Central Government on Movie Piracy : ಕೆಲವು ವರ್ಷಗಳ ಹಿಂದೆ ಸಿಡಿ, ಡಿವಿಡಿ ಡಿಸ್ಕ್‌ಗಳ ಮೂಲಕ ಜನರ ಕೈ ಸೇರುತ್ತಿದ್ದ ಹೊಸ ಚಿತ್ರಗಳ ಥಿಯೇಟರ್ ಪ್ರಿಂಟ್ ಮತ್ತು ಲೀಕ್ ಆದ ಕಾಪಿಗಳು ಸದ್ಯ ಇಂಟರ್‌ನೆಟ್‌ ಜಮಾನಾದಲ್ಲಿ ಸರಳವಾಗಿ ಯಾವುದೇ ಕಷ್ಟವಿಲ್ಲದೇ ಬಳಕೆದಾರರ ಮೊಬೈಲ್ ಗೆ ಬಂದು ಬೀಳುತ್ತೆ.


COMMERCIAL BREAK
SCROLL TO CONTINUE READING

ಇಷ್ಟು ಸರಳವಾಗಿ ಸಿಗುವ ಪೈರಸಿ ಕಾಪಿಯನ್ನು ಕೆಲ ಸಿನಿಪ್ರಿಯರು ನೆಗಲೆಕ್ಟ್‌ ಮಾಡಿ ಥಿಯೇಟರ್‌ ಹೋಗಿ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇನ್ನು ಕೆಲವರು ಥಿಯೇಟರ್‌ ಪ್ರಿಂಟ್‌ಗಳನ್ನೇ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ಗಳಲ್ಲಿಯೇ ಸಿನಿಮಾ ನೋಡುವುದನ್ನು ಅಭ್ಯಾಸಮಾಡಿಕೊಂಡಿದ್ದಾರೆ. 


ಇದನ್ನೂ ಓದಿ-Saanya Iyer: ಅಮ್ಮನೊಂದಿಗೆ ಅಮರನಾಥ ಯಾತ್ರೆ ಗೆ ತೆರೆಳಿದ ಸಾನ್ಯಾ ಐಯ್ಯರ್; ಇಲ್ಲಿವೆ ಫೋಟೊಸ್..!


ಕೇವಲ ವೆಬ್‌ ಸೈಟ್‌ಗಳಲ್ಲಿ ಮಾತ್ರ ಸಿಗುತ್ತಿದ್ದ ಲಿಂಕ್‌ಗಳು ಇದೀಗ ಟೆಲಿಗ್ರಮ್‌ಗಳಲ್ಲಿ ಸುಲಭವಾಗಿ ಲಭ್ಯವಾಗುತ್ತಿವೆ. ಥಿಯೇಟರ್‌ ಪ್ರಿಂಟ್‌ ಪ್ರಿಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಪೈರಸಿಯನ್ನು ತಪ್ಪಿಸಲು ಸರ್ಕಾರ ಹಾಗೂ ಸಿನಿಮಾ ಇಂಡಸ್ಟ್ರಿಗಳು ಸಾಕಷ್ಟು ಪ್ರಯತ್ನ ಪಡುತ್ತಿವೆ. ಆದರೂ ಸಹ ಆ ಕೆಟ್ಟ ಅಭ್ಯಾಸಕ್ಕೆ ಎಣೆ ಇಲ್ಲದಂತಾಗಿದ್ದು, ಇದೀಗ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಈ ವಿಚಾರವಾಗಿ ಮಹತ್ವದ ಬಿಲ್ ಒಂದನ್ನು ಪಾಸ್ ಮಾಡಿದೆ.


ಹೌದು ಸಿನಿಮಾ ನೋಡುವಾಗ ಥಿಯೇಟರ್‌ನಲ್ಲಿ ವಿಡಿಯೋ ಮಾಡಿ, ಅದನ್ನು ಹಂಚಿಕೊಳ್ಳುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ಆ ಚಿತ್ರದ ಬಜೆಟ್‌ನ ಶೇ 5% ಮೊತ್ತವನ್ನು ದಂಡದ ರೂಪದದಲ್ಲಿ ಕೊಡಬೇಕು ಎನ್ನುವ ಬಿಲ್ ಪಾಸ್ ಆಗಿದ್ದು, ಇನ್ನು ಮುಂದೆ ಯಾರಾದರೂ ಸಿನಿಮಾದ ಪೈರಸಿ ಲಿಂಕ್ ಶೇರ್ ಮಾಡುವುದು ತಿಳಿದುಬಂದರೇ ಮೇಲ್ಕಂಡ ಶಿಕ್ಷೆ ಹಾಗೂ ದಂಡ ತಪ್ಪಿದ್ದಲ್ಲ. 


ಇದನ್ನೂ ಓದಿ-ಬಿಡುಗಡೆಯಾಯಿತು ನವೀನ್ ಶಂಕರ್ ಅಭಿನಯದ "ಕ್ಷೇತ್ರಪತಿ" ಚಿತ್ರದ ಹೊಸ ಪೋಸ್ಟರ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.