿಕಿ ಹಾಕಾನ್ಸನ್ ನವೆಂಬರ್ 4 ಸೋಮವಾರದಂದು ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಈ ಕುರಿತು ಕುಟುಂಬಸ್ಥರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಕಿಕಿ ವಯೋಸಹಜವಾಗಿ ನಿಧನರಾಗಿದ್ದಾರೆ.
Miss World Kiki Hakansson death : 17 ಜೂನ್ 1929 ರಂದು ಲಂಡನ್ನಲ್ಲಿ ಜನಿಸಿದ ಕಿಕಿ 1951 ರಲ್ಲಿ ಮಿಸ್ ಸ್ವೀಡನ್ ವರ್ಲ್ಡ್ ಸ್ಪರ್ಧೆಯನ್ನು ಗೆದ್ದರು. ಆಗಷ್ಟೇ ಪ್ರಾರಂಭವಾದ ವಿಶ್ವ ಸುಂದರಿ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದರು. ಲೈಸಿಯಮ್ ಥಿಯೇಟರ್ ಎಂದು ಕರೆಯಲ್ಪಡುವ ಲೈಸಿಯಮ್ ಬಾಲ್ ರೂಂನಲ್ಲಿ 29 ಜುಲೈ 1951 ರಂದು ವಿಶ್ವ ಸುಂದರಿ ಕರೀಟ ಕಿಕಿ ಮುಡಿಗೇರಿತು. ಆಗ ಅವರಿಗೆ 23 ವರ್ಷ ವಯಸ್ಸು.
ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರೂ, ಸ್ಪರ್ಧೆಯನ್ನು ಫೆಸ್ಟಿವಲ್ ಬಿಕಿನಿ ಸ್ಪರ್ಧೆ ಎಂದು ಹೆಸರಿಸಲಾಯಿತು, ಏಕೆಂದರೆ ಸಂಘಟಕ ಎರಿಕ್ ಮೊರ್ಲೆ ಅವರು ಬ್ರಿಟಿಷ್ ಉತ್ಸವದಲ್ಲಿ ಈಜುಡುಗೆಯನ್ನು ಪ್ರಚಾರ ಮಾಡುವ ಗುರಿಯನ್ನು ಹೊಂದಿದ್ದರು. ಬಿಕಿನಿಯಲ್ಲಿಯೇ ಕಿಕಿ ವಿಶ್ವ ಸುಂದರಿ ಕಿರೀಟ ಧರಿಸಿದ್ದರು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ:ಅಂದು ದರ್ಶನ್ ಪರ ಬ್ಯಾಟಿಂಗ್, ಇಂದು ದರ್ಶನ್ ವಿರುದ್ಧ FIR : ಬೂಟಿನ ಪೆಟ್ಟು ಗ್ಯಾರಂಟಿ ಅಂದ್ರು ಡೆವಿಲ್ ಫ್ಯಾನ್ಸ್..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ