Karnataka Assembly Election 2023 : ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. ರಂಗಭೂಮಿ ಹಿನ್ನಲೆಯಿಂದ ಬಂದ ಇವರು ಯಕ್ಷಗಾನ ಕಲೆಯಲ್ಲೂ ಪರಿಣಿತಿ ಪಡೆದಿದ್ದಾರೆ.`ರಿಕ್ಕಿ' ಚಿತ್ರದಿಂದ ಚಿತ್ರ ನಿರ್ದೇಶನಕ್ಕೆ ಇಳಿದ ಇವರು ಮುಂದೆ `ಕಿರಿಕ್ ಪಾರ್ಟಿ'ಯಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟರು. ಕೇರಳದ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಕುರಿತು ಇವರು ನಿರ್ದೇಶಿಸಿದ ಚಿತ್ರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ವ್ಯಾಪಕ ಮನ್ನಣೆ ಪಡೆಯಿತು.


COMMERCIAL BREAK
SCROLL TO CONTINUE READING

ಕಾಂತಾರ ನಾಯಕ ರಿಷಭ್‌ ಶೆಟ್ಟಿ ಅವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತಚಲಾವಣೆ ಮಾಡಿ "ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆ, ಮತ ಹಾಕುವುದು ನಮ್ಮ ಹಕ್ಕು, ಜವಾಬ್ದಾರಿ ಕೂಡ.. ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿಗಳ ಆಯ್ಕೆಗಾಗಿ ತಪ್ಪದೇ ಮತ ಚಲಾಯಿಸಿ. ನಮ್ಮ ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ನಾನು ಮತ ಹಾಕಿದ್ದೇನೆ. ನೀವು ಇನ್ನೂ ಮತ ಹಾಕಿದ್ದೀರಾ?" ಎಂದು ಬರೆದು ಪೋಟೋಗಳನ್ನು ಶೇರ್‌ ಮಾಡಿದ್ದಾರೆ. 


ಇದನ್ನೂ ಓದಿ-Karnataka Assembly Elections: ಮತಚಲಾಯಿಸಿ ಸೆಲ್ಫಿಗೆ ಫೋಸ್‌ ನೀಡಿದ ಸ್ಯಾಂಡಲುಡ್‌ ತಾರೆಯರು...


ಪ್ರಜಾಪ್ರಭುತ್ವದ ಪ್ರಜೆಯಾಗಿರುವ ನಾವು ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ಮತಚಲಾವಣೆ ಮಾಡಬೇಕು. ಅದು ನಮ್ಮ ಹಕ್ಕು ಮತ್ತು ಜವಾಬ್ದಾರಿ ಕೂಡ ಹೌದು. ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ನೀವು ಮತಹಾಕಿ ಎಂದು ಕಳಕಳಿಯಿಂದ ಬರೆದುಕೊಂಡಿದ್ದಾರೆ. ರಾಜ್ಯದಲ್ಲಿ 18 ವರ್ಷ ತುಂಬಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾನವನ್ನು ಮಾಡಲೇ ಬೇಕು ಅದು ನಮ್ಮ ವ್ಯಕ್ತಿ ಸ್ವಾತಂತ್ರ್ಯ ಇದ್ದಹಾಗೇ ಎಂದಿದ್ದಾರೆ.


ರಿಷಬ್‌ ಶೆಟ್ಟಿ ಅವರು ಈ ಹಿಂದೆ ಆಕಸ್ಮಿಕವಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೇಟಿಯಾಗಿದ್ದರು, ಆ ಪೋಟೋಗಳನ್ನು ಅವರು ಶೇರ್‌ ಮಾಡಿ ಇದರಲ್ಲಿ ಯಾವದೇ ರಾಜಕೀಯ ಆಯಾಮಗಳಿಲ್ಲ, ರಾಜಕೀಯವಾಗಿ ಬೇಟಿಯಾಗಿರುವುದಲ್ಲ, ಇದು ಆಕಸ್ಮಿಕ ಬೇಟಿ ಎಂದು ಬರೆದುಕೊಂಡಿದ್ದರು. ಸಾಕಷ್ಟು ನಟ ನಟಿಯರು ಪಕ್ಷಗಳ ಪರ ಪ್ರಚಾರಕ್ಕೆ ಇಳಿದಿದ್ದರು ಆದರೆ ರಿಷಬ್‌ ಶೆಟ್ಟಿ ಅವರು ಯಾವುದೇ ನಿರ್ದಿಷ್ಟ ಪಕ್ಷವನ್ನು ಪ್ರತಿನಿಧಿಸಿಲ್ಲ. 


ಇದನ್ನೂ ಓದಿ-ದಶಕದ ಸಂಭ್ರಮದಲ್ಲಿ ʼಬುಲ್‌ ಬುಲ್‌ʼ, ಗುಳಿಕೆನ್ನೆ ಬೆಡಗಿಯ ಹತ್ತು ವರ್ಷದ ಸಿನಿ ಜರ್ನಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.