ಆಗಸ್ಟ್ 12ರಂದು ತೆರೆಗೆ ಅಪ್ಪಳಿಸಲಿದೆ ಗಾಳಿಪಟ 2
ಗಾಳಿಪಟ..ಈ ಸಿನಿಮಾ ಸೃಷ್ಟಿಸಿದ್ದ ಹವಾ ಇಂದಿಗೂ ಕಮ್ಮಿಯಾಗಿಲ್ಲ ಬಿಡಿ.ಇವತ್ತಿಗೂ ಗಾಳಿಪಟ ಸಿನಿಮಾದ ಹಾಡುಗಳು,ಸ್ಟೋರಿ ಮತ್ತೇ ಮತ್ತೇ ನೆನಪಾಗುತ್ತಲೇ ಇರುತ್ತೆ.ಯಾಕಂದ್ರೆ ಅಂತಹ ಸುಮಧುರ ಹಾಡುಗಳನ್ನ ಈ ಸಿನಿಮಾದಲ್ಲಿ ನಾವು ಕೇಳಿ,ನೋಡಿ ಎಂಜಾಯ್ ಮಾಡಿದ್ವಿ.
ಬೆಂಗಳೂರು: ಗಾಳಿಪಟ..ಈ ಸಿನಿಮಾ ಸೃಷ್ಟಿಸಿದ್ದ ಹವಾ ಇಂದಿಗೂ ಕಮ್ಮಿಯಾಗಿಲ್ಲ ಬಿಡಿ.ಇವತ್ತಿಗೂ ಗಾಳಿಪಟ ಸಿನಿಮಾದ ಹಾಡುಗಳು,ಸ್ಟೋರಿ ಮತ್ತೇ ಮತ್ತೇ ನೆನಪಾಗುತ್ತಲೇ ಇರುತ್ತೆ.ಯಾಕಂದ್ರೆ ಅಂತಹ ಸುಮಧುರ ಹಾಡುಗಳನ್ನ ಈ ಸಿನಿಮಾದಲ್ಲಿ ನಾವು ಕೇಳಿ,ನೋಡಿ ಎಂಜಾಯ್ ಮಾಡಿದ್ವಿ.
ಆ ಗುಂಗಿನಲ್ಲಿ ನಾವಿರುವಾಗ ಇದೀಗ "ಗಾಳಿಪಟ 2" ಸಿನಿಮಾ ಇದೆ ಆಗಸ್ಟ್ 12ರಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.ಗಾಳಿಪಟ 2 ಸಿನಿಮಾದ ಎರಡು ಹಾಡುಗಳು ಇದೀಗ ರಿಲೀಸ್ ಆಗಿದ್ದು ತುಂಬಾನೆ ಜನಪ್ರಿಯತೆ ಗಳಿಸಿದೆ.
ಯೋಗರಾಜ್ ಭಟ್ರು ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ನ ಜನ ಮೆಚ್ಚಿ ಅಪ್ಪಿ ಒಪ್ಪಿಕೊಳ್ಳುತ್ತಾರೆ. ಅಂತೆಯೇ ಇದೀಗ ಬಹುನಿರೀಕ್ಷೆಯ ಗಾಳಿಪಟ 2ಸಿನಿಮಾವನ್ನ ತೆರೆಯ ಮೇಲೆ ನೋಡಲು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾದುಕುಳಿತಿದ್ದಾರೆ.ಇಂದಿನ ಈ ಸ್ಥಿತಿಗೆ ಸಿದ್ದರಾಮಯ್ಯನವರೇ ನೇರ ಕಾರಣಕರ್ತರು: ಬಿಜೆಪಿ ಆರೋಪ
ಈಗ ಸಿಕ್ಕಿರೋ ಅಪ್ಡೇಟ್ ಮಾಹಿತಿಯ ಪ್ರಕಾರ KVN ಪ್ರೊಡಕ್ಷನ್ ಸಹಯೋಗದಲ್ಲಿ ಗಾಳಿಪಟ 2 ರಿಲೀಸ್ ಆಗುತ್ತಿದೆ KVN ಪ್ರೊಡಕ್ಷನ್ಸ್ ನಿಂದ ಬಹುತಾರಾಗಣದ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ವಿತರಣೆಯಾಗುತ್ತಿದೆ.
ಇದು ಸಿನಿಮಾಗೆ ಆನೆಬಲ ಸಿಕ್ಕಂತೆ ಆಗಿದೆ.ಇದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.ಗಾಳಿಪಟ 2 ಸಿನಿಮಾದಲ್ಲಿ ಎಲ್ಲಾ ರೀತಿಯ ಮನರಂಜನೆ ಸಿಗುತ್ತೆ ಅನ್ನೋದು ಈಗಾಗಲೇ ಪಕ್ಕಾ ಆಗಿದೆ.ಸಿನಿಮಾ ತಂಡ ಕೂಡ ಇದೀಗ ಭರ್ಜರಿ ಪ್ರಚಾರಲ್ಲಿ ತೊಡಗಿಸಿಕೊಂಡಿದೆ. ಸೋ ಅಭಿಮಾನಿಗಳು ಇನ್ನೇನು ಕೆಲವೇ ದಿನಗಳ ಕಾಲ ಕಾದ್ರೆ ಗಾಳಿಪಟ 2 ಚಿತ್ರವನ್ನ ಬೆಳ್ಳಿ ತೆರೆಯ ಮೇಲೆ ನೋಡಿ ದಿಲ್ ಖುಷ್ ಆಗಿಸಬಹುದು.
ಇದನ್ನೂ ಓದಿ: IND vs WI : ಈ ಕಾರಣದಿಂದಲೆ ಮೊದಲ ಟಿ20ಯಲ್ಲಿ ಭರ್ಜರಿಯಾಗಿ ಮಿಂಚಿದ ಅರ್ಷದೀಪ್ ಸಿಂಗ್!
ಇನ್ನು ಈ ಚಿತ್ರದಲ್ಲಿ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.