Amruthadhaare Serial: ಭೂಮಿಕಾಗೆ ಗಂಡನಿಂದ ಕಾದಿತ್ತು ಸರ್ಪೈಸ್: ಹೆಂಡತಿಗೆ ಕಾಲು ಗೆಜ್ಜೆ ತೊಡಿಸಿದ ಗೌತಮ್!
Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾಗೆ ಗಂಡನಿಂದ ಸಫ್ರೈಸ್ ಗಿಫ್ಟ್ ಸಿಕ್ಕಿದ್ದು, ಅದರಲ್ಲಿರುವ ಕಾಲು ಗೆಜ್ಜೆಯನ್ನು ಗೌತಮ್ ತನ್ನ ಹೆಂಡತಿಯ ಕಾಲಿಗೆ ತಾನೆ ತೊಡಿಸುತ್ತಾನೆ. ಇದರ ಸಂಪೂರ್ಣ ಸ್ಟೋರಿ ಇಲ್ಲಿದೆ.
Gautham Gives Suprise To Bhumika: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ಗೌತಮ್ ಭೂಮಿಕಾಗೆ ಸಫ್ರೈಸ್ ಗಿಫ್ಟ್ ಕೊಡುತ್ತಾನೆ. ಗೌತಮ್ ಹಾಗೂ ಆನಂದ್ ಇಬ್ಬರೂ ಆಫೀಸ್ ಕೆಲಸದ ಮೇಲೆ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಆನಂದ್ ಅಲಂಕಾರ ಪ್ರಿಯೆ. ಅದರಲ್ಲಿ ಆಭರಣ ತೊಟ್ಟುಕೊಳ್ಳುವುದೂ ಒಂದು. ಅಂದರೆ ಅದರಲ್ಲಿ ಕಾಲು ಗೆಜ್ಜೆಯೂ ಒಂದು ಎಂದು ಹೇಳುತ್ತಾನೆ.
ಅದೇ ಸಮಯದಲ್ಲಿ ಗೌತಮ್‌ಗೆ ತಾನೂ ಸಹ ಈಗ ಕಾಲು ಗೆಜ್ಜೆಯನ್ನು ಭೂಮಿಕಾಳಿಗೆ ಕೊಡಿಸಿದರೆ ಅವಳಿಗೆ ಸಂತೋಷ ಆಗಬಹುದು ಎಂದು ಅರ್ಥವಾಗುತ್ತದೆ. ಈ ವಿಷಯವನ್ನು ಅರಿತುಕೊಂಡು ಕಾಲು ಗೆಜ್ಜೆ ಕೊಳ್ಳಲು ಆಭರಣದ ಅಂಗಡಿಗೆ ಹೋಗುತ್ತಾನೆ. ಹಾಗೆಯೇ ಒಂದು ಕಾಲು ಗೆಜ್ಜೆಯನ್ನು ಪ್ಯಾಕ್ ಮಾಡಿಸಿಕೊಂಡು ಮನೆಗೆ ಹೋಗುತ್ತಾನೆ. ಗೌತಮ್ ಮನೆಗೆ ಬಂದು ಮೇಲೆ ತಾನೂ ಹಾಗೂ ಭೂಮಿಕಾ ಇರುವ ಕೋಣೆಯಲ್ಲಿರುವ ಟೇಬಲ್ ಮೇಲೆ ಗಿಫ್ಟ್ ಅನ್ನು ಇಟ್ಟು ಕಾಫಿ ಕುಡಿಯುತ್ತಾ ಕುಳಿತಿರುತ್ತಾನೆ.
ಇದನ್ನೂ ಓದಿ: Sai Pallavi: ಕತ್ರಿನಾ ಕೈಫ್ ಸಾಂಗ್‌ಗೆ ನ್ಯಾಚುರಲ್ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್ ಟೈಮ್ ವಿಡಿಯೋ ವೈರಲ್!!
ನಂತರ ಭೂಮಿಕಾ ರೂಮಿಗೆ ಬಂದ ಮೇಲೆ ಗೌತಮ್‌ಗೆ ಇದೇನಿದು ನಾನು ಸಫ್ರೈಸ್ ಕೊಟ್ಟೆ ಅಂತ ನೀವು ಇನ್ನೊಂದು ಸಫ್ರೈಸ್ ರೆಡಿ ಮಾಡಿದ್ದೀರಾ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಗೌತಮ್ ಏನೂ ಮಾತನಾಡದೆ ಸುಮ್ಮನೆ ನಗುತ್ತಾ ಹೌದು ಎನ್ನುವ ತರಹ ತಲೆ ಆಡಿಸುತ್ತಾನೆ. ಅವಾಗ ಭೂಮಿಕಾ ಅದನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಅದರ ಮೇಲಿದ್ದ ನೀಲಿ ಬಣ್ಣದ ಕವರ್ ಅನ್ನು ಓಪನ್ ಮಾಡಿ ನೋಡುತ್ತಾಳೆ. ಅದರಲ್ಲಿ ಕಾಲ್ಗೆಜ್ಜೆ ಇರುವುದನ್ನು ನೋಡಿ ಭೂಮಿಕಾಗೆ ತುಂಬಾ ಸಂತೋಷ ಆಗುತ್ತದೆ.
ಭೂಮಿಕಾ ಅದನ್ನು ಕಾಲಿಗೆ ಹಾಕಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಆದರೆ ತನ್ನ ಕಾಲಿಗೆ ಗೆಜ್ಜೆ ಹಾಕಿಕೊಳ್ಳುವುದಕ್ಕಿಂತ ತಾನೇ ಗೌತಮ್ ಕೊಟ್ಟ ಗೆಜ್ಜೆಯನ್ನು ಅವನೇ ತೊಡಿಸಿದರೆ ತುಂಬಾ ಚೆನ್ನಾಗಿರುತ್ತದೆ ಎಂದು ಅವಳು ತನ್ನ ಮನಸಿನಲ್ಲಿ ಅಂದುಕೊಳ್ಳುತ್ತಾ ಇರುತ್ತಾಳೆ. ಹೇಗಾದರೂ ಮಾಡಿ ಅವನ ಹತ್ತಿರವೇ ಹಾಕಿಸಿಕೊಳ್ಳಬೇಕು ಎಂದು ಆಸೆ ಪಡುತ್ತಾಳೆ. ಭೂಮಿಕಾ ಗೌತಮ್ ಎದುರು ಬಂದು ಕುಳಿತುಕೊಂಡು ಬೇಕೂ ಎಂದೇ ಕಾಲಿನ ಗೆಜ್ಜೆಯನ್ನು ನೆಲಕ್ಕೆ ಬೀಳಿಸಿದ ರೀತಿ ನಾಟಕ ಮಾಡುತ್ತಾಳೆ. ಅದನ್ನು ಹಾಕಿಕೊಳ್ಳೋಕೆ ತನ್ನಿಂದ ಸಾಧ್ಯ ಆಗುತ್ತಿಲ್ಲ ಎಂದು ತೋರಿಸಿಕೊಳ್ಳುತ್ತಾಳೆ.
ಇದನ್ನೂ ಓದಿ: ಎರಡನೇ ಮದುವೆಯಾಗಲು ಹೊರಟ ಮಲೈಕಾಗೆ ಮಗನಿಂದಲೇ ಈ ಪ್ರಶ್ನೆ ! ಉತ್ತರಿಸಲು ತಬ್ಬಿಬ್ಬಾದ ನಟಿ
ಅದೇ ಸಂದರ್ಭದಲ್ಲಿ ಗೌತಮ್ ಹೆಂಡತಿಯನ್ನು ನೋಡಿ ಇಲ್ಕೊಡಿ ನಾನು ಹಾಕ್ ಕೊಡ್ತಿನಿ ಎಂದು ಹೇಳುತ್ತಾನೆ. ನಂತರ ಅವಳು ತನ್ನ ಕಾಲನ್ನು ಮುಂದಿರುವ ಟೇಬಲ್ ಮೇಲೆ ಇಡುತ್ತಾಳೆ. ಆದರೆ ಅದು ಗೌತಮ್ ಸರಿ ಆಗೋದಿಲ್ಲ. ನಂತರ ಗೌತಮ್ ಭೂಮಿಕಾ ಕಾಲನ್ನು ತನ್ನ ಕಾಲಮೇಲೆ ಇಟ್ಟುಕೊಂಡು ಗೆಜ್ಜೆ ತೊಡಿಸುತ್ತಾನೆ. ಆಗ ಅವಳಿಗೆ ತುಂಬಾ ಸಂತೋಷ ಆಗುತ್ತದೆ. ಇದೀಗ ಗೌತಮ್ ಹಾಗೂ ಭೂಮಿಕಾ ಸಂತೋಷದಿಂದ ಜೀವನ ಪ್ರಾರಂಭಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.