Salman Khan : ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದಾನೆ. ಸಲ್ಮಾನ್‌ಗೆ ಕ್ಷಮೆ ಯಾಚಿಸುವಂತೆ ವಾರ್ನಿಂಗ್‌ ನೀಡಿದ್ದಾನೆ. ಇಲ್ಲದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿರುವಾಗಿ ವರದಿಯಾಗಿದೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌, ಶೀಘ್ರದಲ್ಲೇ ಸಲ್ಲು ಅಹಂಕಾರವನ್ನು ಮುರಿಯುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಮುಂಬೈ ಪೊಲೀಸರು ಸಲ್ಮಾನ್ ಮತ್ತು ಅವರ ತಂದೆ ಸಲೀಂ ಖಾನ್‌ ಬಂದ 'ಬೆದರಿಕೆ ಪತ್ರ' ಅನುಸರಿಸಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.


COMMERCIAL BREAK
SCROLL TO CONTINUE READING

ಲಾರೆನ್ಸ್‌ ಬಿಷ್ಣೋಯ್‌ ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಕೃಷ್ಣಮೃಗವನ್ನು ಕೊಲ್ಲುವ ಮೂಲಕ ಸಲ್ಮಾನ್ ತನ್ನ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ, ಅವರು ನನ್ನ ಸಮಾಜವನ್ನು ಅವಮಾನಿಸಿದ್ದಾರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಆದರೆ ಅವರು ಕ್ಷಮೆಯಾಚಿಸಲಿಲ್ಲ. ಒಂದು ವೇಳೆ ಕ್ಷಮೆಯಾಚಿಸದಿದ್ದರೆ, ಪರಿಣಾಮ ಎದುರಿಸಲು ಸಿದ್ಧರಾಗುವಂತೆ ಸಲ್ಮಾನ್‌ಗೆ ಲಾರೆನ್ಸ್ ಎಚ್ಚರಿಗೆ ನೀಡಿದ್ದಾಗಿ ವರದಿಯಾಗಿದೆ.


ಇದನ್ನೂ ಓದಿ: ʼಕಬ್ಜʼ ಸಿನಿಮಾ ಕುರಿತು ಅಂದು ʼಅಪ್ಪುʼ ನುಡಿದಿದ್ದ ಭವಿಷ್ಯ ಇಂದು ಸತ್ಯವಾಗಿವೆ..!


ಚಿಕ್ಕಂದಿನಿಂದಲೂ ಸಲ್ಮಾನ್ ಖಾನ್ ಬಗ್ಗೆ ನನ್ನ ಮನಸ್ಸಿನಲ್ಲಿ ಕೋಪವಿದೆ ಎಂದು ಲಾರೆನ್ಸ್ ಹೇಳಿದ್ದಾರಂತೆ. ಇನ್ನಾದರೂ ಅವರು ತಮ್ಮ ಅಹಂಕಾರವನ್ನು ಬಿಟ್ಟು ನಮ್ಮ ದೇವರ ಗುಡಿಗೆ ಬಂದು ಕ್ಷಮೆ ಕೇಳಬೇಕು, ನಮ್ಮ ಸಮಾಜ ಕ್ಷಮಿಸಿದರೆ ನಾನು ಏನನ್ನೂ ಹೇಳುವುದಿಲ್ಲ ಎಂದು ಲಾರೆನ್ಸ್‌ ಹೇಳಿದ್ದಾಗಿ ತಿಳಿದು ಬಂದಿದೆ. ತಾಜಾ ಬೆಳವಣಿಗೆಗಳ ಪ್ರಕಾರ, ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಎಬಿಪಿ ನ್ಯೂಸ್‌ಗೆ ಸಂದರ್ಶನ ನೀಡಿದ್ದಾರೆ ಎಂಬ ಆರೋಪವನ್ನು ಬಟಿಂಡಾ ಜೈಲಿನ ಅಧೀಕ್ಷಕ ಎನ್‌ಡಿ ನೇಗಿ ತಳ್ಳಿಹಾಕಿದ್ದಾರೆ. ಅಲ್ಲದೆ, ಬಿಷ್ಣೋಯ್ ಅವರು ಪ್ರಸ್ತುತ ಹೆಚ್ಚಿನ ಭದ್ರತೆಯ ಭಟಿಂಡಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.