ಇಂದಿನ ಈ ಸ್ಥಿತಿಗೆ ಸಿದ್ದರಾಮಯ್ಯನವರೇ ನೇರ ಕಾರಣಕರ್ತರು: ಬಿಜೆಪಿ ಆರೋಪ

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇಂದಿನ ಸ್ಥಿತಿಗೆ ನೇರ ಕಾರಣಕರ್ತರು. ಜೈಲಿನಲ್ಲಿ ಇರಬೇಕಿದ್ದ ರಕ್ತ ಬೀಜಾಸುರರನ್ನು ಬೀದಿಗೆ ಬಿಟ್ಟಿದ್ದು ನೀವೇ ಅಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Puttaraj K Alur | Last Updated : Jul 29, 2022, 03:05 PM IST
  • ಮೊಹಮ್ಮದ್ ಫಾಜಿಲ್‌ ಹತ್ಯೆಯಾಗುತ್ತಿದ್ದಂತೆ ಸಿದ್ದರಾಮಯ್ಯನವರು ಮೈಕೊಡವಿ ನಿಂತಿದ್ದಾರೆ
  • ಅಮಾಯಕರ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನೀಚ ಮನಸ್ಥಿತಿ ಎಂದು ನಿಮ್ಮಿಂದ ತೊಲಗುವುದು?
  • ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇಂದಿನ ಸ್ಥಿತಿಗೆ ನೇರ ಕಾರಣಕರ್ತರೆಂದ ಬಿಜೆಪಿ ಆರೋಪ
ಇಂದಿನ ಈ ಸ್ಥಿತಿಗೆ ಸಿದ್ದರಾಮಯ್ಯನವರೇ ನೇರ ಕಾರಣಕರ್ತರು: ಬಿಜೆಪಿ ಆರೋಪ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಗಂಭೀರ ಆರೋಪ

ಬೆಂಗಳೂರು: ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಟ್ವೀಟ್ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಬಿಜೆಪಿ ತಿರುಗೇಟು ನೀಡಿದೆ. ಈ ಸಂಬಂಧ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಇಂದಿನ ಈ ಸ್ಥಿತಿಗೆ ಸಿದ್ದರಾಮಯ್ಯನವರೇ ನೇರ ಕಾರಣಕರ್ತರು’ ಎಂದು ಆರೋಪಿಸಿದೆ. ‘ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಒಂದು ಟ್ವೀಟ್‌ ಮಾಡಿ ಸುಮ್ಮನಾಗಿದ್ದ ಸಿದ್ದರಾಮಯ್ಯನವರು ಫಾಜಿಲ್‌ ಹತ್ಯೆಯಾಗುತ್ತಿದ್ದಂತೆ ಮೈಕೊಡವಿ ನಿಂತಿದ್ದಾರೆ. ನೀವೆಷ್ಟು ಪಕ್ಷಪಾತಿ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಅಮಾಯಕರ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನೀಚ ಮನಸ್ಥಿತಿ ಎಂದು ನಿಮ್ಮಿಂದ ತೊಲಗುವುದು?’ ಎಂದು ಪ್ರಶ್ನಿಸಿದೆ.

‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇಂದಿನ ಸ್ಥಿತಿಗೆ ನೇರ ಕಾರಣಕರ್ತರು. ಜೈಲಿನಲ್ಲಿ ಇರಬೇಕಿದ್ದ ರಕ್ತ ಬೀಜಾಸುರರನ್ನು ಬೀದಿಗೆ ಬಿಟ್ಟಿದ್ದು ನೀವೇ ಅಲ್ಲವೇ? ರಾಜ್ಯದಲ್ಲಿ ಪಿಎಫ್ಐ ಸಂಘಟನೆಯ ಕಬಂಧ ಬಾಹು ವಿಸ್ತರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವೇ ನೇರ ಕಾರಣ’ವೆಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಮೂರು ಬೇಡಿಕೆ ಇಟ್ಟ ಕಾಂಗ್ರೆಸ್

‘ಸಿದ್ದರಾಮಯ್ಯ ಸರ್ಕಾರದಲ್ಲಿ 20ಕ್ಕೂ ಅಧಿಕ ಅಮಾಯಕ ಹಿಂದೂಗಳ ಹತ್ಯೆಯಾಗಿತ್ತು. ಆಗೆಲ್ಲ ಇಲ್ಲದ ಕನಿಕರ, ಹೃದಯಗಳು, ಚುನಾವಣಾ ಸಮಯ ಹತ್ತಿರ ಬಂದಂತೆ ಹೊಡೆದುಕೊಳ್ಳುತ್ತಿದೆ. ನಿಮ್ಮ ರಾಜಕೀಯ ಲಾಭಕ್ಕಾಗಿ, ಸೂತಕದ ಮನೆಯಲ್ಲಿ ಬೇಳೆ ಬೇಯಿಸಿಕೊಳ್ಳುವವರನ್ನು ಜನತೆ ಎಂದೂ ಕ್ಷಮಿಸಲಾರರು’ ಎಂದು ಬಿಜೆಪಿ ಟೀಕಿಸಿದೆ.

‘ದನಗಳ್ಳ ಕಬೀರ್ ಹತ್ಯೆಗೆ ಸಿದ್ದರಾಮಯ್ಯ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಆದರೆ ಹಿಂದೂ ಕಾರ್ಯಕರ್ತರ ಹತ್ಯೆಗೆ ಪರಿಹಾರ ಬಿಡಿ, ಅವರ ಮನೆಗೆ ಭೇಟಿ ನೀಡುವ ಕನಿಷ್ಠ ಸೌಜನ್ಯವನ್ನೂ ಕೂಡ ಕಾಂಗ್ರೆಸ್ ಪ್ರದರ್ಶಿಸಿಸಲಿಲ್ಲ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯಕರ್ತರ ಹತ್ಯೆ; ಇದು ಕಾಣದ ಕೈಗಳ ಷಡ್ಯಂತ್ರವೆಂದ ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News