ಬೆಂಗಳೂರು: ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ‘ಗೆಹರಾಯಿಯಾ’ ಸಿನಿಮಾ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ‘ಅಮೇಜಾನ್​ ಪ್ರೈಂ’(Amezon Prime)ನಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡಿದ್ದರೆ, ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಶಕುನ್ ಭಾತ್ರ ನಿರ್ದೇಶಿಸಿರುವ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ನಟ ಸಿದ್ಧಾಂತ್ ಚತುರ್ವೇದಿ ಬೋಲ್ಡ್ ಆಗಿ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಯುವಕ-ಯುವತಿಯರ ಸಂಬಂಧಗಳು ಯಾವ ಹಂತ ತಲುಪಿವೆ ಅನ್ನೋದರ ಕಥಾಹಂದರವನ್ನು ‘ಗೆಹರಾಯಿಯಾ’ ಸಿನಿಮಾ(Gehraiyaan Movie) ಹೊಂದಿದೆ. ಈ ಚಿತ್ರವನ್ನು ವೀಕ್ಷಿಸಿರುವ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್(Bhaskar Rao) ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಿರುವ ಕಾರಣ ಅವರಿಗೆ ಪೂರ್ತಿ ಸಿನಿಮಾ ನೋಡಲು ಸಾಧ‍್ಯವಾಗಿಲ್ಲವಂತೆ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಹೊಸಬರ 'ಕನ್ನೇರಿ' ಪ್ರಯತ್ನಕ್ಕೆ ಕಂಚಿನ ಕಂಠದ ವಸಿಷ್ಠ ಸಿಂಹ ಸಾಥ್..!


‘ಗೆಹರಾಯಿಯಾ’(Gehraiyaan) ಚಿತ್ರ ವೀಕ್ಷಿಸಿದ ಬಳಿಕ ಟ್ವೀಟ್ ಮಾಡಿರುವ ಭಾಸ್ಕರ್​ ರಾವ್, ‘ನಾವು ‘ಗೆಹರಾಯಿಯಾ’ ಸಿನಿಮಾ ನೋಡಲು ಪ್ರಾರಂಭಿಸಿದೆವು. 20 ನಿಮಿಷದ ಬಳಿಕ ಸಿನಿಮಾ ನೋಡುವುದನ್ನು ನಿಲ್ಲಿಸಿದೆವು. ನಾನು ಕೂಡ ನಟಿ ದೀಪಿಕಾ ಪಡುಕೋಣೆಯವರ ಅಭಿಮಾನಿ. ಅವರು ನಮ್ಮ ಬೆಂಗಳೂರಿನ ಹುಡುಗಿ. ಲಕ್ಷಾಂತರ ಮಹಿಳೆಯರು-ಯುವತಿಯರು ಅವರನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ವಿವಾಹೇತರ ಸಂಬಂಧ, ಸಂಸಾರ ಒಡೆಯುವುದು ಇಂಥದ್ದನ್ನೆಲ್ಲ ಕೆಲವರು ಸರಿ ಎನ್ನಬಹುದು. ಆದರೆ ಅದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ನಾನು ಹಳೇ ಕಾಲದ ವ್ಯಕ್ತಿ ಅಂತಾ ನಿಮಗೆ ಅನ್ನಿಸಬಹುದು’ ಎಂದು ಹೇಳಿದ್ದಾರೆ.


BS Yediyurappa: ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ ಬಿ.ಎಸ್.ಯಡಿಯೂರಪ್ಪ


ಒಟ್ನಲ್ಲಿ ನಟಿ ದೀಪಿಕಾ ಪಡುಕೋಣೆ(Deepika Padukone)ಯವರ ‘ಗೆಹರಾಯಿಯಾ’ ಸಿನಿಮಾ ಬೋಲ್ಡ್ ಸೀನ್ ಗಳಿಂದ ಸಖತ್ ಸುದ್ದಿಯಲ್ಲಿದೆ. ಅತಿಯಾಗಿ ಹಸಿಬಿಸಿ ದೃಶ್ಯಗಳನ್ನು ತೋರಿಸುವುದು ಸರಿಯಲ್ಲ, ಇಂದಿನ ಯುವ ಸಮುದಾಯಕ್ಕೆ ನಾವು ರಿಲೇಷನ್​ಶಿಪ್​ ಬಗ್ಗೆ ಪಾಸಿಟಿವ್ ಸಂದೇಶ ನೀಡಬೇಕು ಅಂತಾ ಹೇಳಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.