ʼದಿ ಕೇರಳ ಸ್ಟೋರಿʼ ಕಾಲ್ಪನಿಕ ಕಥೆ ಎಂದು ಅಳವಡಿಸಲು ಸೂಚಿಸಿದ ಸುಪ್ರಿಂ ಕೋರ್ಟ್‌

The Kerala Story : ವಿವಾದಾತ್ಮಕ ಸಿನಿಮಾ ʼದಿ ಕೇರಳ ಸ್ಟೋರಿʼ ಸಿನಿಮಾ 32000 ಮಹಿಳೆಯರನ್ನು ಬಲವಂತದಿಂದ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಮತ್ತು ಭಯಾನಕ ಭಯೋತ್ಪಾಧನಾ ಗುಂಪುಗಳಿಗೆ ಸೇರಿಸಲಾಗುತ್ತದೆ. ಎಂಬ ಕಥಾಹಂದರ ಹೊಂದಿರುವ ಸಿನಿಮಾವನ್ನು ಇದೀಗ ಸುಪ್ರಿಂಕೊರ್ಟ್‌ ಪ್ರಶ್ನಿಸಿದೆ.   

Written by - Zee Kannada News Desk | Last Updated : May 20, 2023, 08:58 AM IST
  • ʼದಿ ಕೇರಳ ಸ್ಟೋರಿʼ ಸಿನಿಮಾ ಸಾಕಷ್ಟು ವಿವಾದಗಳನ್ನು ಮೀರಿ ತೆರೆ ಮೇಲೆ ಬಂದಿದೆ
  • ಬಿಡುಗಡೆಯಾದ ಕೆಲವು ದಿನಗಳಲ್ಲಿಯೇ ಕೆಲವು ಕಡೆಗಳಲ್ಲಿ ಈ ಸಿನಿಮಾವನ್ನು ನಿಷೇದ ಮಾಡಲಾಗಿದೆ.
  • ಅನೇಕ ರಾಜಕೀಯ ಮುಖಂಡರು ಈ ಸಿನಿಮಾ ನಿಷೇಧ ಕುರಿತು ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿದ್ದರು.
ʼದಿ ಕೇರಳ ಸ್ಟೋರಿʼ ಕಾಲ್ಪನಿಕ ಕಥೆ ಎಂದು ಅಳವಡಿಸಲು ಸೂಚಿಸಿದ ಸುಪ್ರಿಂ ಕೋರ್ಟ್‌ title=

Supreme Court : ಹೌದು ʼದಿ ಕೇರಳ ಸ್ಟೋರಿʼ ಸಿನಿಮಾ ಸಾಕಷ್ಟು ವಿವಾದಗಳನ್ನು ಮೀರಿ ತೆರೆ ಮೇಲೆ ಬಂದಿದೆ. ಅಲ್ಲದೇ ಬಿಡುಗಡೆಯಾದ ಕೆಲವು ದಿನಗಳಲ್ಲಿಯೇ ಕೆಲವು ಕಡೆಗಳಲ್ಲಿ ಈ ಸಿನಿಮಾವನ್ನು ನಿಷೇದ ಮಾಡಲಾಗಿದೆ. ಈ ಸಿನಿಮಾ ರಾಜಕೀಯದಲ್ಲೂ ವಿವಾದಗಳನ್ನು ಸೃಷ್ಟಿ ಮಾಡಿತ್ತು. ಅನೇಕ ರಾಜಕೀಯ ಮುಖಂಡರು ಈ ಸಿನಿಮಾ ನಿಷೇಧ ಕುರಿತು ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿದ್ದರು.

ಪಶ್ಚಿಮ ಬಂಗಾಳದಲ್ಲಿ ಸಿನಿಮಾವನ್ನು ನಿಷೇದ ಮಾಡಲಾಗಿತ್ತು ಜೊತೆಗೆ ತಮಿಳುನಾಡಿನಲ್ಲಿ ಪರೋಕ್ಷ ನಿಷೇದದ ವಿರುದ್ಧ ʼದಿ ಕೇರಳ ಸ್ಟೋರಿʼ ಸಿನಿಮಾ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಗುರುವಾರ ವಿಚಾರಣೆಗೆ ತೆಗೆದುಕೊಂಡಿತ್ತು. 

ಇದನ್ನೂ ಓದಿ-ಫ್ಯಾನ್ಸ್‌ಗೆ ಬಿಗ್‌ ಗಿಫ್ಟ್‌ ನೀಡಿದ NTR : ಬರ್ತ್‌ ಡೇಗೂ ಮುನ್ನವೇ ʼDevaraʼ ಟೈಟಲ್‌ ರಿವೀಲ್‌ 

ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿಎಸ್‌ ನರಸಿಂಹ ಮತ್ತು ಜೆಬಿ ಪರ್ಡಿವಾಲಾ ಅವರನ್ನು ಹೊಂದಿದ ನ್ಯಾಯಪೀಠವು ʼಈ ಸಿನಿಮಾ ಕಾಲ್ಪನಿಕ ಕಥೆಯಾಗಿದ್ದು, ಕಲ್ಪನೆಯ ಆವೃತ್ತಿಯನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಡಿಸ್‌ಕ್ಲೈಮರ್‌ನಲ್ಲಿ ಸ್ಪಷ್ಟಪಡಿಸಿʼಎಂದು ನಿರ್ಮಾಪಕರಿಗೆ ಸುಪ್ರಿಂಕೋರ್ಟ್‌ ಸೂಚನೆ ನೀಡಿದೆ. 

ʼಮತಾಂತರ ಮಾಡಲಾದ ಮಹಿಳೆಯರ ಸಂಖ್ಯೆಯು 32000 ಎಂದು ಹೇಳಲು ಯಾವುದೇ ಅಧಿಕೃತ ದಾಖಲೆಗಳಿಲ್ಲ ಅಥವಾ ಬೇರೆ ಯಾವುದೇ ನಿಖರ ಅಂಕಿ ಅಂಶಗಳಿಲ್ಲ ಎಂಬುದನ್ನು ಮೇ 20ರಂದು ಸಣಜೆ 5ಗಂಟೆಗೆ ಒಳಗಾಗಿ ಸಿನಿಮಾದ ಡಿಸ್‌ಕ್ಲೈಮರ್‌ನಲ್ಲಿ ಸ್ಪಷ್ಟಪಡಿಸಿʼ ಎಂದು ಸುಪ್ರಿಂಕೋರ್ಟ್‌ ಆದೇಶ ನೀಡಿದೆ. 

ಇದನ್ನೂ ಓದಿ-ತಿರುಪತಿ ಸನ್ನಿಧಿಯಲ್ಲಿ ಸ್ಯಾಂಡಲ್‌ವುಡ್‌ ಸುಂದರಿ ನಿಶ್ವಿಕಾ ನಾಯ್ಡು..! ಫೋಟೋಸ್‌ ನೋಡಿ

ʼದಿ ಕೇರಳ ಸ್ಟೋರಿʼ ಚಿತ್ರ ಪ್ರದರ್ಶನವನ್ನು ಪಶ್ಚಿಮಬಂಗಾಳ ನಿಷೇಧ ಮಾಡಿತ್ತು. ಸುಪ್ರಿಂಕೊರ್ಟ್‌ ಇದಕ್ಕೆ ತಡೆ ನೀಡಿತ್ತು. ʼಸಾರ್ವಜನಿಕರ ಅಸಹಿಷ್ಣುತೆಗೆ ಶಾಸನಬದ್ಧ ನಿಬಂಧನೆಗಳನ್ನು ಬಳಸಲಾಗದುʼ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ ತಿಂಗಳಿಗಳಿಗೆ ಮುಂದೂಡಿದೆ. ʼಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆʼ ಎಂದು ನ್ಯಾಯಾಲಯ ಹೇಳಿಕೆ ನೀಡಿದ್ದು, ʼಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರ ಮಂದಿರಗಳಲ್ಲಿ ಸಾಕಷು ಬಿಗಿ ಭದ್ರತೆ ನೀಡಿ, ಪ್ರೇಕ್ಷಕರ ಸುರಕ್ಷತೆಯನ್ನು ತಿಳಿದುಕೊಳ್ಳಲು ಸಗತ್ಯವಾದ ಕ್ರಮಗಳನ್ನು ಅಳವಡಿಸಬೇಕುʼ ಎಂದು ನ್ಯಾಯಪೀಠ ತಿಳಿಸಿದೆ.  

 

 

 

 

Trending News