Mia Khalifa shocking revelation: ಮಿಯಾ ಖಲೀಫಾ ಈಗ ವಯಸ್ಕ ಚಿತ್ರರಂಗದಿಂದ ದೂರವಾಗಿದ್ದಾರೆ. ಆದರೆ ಒಂದು ಕಾಲದಲ್ಲಿ ನೀಲಿ ಚಿತ್ರದ ಜಗತ್ತಿನ ರಾಣಿಯಾಗಿದ್ದರು ಮಿಯಾ ಖಲೀಫಾ. ವಯಸ್ಕ ತಾರೆಯಾಗಿ ಮಿಯಾ ಖಲೀಫಾ ತನ್ನ ಪ್ರಯಾಣವನ್ನು ಹೇಗೆ ಪ್ರಾರಂಭಿಸಿದರು, ಯಾಕೆ ಇಂತಹ ರಂಗವನ್ನು ಆಯ್ಕೆ ಮಾಡಬೇಕಾಯಿತು ಎಲ್ಲವನ್ನೂ ಇಂದು ನಾವು ನಿಮಗೆ ಹೇಳಲಿದ್ದೇವೆ. 


COMMERCIAL BREAK
SCROLL TO CONTINUE READING

ಮಿಯಾ ಖಲೀಫಾ ವಯಸ್ಕರ ಉದ್ಯಮದಲ್ಲಿ ಕೆಲವು ಸಮಯ ಮಾತ್ರ ಕೆಲಸ ಮಾಡಿದರು. ಆದರೆ ಅವಳ ಬ್ಯೂಟಿಗೆ ಅನೇಕ ಯುವಕರು ಫಿದಾ ಆದರು. ನೀಲಿ ಜಗತ್ತಿನ ಕ್ವೀನ್‌ ಆಗಿ ಮಿಂಚಿದಳು. ಈಗ, ತನ್ನ ಪ್ರಯಾಣವನ್ನು ಹಿಂತಿರುಗಿ ನೋಡಿದಾಗ, ಇದು ತನ್ನ 'ದೊಡ್ಡ ತಪ್ಪುಗಳಲ್ಲಿ' ಒಂದು ಎಂದು ಮಿಯಾ ಖಲೀಫಾಗೆ ಅನಿಸುತ್ತಿದೆಯಂತೆ.   


ಇದನ್ನೂ ಓದಿ :  ಪುಷ್ಪ 2 ಸಿನಿಮಾದಲ್ಲಿನ ರಶ್ಮಿಕಾ ಮಂದಣ್ಣ ಸೀನ್ ಲೀಕ್!


ಮಿಯಾ ಖಲೀಫಾ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಆಕೆಯ ಮಾಜಿ ಪತಿಯಿಂದ ವಯಸ್ಕ ಉದ್ಯಮಕ್ಕೆ ಹೋಗಲು ಒತ್ತಡ ಹೇರಲಾಯಿತು ಎಂದು ತಿಳಿಸಿದ್ದಾರೆ. ಇತ್ತಿಚೆಗೆ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ ಮಿಯಾ ಖಲೀಫಾ, ತನ್ನ ನಿಜವಾದ ಹೆಸರು ಸಾರಾ ಜೋ ಚಾಮೌನ್ ಮತ್ತು ಆ ಹೆಸರಿನಿಂದಲೇ ಗುರುತಿಸಿಕೊಳ್ಳುವುದು ತಮಗೆ ಇಷ್ಟ ಎಂದು ಹೇಳಿದ್ದಾರೆ. ತನ್ನ ಗತಕಾಲದ ಬಗ್ಗೆ ಮಾತನಾಡುತ್ತಾ, ಆಕೆ 'ಅತ್ಯಂತ ನಿಂದನೀಯ' ಸಂಬಂಧವನ್ನು ಹೊಂದಿದ್ದರು. ಆಕೆಯ ಮಾಜಿ ಪತಿಯಿಂದ ವಯಸ್ಕ ಉದ್ಯಮಕ್ಕೆ ದೂಡಿದರು ಎಂದಿದ್ದಾರೆ.


ಅನೇಕ ಹುಡುಗಿಯರು ತಮ್ಮ ಚಿಕ್ಕ ವಯಸ್ಸಿನಲ್ಲಿ ವಯಸ್ಕ ಉದ್ಯಮದ ಭಾಗವಾಗುತ್ತಾರೆ ಎಂದು ಮಿಯಾ ಹೇಳಿದರು. ನನ್ನ 18 ನೇ ಹುಟ್ಟುಹಬ್ಬದ ನಾಲ್ಕು ದಿನಗಳ ನಂತರ ಲಾಸ್ ವೇಗಾಸ್‌ಗೆ ಓಡಿಹೋಗುವ ಬಗ್ಗೆ ಮಾತನಾಡಲಾಯಿತು. ನನಗೆ ನನ್ನ ಭಾವನೆಗಳ ಅರಿವು ಇರಲಿಲ್ಲ, ಆದ್ದರಿಂದ ನಾನು ತಪ್ಪು ಮಾಡಿದೆ ಮತ್ತು ಸುಲಭವಾಗಿ ಮೋಹಕ್ಕೆ ಒಳಗಾಗಿದ್ದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಜೂ.ಎನ್‌ಟಿಆರ್‌ ಆಸ್ತಿ ಮೌಲ್ಯ ಎಷ್ಟು ನೂರಾರು ಕೋಟಿ ಗೊತ್ತಾ?


ಆ ಸಮಯದಲ್ಲಿ US ಸೈನ್ಯದಲ್ಲಿದ್ದ ತನ್ನ ಸಂಗಾತಿ ವಯಸ್ಕ ಉದ್ಯಮಕ್ಕೆ ಸೇರುವಂತೆ ತನ್ನನ್ನು ಒತ್ತಾಯಿಸಿದನು ಎಂದು ಮಿಯಾ ಹೇಳಿಕೊಂಡಿದ್ದಾರೆ. ಆ ಇಡೀ (ಅಶ್ಲೀಲ) ಜಗತ್ತನ್ನು ನನಗೆ ಪರಿಚಯಿಸಿದವರು ಮತ್ತು ನಿಧಾನವಾಗಿ ಅದರೊಳಗೆ ಹೋಗಲು ನನ್ನನ್ನು ಸಿದ್ಧಪಡಿಸಿದವರು ಅವರೇ. ಅದನ್ನು ಸಂಬಂಧ ಎಂದು ಕರೆಯಲು ಸಹ ನನಗೆ ವಿಚಿತ್ರವೆನಿಸುತ್ತದೆ, ಏಕೆಂದರೆ ಅದು ಸಂಬಂಧವಾಗಿರಲಿಲ್ಲ. ಇದು ಯಾರೋ ಆಟವಾಡಲು ಆಟಿಕೆ ಕಂಡುಕೊಂಡಂತೆ ಎಂದು ಹೇಳಿದ್ದಾರೆ.


ಮಿಯಾ ತಮ್ಮ 'ಹಿಜಾಬ್ ದೃಶ್ಯ'ದ ಮೂಲಕ ಏಲ್ಲೆಡೆ ಸುದ್ದಿಯಾಗಿದ್ದರು. ಬುರ್ಖಾ ಧರಿಸಿರುವ ಅಶ್ಲೀಲ ವೀಡಿಯೋ ವೈರಲ್ ಆಗಿದ್ದು, ಆಕೆಗೆ ನಂತರ ಭಯೋತ್ಪಾದಕ ಸಂಘಟನೆ ಐಸಿಸ್ ನಿಂದ ಜೀವ ಬೆದರಿಕೆ ಹಾಕಲಾಗಿತ್ತು.  


ಇದನ್ನೂ ಓದಿ : ʼದಿ ಕೇರಳ ಸ್ಟೋರಿʼ ಕಾಲ್ಪನಿಕ ಕಥೆ ಎಂದು ಅಳವಡಿಸಲು ಸೂಚಿಸಿದ ಸುಪ್ರಿಂ ಕೋರ್ಟ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ