ದಶಕದ ಸಂಭ್ರಮದಲ್ಲಿ ʼಬುಲ್‌ ಬುಲ್‌ʼ, ಗುಳಿಕೆನ್ನೆ ಬೆಡಗಿಯ ಹತ್ತು ವರ್ಷದ ಸಿನಿ ಜರ್ನಿ

Rachita Ram : ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರು ಕನ್ನಡ ಚಿತ್ರರಂಗದಲ್ಲಿ 10 ವರ್ಷ ಪೊರೈಸಿದ್ದಾರೆ. ಗುಳಿ ಕೆನ್ನೆ ಬೆಡಗಿ ರಚ್ಚು ʼಬುಲ್‌ ಬುಲ್‌ʼ ಸಿನಿಮಾ ಮೂಲಕ ಕನ್ನಡ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇದೀಗ ಈ ಸಿನಿಮಾಗೆ ದಶಕದ ಸಂಭ್ರಮ.  

Written by - Zee Kannada News Desk | Last Updated : May 10, 2023, 11:28 AM IST
  • ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಜೊತೆ ತಮ್ಮ ಮೊದಲ ಸಿನಿಮಾದಲ್ಲಿ ತೆರೆ ಹಂಚಿಕೊಂಡ ನಟಿ ಇವರು
  • ಇವರು ಸ್ಯಾಂಡಲ್‌ವುಡ್‌ನ ಎಲ್ಲಾ ಸ್ಟಾರ್‌ ನಟರ ಜೊತೆ ನಟಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
  • ಕಿರುತೆರೆಯಿಂದ ಬೆಳ್ಳಿತೆರೆಗೆ ಆಗಮಿಸಿ ಗೆದ್ದವರಲ್ಲಿ ಇವರು ಒಬ್ಬರು.
ದಶಕದ ಸಂಭ್ರಮದಲ್ಲಿ ʼಬುಲ್‌ ಬುಲ್‌ʼ, ಗುಳಿಕೆನ್ನೆ ಬೆಡಗಿಯ ಹತ್ತು ವರ್ಷದ ಸಿನಿ ಜರ್ನಿ title=

Bul Bul Film : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಜೊತೆ ತಮ್ಮ ಮೊದಲ ಸಿನಿಮಾದಲ್ಲಿ ತೆರೆ ಹಂಚಿಕೊಂಡ ನಟಿ ಇವರು. ಇನ್ನು ಇವರು ಸ್ಯಾಂಡಲ್‌ವುಡ್‌ನ ಎಲ್ಲಾ ಸ್ಟಾರ್‌ ನಟರ ಜೊತೆ ನಟಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಈ ನಟಿ ಇಂದಿಗೂ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಆಗಮಿಸಿ ಗೆದ್ದವರಲ್ಲಿ ಇವರು ಒಬ್ಬರು.

ಎಂ. ಡಿ ಶ್ರೀಧರ್‌ ಅವರ ನಿರ್ದೇಶನದ ʼಬುಲ್‌ ಬುಲ್‌ʼ ಸಿನಿಮಾ 2013 ಮೇ 10ರಂದು ಸೆಟ್ಟೆರಿತ್ತು. ಈ ಚಿತ್ರದಲ್ಲಿ ಕಾವೇರಿ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು. ಇದೇ ಸಿನಿಮಾದಿಂದ ಶುರುವಾದ ಅವರ ಸಿನಿಜರ್ನಿ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡುತ್ತಾ, ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 

ಇದನ್ನೂ ಓದಿ-Photos: ಪಡ್ಡೆ ಹುಡುಗರ ಹುಬ್ಬೆರಿಸುವಂತಿದೆ ಈ ನಟಿಯ ಮಾದಕ ನೋಟ...!

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ನಂತರ ಕನ್ನಡ ಚಿತ್ರರಂಗದಲ್ಲಿ ಭಾಋಇ ಬೇಡಿಕೆಯಿರುವ ನಟಿ ಅಂದರೇ ಅದು ರಚಿತಾ ರಾಮ್.‌ ಇವರು ಶಿವರಾಜ್‌ ಕುಮಾರ್‌, ಉಪೇಂದ್ರ, ಸುದೀಪ್‌, ಪುನೀತ್‌ ರಾಜ್ ಕುಮಾರ್‌, ಬಹುತೇಕ ನಟರ ಜೊತೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಐಟಂ ಸಾಂಗ್‌ಗಳಲ್ಲಿಯೂ ರಚಿತಾ ರಾಮ್‌ ಹೆಜ್ಜೆ ಹಾಕಿದ್ದಾರೆ.

ಕಿರುತೆರೆಯಲ್ಲಿ ʼಬೆಂಕಿಯಲ್ಲಿ ಅರಳಿದ ಹೂʼ ಹಾಗೂ ʼಅರಸಿʼ ಧಾರಾವಾಹಿಯಲ್ಲಿ ನಟಿಸಿದ ರಚ್ಚು ʼಬುಲ್‌ ಬುಲ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ಇವರ ಮೊದಲ ಹೆಸರು ಬಿಂದಿಯಾ ರಾಮ್‌ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಅವರು ತಮ್ಮ ಹೆಸರನ್ನು ರಚಿತಾ ರಾಮ್‌ ಎಂದು ಬದಲಾಯಿಸಿಕೊಂಡರು. ಇವರು ಭರತನಾಟ್ಯವನ್ನು ಬಲ್ಲವರಾಗಿದ್ದರು.

ಕಿರುತೆರೆಯಲ್ಲಿ ಡ್ರಾಮಾ ಜ್ಯೂನಿಯರ್ಸ್‌, ಸೂಪರ್‌ ಕ್ವೀನ್‌, ಮಜಾಭಾರತ್‌ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಶಕಗಳು ಕಳೆದರೂ ಇಂದಿಗೂ ಬೇಡಿಯ ನಟಿಯಾಗಿಯೇ ಉಳಿದುಕೊಂಡಿದ್ದಾರೆ. ಇನ್ನು ಹೆಚ್ಚು ಹೆಚ್ಚು ಹಿಟ್‌ ಸಿನಿಮಾಗಳನ್ನು ಸಿನಿರಸಿಕರಿಗೆ ನೀಡುವವರಿದ್ದಾರೆ ರಚಿತಾ ರಾಮ್.‌ 

ಇದನ್ನೂ ಓದಿ-ಜವಾನ್ ಬಗ್ಗೆ ಬಾಲಿವುಡ್ ಕಿಂಗ್ ಖಾನ್ ಹೇಳಿದ್ದೇನು:?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂ

Trending News