ಬೆಂಗಳೂರು : ಒಂದು ಸಿನಿಮಾ ನೋಡಿದ್ರೆ ಆ ಸ್ಟೋರಿ ನಮ್ಮನ್ನ ಕಾಡುತ್ತಲೇ ಇರಬೇಕಂತೆ. "ಗಾಳಿಪಟ 2" ಸಿನಿಮಾ ರಿಲೀಸ್ ಗೂ ಮುನ್ನ ಹಾಡುಗಳು ಮತ್ತು ಟ್ರೇಲರ್ ಮೂಲಕ ಜನಕ್ಕೆ ತುಂಬಾ ಹತ್ತಿರವಾಗಿದೆ. ಆಗಸ್ಟ್ 12ಕ್ಕೆ "ಗಾಳಿಪಟ 2" ಸಿನಿಮಾ ರಿಲೀಸ್ ಆಗುತ್ತಿದೆ.ಈಗಾಗಲೇ ಟಿಕೆಟ್ ಬುಕಿಂಗ್ ಆರಂಭವಾಗಿದ್ದು ಎಲ್ಲಾ  ಮುಗಿಬಿದ್ದು ಟಿಕೆಟ್ ಬುಕ್ ಮಾಡ್ಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

 ಎಲ್ಲಾ ಪ್ರೀಮಿಯರ್ ಶೋ ಭರ್ತಿಯಾಗಿದ್ದು,ಇನ್ನಷ್ಟು ಪ್ರೀಮಿಯರ್ ಶೋ ಆಯೋಜನೆ ಮಾಡುವಂತೆ ಬೇಡಿಕೆ ಕೂಡ ಹೆಚ್ಚಾಗಿದೆ. ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಕಾನ್ಸೆಪ್ಟ್ ಹೆಚ್ಚಾಗುತ್ತಿದೆ. ಏನೇ ಮಾಡಿದ್ರೂ ಪ್ಯಾನ್ ಇಂಡಿಯಾ ಲೆವೆಲ್ಲಿಗೆ ಚಿತ್ರಗಳನ್ನ ಮಾಡುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡೋ ಮೂಲಕ ಸಿನಿಮಾಗಳು ಸುದ್ದಿಯಾಗುತ್ತಿವೆ. ಆದ್ರೆ 'ಗಾಳಿಪಟ 2' ಸಿನಿಮಾ ಒಂದೇ ಭಾಷೆಯಲ್ಲಿ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ.


ಇದನ್ನೂ ಓದಿ : Bigg Boss Kannada OTT: ಮನೆಯ ಮೊದಲ ಕ್ಯಾಪ್ಟನ್‌ ಆದ ಅರ್ಜುನ್‌ ರಮೇಶ್‌


'ಗಾಳಿಪಟ 2' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಹೌದು. ಆದ್ರೆ ಇದೀಗ ಈ ಸಿನಿಮಾ ಮೂಲಕ ಕನ್ನಡ ಭಾಷೆ ಪ್ಯಾನ್ ಇಂಡಿಯಾ ಆಗುತ್ತಿದೆ ಅನ್ನೋದೇ ಹೆಮ್ಮೆಯ ವಿಚಾರ. ದೇಶವಿದೇಶಗಳಲ್ಲಿ "ಗಾಳಿಪಟ 2"ರಿಲೀಸ್  ಆಗುತ್ತಿದ್ದರೂ ಕೂಡ  ಕನ್ನಡ ಭಾಷೆಯಲ್ಲಿ ಮಾತ್ರ ತೆರೆ ಕಾಣುತ್ತಿದೆ. ಸೋ ಹಲವಾರು ವಿಶೇಷತೆಗಳಿಗೆ ಈ ಸಿನಿಮಾ ಸಾಕ್ಷಿಯಾಗಿ ಸುದ್ದಿಯಾಗುತ್ತಿದೆ.
  
ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.


 ಇದನ್ನೂ ಓದಿ : BBK OTT: ಬಿಗ್ ಬಾಸ್ ಮನೆಯಲ್ಲಿ ಸ್ಫೂರ್ತಿ ಗೌಡ - ಸೋನು ಗೌಡ ಜಗಳಕ್ಕೆ ಕಾರಣವಾದ 'ಡವ್‌ರಾಣಿ'


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.