ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಾಜಿ ಮಿಸ್ ಇಂಡಿಯಾ ಅರ್ಥ್ 2014 ಮತ್ತು ನಟಿ ಅಲಂಕೃತ ಸಹಾಯ್ ಅವರು ಹೊಸದಾಗಿ ಸ್ಥಳಾಂತರಗೊಂಡ ಬಾಡಿಗೆ ವಸತಿಗೃಹದಲ್ಲಿದ್ದಾಗ ದರೋಡೆಕೋರರು ನುಗ್ಗಿ ಅವರಿಂದ ಆರು ಲಕ್ಷ ರೂಗಳನ್ನು ದೋಚಿ ಪರಾರಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2021 ಪ್ರಿಯರಿಗೆ ಬಿಗ್ ನ್ಯೂಸ್ : 2ನೇ ಹಂತದ IPL ಬಗ್ಗೆ ಮಹತ್ವದ ನಿರ್ಧಾರಕ್ಕೆ ಮುಂದಾದ BCCI


ದಿ ಟ್ರಿಬ್ಯೂನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಘಟನೆಯು ಚಂಡೀಗಡದ ಸೆಕ್ಟರ್ 27 ರಲ್ಲಿ ನಡೆಯಿತು ಮತ್ತು ಅದು ಕೂಡ ಹಗಲು ಹೊತ್ತಿನಲ್ಲಿ ನಟಿ ಅಲಂಕೃತ ತನ್ನ ಕೆಲಸದಾಕೆ ಬರಲು ಬಾಗಿಲು ತೆರೆದಿದ್ದಳು.ಮಧ್ಯಾಹ್ನ 12.30 ರ ಸುಮಾರಿಗೆ 3 ಮಂದಿ ಶಂಕಿತರು ಆಕೆಯ ಫ್ಲ್ಯಾಟ್‌ಗೆ ನುಗ್ಗಿ ಅವರಲ್ಲಿ ಒಬ್ಬರು ಆಕೆಯನ್ನು ಬೆದರಿಸಲು ಮನೆಯಿಂದ ಚಾಕುವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಇದೆ ವೇಳೆ ಆಕೆಯ ಮೇಲೆ ಹಲ್ಲೆಯನ್ನು ಮಾಡಲಾಗಿದೆ ಎನ್ನಲಾಗಿದೆ.


ನಟಿ ಅಲಂಕೃತ ಸಹಾಯ್ (Alankrita Sahai) ಮತ್ತು ಆಕೆಯ ಪೋಷಕರು ಒಂದು ತಿಂಗಳ ಹಿಂದೆ ನಗರಕ್ಕೆ ತೆರಳಿದ್ದರು ಮತ್ತು ಘಟನೆ ನಡೆದಾಗ ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು.ವರದಿಯ ಪ್ರಕಾರ, ಆಕೆಯ ಪೋಷಕರು ಕಳೆದ ಹತ್ತು ದಿನಗಳಿಂದ ಮನೆಯಲ್ಲಿ ಇದ್ದಿರಲಿಲ್ಲ ಎನ್ನಲಾಗಿದೆ.


ಇದನ್ನೂ ಓದಿ: ವೇಗದ ಬೌಲರ್ ಮೊಹಮ್ಮದ್ ಸಿರಾಜ್ ನಿರ್ಧಾರಕ್ಕೆ ಸೌರವ್ ಗಂಗೂಲಿ ಸೆಲ್ಯೂಟ್


ದಿ ಟ್ರಿಬ್ಯೂನ್ ವರದಿ ಪ್ರಕಾರ ಶಂಕಿತರು ಆಕೆಯ ಎಟಿಎಂ ಕಾರ್ಡ್‌ಗಳು, ಪಿನ್ ಕೋಡ್ ಅನ್ನು ತೆಗೆದುಕೊಂಡಿದ್ದು ಮತ್ತು ಅವರಲ್ಲಿ ಒಬ್ಬರು 20,000 ರೂ. ನಗದನ್ನು ತೆಗೆದುಕೊಂಡರು. ನಟಿ ಮೊದಲು ಹೇಗೋ ಒಂದು ಕೋಣೆಯಲ್ಲಿ ನಂತರ ವಾಶ್‌ರೂಮ್‌ಗೆ ಬೀಗ ಹಾಕುವಲ್ಲಿ ಯಶಸ್ವಿಯಾದರು.ಆದರೆ ಬೆದರಿಕೆಯನ್ನು ಮುಂದುವರಿಸಿದ ನಂತರ 6 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.ಪೊಲೀಸರು ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದ್ದಾರೆ.


"ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತರಲ್ಲಿ ಒಬ್ಬರು ಇತ್ತೀಚೆಗೆ ಖರೀದಿಸಿದ ಪೀಠೋಪಕರಣಗಳನ್ನು ತಲುಪಿಸಲು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ಟ್ರಿಬ್ಯೂನ್‌ಗೆ ತಿಳಿಸಿದರು.


ಈಗ ಚಂಡೀಗಡದ ಸೆಕ್ಟರ್ 26 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ಕುರಿತು ಅಲಂಕೃತ ಮಾಧ್ಯಮಗಳಿಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಎನ್ನಲಾಗಿದೆ.ನಟಿ ಅಲಂಕೃತ ಸಹಾಯ್ ಕೊನೆಯದಾಗಿ ಅರ್ಜುನ್ ಕಪೂರ್ ನಟನೆಯ 'ನಮಸ್ತೆ ಇಂಗ್ಲೆಂಡ್' ನಲ್ಲಿ ಕಾಣಿಸಿಕೊಂಡರು ಮತ್ತು ಜಸ್ಕಿ ಗಿಲ್ ಜೊತೆ ಕೋಕಾ, ಅಲ್ಲಾ ವೆ ಮುಂತಾದ ಹಲವಾರು ಸಂಗೀತ ವೀಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: ಸೌರವ್ ಗಂಗೂಲಿ ಟಿ-20 ಮಾದರಿಗೆ ‌ಹೊಂದಿಕೆಯಾಗಲಿಲ್ಲ-ಜಾನ್ ಬುಕಾನನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.