ಎರಡನೇ ಮದುವೆಯಾಗಲು ಹೊರಟ ಮಲೈಕಾಗೆ ಮಗನಿಂದಲೇ ಈ ಪ್ರಶ್ನೆ ! ಉತ್ತರಿಸಲು ತಬ್ಬಿಬ್ಬಾದ ನಟಿ

Malaika Arora Arhaan Khan :ಮಲೈಕಾ  ಪುತ್ರ ಅರ್ಹಾನ್ ಖಾನ್ ಕೂಡಾ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಹೊರ ತರುತ್ತಿದ್ದಾರೆ. ಇದು ಯಾವುದೇ ವೆಬ್ ಸರಣಿ ಅಥವಾ ಚಲನಚಿತ್ರವಲ್ಲ.ಬದಲಿಗೆ ಪಾಡ್‌ಕ್ಯಾಸ್ಟ್ ಆಗಿದೆ.

Written by - Ranjitha R K | Last Updated : Apr 17, 2024, 02:58 PM IST
  • ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಪುತ್ರ ಅರ್ಹಾನ್ ಖಾನ್ ಗೆ ಈಗ 22 ವರ್ಷ.
  • ಅರ್ಹಾನ್ ಖಾನ್ ಕೂಡಾ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಹೊರ ತರುತ್ತಿದ್ದಾರೆ.
  • ಇದು ಯಾವುದೇ ವೆಬ್ ಸರಣಿ ಅಥವಾ ಚಲನಚಿತ್ರವಲ್ಲ.
ಎರಡನೇ ಮದುವೆಯಾಗಲು ಹೊರಟ ಮಲೈಕಾಗೆ ಮಗನಿಂದಲೇ ಈ ಪ್ರಶ್ನೆ ! ಉತ್ತರಿಸಲು ತಬ್ಬಿಬ್ಬಾದ ನಟಿ title=

Malaika Arora Arhaan Khan : ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಪುತ್ರ ಅರ್ಹಾನ್ ಖಾನ್ ಗೆ ಈಗ 22 ವರ್ಷ.ಅವರ ತಾತ ಸಲೀಂ ಖಾನ್ ಪ್ರಸಿದ್ಧ ಚಲನಚಿತ್ರ ಸ್ಕ್ರಿಪ್ಟ್ ಬರಹಗಾರ. ಚಿಕ್ಕಪ್ಪ ಸಲ್ಮಾನ್ ಖಾನ್ ಚಲನಚಿತ್ರ ಸೂಪರ್ ಸ್ಟಾರ್. ಅರ್ಹಾನ್ ಖಾನ್ ತಂದೆ,ತಾಯಿ ಮತ್ತು ಚಿಕ್ಕಮ್ಮ ಎಲ್ಲರೂ ಚಲನಚಿತ್ರ ಉದ್ಯಮದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ನಡುವೆ ಮಲೈಕಾ  ಪುತ್ರ ಅರ್ಹಾನ್ ಖಾನ್ ಕೂಡಾ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಹೊರ ತರುತ್ತಿದ್ದಾರೆ. ಇದು ಯಾವುದೇ ವೆಬ್ ಸರಣಿ ಅಥವಾ ಚಲನಚಿತ್ರವಲ್ಲ. ಬದಲಿಗೆ ಪಾಡ್‌ಕ್ಯಾಸ್ಟ್ ಆಗಿದೆ. ಈ ಪಾದ್ ಕಾಸ್ಟ್ ನಲ್ಲಿ ಅವರ ಕುಟುಂಬ ಮತ್ತು ಬಾಲಿವುಡ್‌ನ ಕೆಲವು ಪ್ರಸಿದ್ಧ ಮುಖಗಳನ್ನು ಕಾಣಬಹುದಾಗಿದೆ. 

ಅರ್ಹಾನ್ ಖಾನ್ ಅವರ ಪಾಡ್‌ಕ್ಯಾಸ್ಟ್‌ನ ಹೆಸರು 'ಡಂಬ್ ಬಿರಿಯಾನಿ'.ತಮ್ಮ ಆತ್ಮೀಯ ಗೆಳೆಯರಾದ ದೇವ್ ರೈಯಾನಿ ಮತ್ತು ಆರುಷ್ ವರ್ಮಾ ಅವರೊಂದಿಗೆ  ಸೇರಿ ಇದನ್ನು ಹೊರ ತರುತ್ತಿದ್ದಾರೆ.ಮೊದಲ ಸಂಚಿಕೆಯಲ್ಲಿ ಅರ್ಹಾನ್ ಖಾನ್ ತಾಯಿ ಮಲೈಕಾ ಅರೋರಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ‌Sai Pallavi: ಕತ್ರಿನಾ ಕೈಫ್‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!!

ತನ್ನ ಮಗನ ವರ್ಜಿನ್ ಬಗ್ಗೆಯೇ ಪ್ರಶ್ನೆ : 
'ಡಂಬ್ ಬಿರಿಯಾನಿ' ಮೊದಲ ಸಂಚಿಕೆ ಏಪ್ರಿಲ್ 18, 2024 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ.ಪ್ರಸ್ತುತ,ಎಪಿಸೋಡ್‌ಗೆ ಸಂಬಂಧಿಸಿದ ಟೀಸರ್ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಮಲೈಕಾ ಅರೋರಾ ತನ್ನ ಮಗನ ವರ್ಜಿನ್ ಬಗ್ಗೆ ಪ್ರಶ್ನಿಸಿದರೆ,ಅರ್ಹಾನ್ ಕೂಡಾ ತನ್ನ ತಾಯಿಯ ಕೈ ಹಿಡಿದು ಎರಡನೇ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾನೆ. 

ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ವಿಚ್ಛೇದನ:
19 ವರ್ಷಗಳ ನಂತರ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ವಿವಾಹವು ಮುರಿದುಬಿತ್ತು.2017 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.ವಿಚ್ಛೇದನದ ನಂತರ, ಮಲೈಕಾ ಅರ್ಜುನ್ ಕಪೂರ್ ಜೊತೆ  ಡೇಟ್ ಮಾಡಲು ಪ್ರಾರಂಭಿಸಿದರು.   ಅರ್ಬಾಜ್ ಖಾನ್ ಕಳೆದ ವರ್ಷ ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ವಿವಾಹವಾದರು.

ಇದನ್ನೂ ಓದಿ : ‌Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ‌ಮೊದಲ ಬಾರಿಗೆ‌ ವಿರಾಟ್‌ ಪುತ್ರ ಅಕಾಯ್ ಫೇಸ್‌ ರಿವೀಲ್!!

ಅರ್ಬಾಜ್ ಖಾನ್ ಎರಡನೇ ಬಾರಿಗೆ ಮದುವೆಯಾದಾಗಿನಿಂದ ಪ್ರತಿಯೊಬ್ಬರೂ ಮಲೈಕಾ ಎರಡನೇ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ.ಅರ್ಜುನ್ ಕಪೂರ್ ಮತ್ತು ಮಲೈಕಾ ನಡುವೆ ಎಲ್ಲವೂ ಸರಿಯಾಗಿದೆಯೇ ಅಥವಾ ಇಲ್ಲವೇ? ಎನ್ನುವ ಕುತೂಹಲವೂ ಇದೆ.ಈ ಎಲ್ಲಾ ಪ್ರಶ್ನೆಗಳಿಗೆ 'ಡಂಬ್ ಬಿರಿಯಾನಿ'ಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News