ನವದೆಹಲಿ : ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ (Sidhath Shukla) ಸಾವು, ಇಡೀ ಟಿವಿ ಉದ್ಯಮವನ್ನೇ ಆಘಾತಕ್ಕೊಳಪಡಿಸಿದೆ. ನಟನ ಅಕಾಲಿಕ ಮರಣದಿಂದಾಗಿ ಇಡೀ ಇಂಡಸ್ಟ್ರಿ ಶೋಕಸಾಗರದಲ್ಲಿ ಮುಳುಗಿದೆ. ಸಿದ್ದಾರ್ಥ್ ಶುಕ್ಲಾ ನಿಧನದಿಂದ (Sidharth SHukla death) ದುಃಖ ತಪ್ತರಾಗಿರುವ ಅವರ  ಕುಟುಂಬಕ್ಕೆ ಸಾಂತ್ವನ ಹೇಳಲು ಸಿದ್ಧಾರ್ಥ್ ಸ್ನೇಹಿತರು ಮನೆಗೆ ಭೇಟಿ ನೀಡುತ್ತಲೇ ಇದ್ದಾರೆ. ಹಿಂದುಸ್ತಾನಿ ಭಾವು ಎಂದು ಜನಪ್ರಿಯವಾಗಿರುವ ಬಿಗ್ ಬಾಸ್ 13 ಸ್ಪರ್ಧಿ ವಿಕಾಸ್ ಪಾಠಕ್ ಕೂಡ ದಿವಂಗತ ನಟನ ಮನೆಗೆ ಆಗಮಿಸಿದ್ದರು. 


COMMERCIAL BREAK
SCROLL TO CONTINUE READING

ಸಿದ್ಧಾರ್ಥ್ ತಾಯಿಯನ್ನು ಭೇಟಿಯಾದ ವಿಕಾಸ್ ಪಾಠಕ್ :
 ವೈರಲ್ ಭಯಾನಿ ತನ್ನ ಇನ್ಸ್ಟಾಗ್ರಾಮ್ (Instagram) ಹ್ಯಾಂಡಲ್ ನಲ್ಲಿ ಹಿಂದೂಸ್ತಾನಿ ಭಾವು ಸಂಭಾಷಣೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಸಿದ್ದಾರ್ಥ್ ಶುಕ್ಲಾ (Sidharth Shukla) ಸಾವಿಗೆ ಕೆಲವು ಗಂಟೆಗಳ ಮೊದಲು ಏನಾಯಿತು ಎನ್ನುವುದನ್ನು ಹಿಂದುಸ್ತಾನಿ ಭಾವು ಇಲ್ಲಿ ವಿವರಿಸಿದ್ದಾರೆ. ಸಿದ್ಧಾರ್ಥ್ ಶುಕ್ಲಾ ತಾಯಿ ರೀಟಾ (Rita shukla) ಅವರೊಂದಿಗೆ ಮಾತನಾಡಿರುವ ಮಾತಿನ ಆಧಾರದ ಮೇಲೆ ಹಿಂದುಸ್ತಾನಿ ಭಾವು (Hindustani Bhau) ಈ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂದಿದ್ದಾರೆ. 


ಇದನ್ನೂ ಓದಿ : ಪ್ರತಿದಿನ 3 ಗಂಟೆ ವರ್ಕೌಟ್ ಮಾಡುತ್ತಿದ್ದ ಸಿದ್ಧಾರ್ಥ್ ಶುಕ್ಲಾ: ಡಾಕ್ಟರ್ ನೀಡಿದ್ದರು ಎಚ್ಚರಿಕೆ..!


ನಿಜವಾಗಿಯೂ ನಡೆದದ್ದೇನು  ? 
'ಎಲ್ಲವೂ ಚೆನ್ನಾಗಿಟತ್ತು, ಸಿದ್ಧಾರ್ಥ್ ಶುಕ್ಲಾ ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡಿದ್ದರು. ಮುಂಜಾನೆ 3: 30ರ ಸುಮಾರಿಗೆ ಎದ್ದ  ಸಿದ್ಧಾರ್ಥ್, ತಾಯಿ ಬಳಿ ನೀರು ಕೇಳಿದ್ದಾರೆ. ತಾಯಿ ಸಿದ್ದಾರ್ಥ್ ಗೆ ನೀರು ಕೊಟ್ಟಿದ್ದಾರೆ. ನಂತರ  ಸಿದ್ಧಾರ್ಥ್, ಐಸ್ ಕ್ರೀಮ್ ಕೂಡ ತಿಂದಿದ್ದಾರೆ. ಸಿದ್ಧಾರ್ಥ್, ಇದಾದ ನಂತರ ಮಲಗಿದ್ದಾರೆ.  ಪ್ರತಿ ದಿನ ಸಿದ್ದಾರ್ಥ್ ತನ್ನ ಜಿಮ್ (Gym) ಸೆಶನ್‌ಗೆ ಬೆಳಿಗ್ಗೆ 10 ಗಂಟೆಗೆ ಏಳುತ್ತಿದ್ದರು. ಆದರೆ,  ಆ ದಿನ ಮಾತ್ರ ಬೆಳಿಗ್ಗೆ ಅಲಾರಂ ಹೊಡೆದರೂ ಎದ್ದೇಳಲಿಲ್ಲ. ಸಿದ್ದಾರ್ಥ್ ಯಾಕೆ ಏಳುತ್ತಿಲ್ಲ ಎಂದು ನೋಡಲು ಕೊನೆಯೊಳಗೆ ಹೋದ ತಾಯಿಗೆ   ವಿಷಯ ತಿಳಿದಿದೆ. 


Bigg boss) ವಿಜೇತ ಸಿದ್ಧಾರ್ಥ್ ಶುಕ್ಲಾ  ಸೆಪ್ಟೆಂಬರ್ 2 ಗುರುವಾರ, ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೆಪ್ಟೆಂಬರ್ 3 ರಂದು ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಅವರ ಪ್ರೀತಿಪಾತ್ರರು ಮತ್ತು ಕುಟುಂಬಸ್ಥರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.   ಸಿದ್ಧಾರ್ಥ್ ಶುಕ್ಲಾ ಅವರಿಗೆ 40 ವರ್ಷ ವಯಸ್ಸಾಗಿತ್ತು. 


ಇದನ್ನೂ ಓದಿ : ಸಿದಾರ್ಥ್ ಶುಕ್ಲಾ ಕೊನೆಯ ಮಾತುಗಳನ್ನಾಡಿದ್ದು ಅಮ್ಮನ ಜೊತೆಯಲ್ಲಿಯೇ, ಸಾವಿಗೂ ಮುನ್ನ ನಡೆದ ಘಟನೆ ಇದು..


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ