ಥಿಯೇಟರ್ ನಲ್ಲಿ ಧೂಳ್ ಎಬ್ಬಿಸಿದ್ದ ಘೋಸ್ಟ್ ಸಿನಿಮಾ ಜೀ5 ಒಟಿಟಿಯಲ್ಲಿಯೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ನವೆಂಬರ್ 17ರಂದು ಬಿಡುಗಡೆಯಾಗಿದ್ದ ಶಿವಣ್ಣ ಚಿತ್ರ ಕೆಲವೇ ದಿನಗಳಲ್ಲಿ 200 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡಿದೆ.  ಘೋಸ್ಟ್ ಸಿನಿಮಾದ ಈ ಸಕ್ಸಸ್ನ್ ಸೆಲಬ್ರೇಟ್ ಮಾಡೋದಕ್ಕೆ ಶ್ರೀ ಮುತ್ತು ನಿವಾಸದಲ್ಲೇ ಮಾಧ್ಯಮಮಿತ್ರರನ್ನ ಆಹ್ವಾನಿಸಿದ್ದ ಶಿವಣ್ಣ, ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಘೋಸ್ಟ್ ಪಾರ್ಟ್-2, ಭೈರತಿ ರಣಗಲ್ ಸಿನಿಮಾಗಳ ಬಗ್ಗೆ ಅಪ್ಡೇುಟ್ ನೀಡಿದ ಹ್ಯಾಟ್ರಿಕ್ ಹೀರೋ, ತನ್ನ ಮುಂದಿನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಇರುವುದನ್ನ ಖಚಿತಪಡಿಸಿದರು.


COMMERCIAL BREAK
SCROLL TO CONTINUE READING

ಶಿವಣ್ಣನ 'ಭಜರಂಗಿ 2', 'ವೇದ' ಹಾಗೂ 'ಘೋಸ್ಟ್' ಈ ಮೂರು ಸಿನಿಮಾಗಳು 100 ಮಿಲಿಯನ್ ನಿಮಿಷಗಳಷ್ಟು ಸ್ಟ್ರೀಮಿಂಗ್ ಆಗಿದೆ. ಈ ಬಗ್ಗೆ ಸ್ವತ: ಶಿವಣ್ಣ ಖುಷಿ ವ್ಯಕ್ತಪಡಿಸಿದ್ದಾರೆ. "ಜೀ 5ನಲ್ಲಿ ಇದು ಮೂರನೇ ಕನೆಕ್ಷನ್. ಭಜರಂಗಿ 2, ವೇದ ಮತ್ತು ಘೋಸ್ಟ್. ಮೂರು ಸಿನಿಮಾ ತುಂಬಾ ಚೆನ್ನಾಗಿ ಸ್ಟ್ರೀಮಿಂಗ್ ಆಗಿರೋದ್ರಿಂದ ನಮಗೆ ಜೀ ಕನೆಕ್ಷನ್ ಜಾಸ್ತಿ ಇದೆ ಅಂತ ಅನಿಸುತ್ತೆ. ಕನ್ನಡ ಡಬ್ ಸಿನಿಮಾ ನೋಡುತ್ತಾರೆ. ಆದರೆ, ಕನ್ನಡ ಸಿನಿಮಾ ನೋಡೋದು ಕಡಿಮೆ. ಅದೇ ಈಗ ಹೆಚ್ಚಾಗಿದೆ. ಇನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಸಿನಿಮಾ ರಿಲೀಸ್ ಮಾಡಿದ್ದರು. ಅಲ್ಲೆಲ್ಲ ಚೆನ್ನಾಗಿಯೇ ರೆಸ್ಪಾನ್ಸ್ ಸಿಕ್ಕಿದೆ." ಎಂದು ಶಿವಣ್ಣ ಹೇಳಿದ್ದಾರೆ.


ಇದನ್ನೂ ಓದಿ: Kalaburagi: ಹಾಡಹಗಲೇ ವಕೀಲನ ಬರ್ಬರ ಹತ್ಯೆ..!


‘ಹಾಯ್ ನಾನ್ನ’ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನ್ಯಾಚುರಲ್ ಸ್ಟಾರ್ ನಾನಿ ಶಿವಣ್ಣನ ಮನೆಗೆ ಭೇಟಿ ಕೊಟ್ಟಿದ್ದರು. ಶಿವಣ್ಣ ನಾನಿ ಭೇಟಿ ಬೆನ್ನಲ್ಲೆ ಇವರಿಬ್ಬರ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಗುಲ್ಲೆದಿತ್ತು. ಅದಕ್ಕೂ ಪ್ರತಿಕ್ರಿಯಿಸಿರುವ ಶಿವಣ್ಣ, ಸಿನಿಮಾವೊಂದಕ್ಕೆ ಗೆಸ್ಟ್ ಅಪಿಯರೆನ್ಸ್ ಮಾಡಬೇಕು ಎಂದು ಫೋನ್ ಮಾಡಿದ್ದೆ. ತಕ್ಷಣ ಯಸ್ ಎಂದಿದ್ದರು. ನಾನೇ ಅಲ್ಲಿಗೆ ಬರುತ್ತೇನೆ ಎಂದಿದ್ದೆ. ಇಲ್ಲ ನಾನೇ ಅಲ್ಲಿಗೆ ಬರುತ್ತೇನೆ. ಆಮೇಲೆ ಅದು ಬೇಡ ಅನಿಸಿತು. ಇನ್ನೊಮ್ಮೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡೋಣಾ ಅಂದುಕೊಂಡಿದ್ದೇವೆ ಎಂದರು.


ವಿದೇಶದಲ್ಲಿಯೂ ಘೋಸ್ಟ್ ಸಿನಿಮಾಗೆ ಸಿಕ್ಕ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಶ್ರೀನಿ ಹಾಗೂ ಶಿವಣ್ಣ, "ಆಸ್ಟ್ರೇಲಿಯಾ, ಅಮೆರಿಕಾ, ಯುಕೆಯಲ್ಲಿ ಹೆಚ್ಚು ತುಂಬಾನೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಆ ಸಮಯದಲ್ಲಿ ಸ್ವಲ್ಪ ದೊಡ್ಡ ದೊಡ್ಡ ಸಿನಿಮಾಗಳೇ ಬಂತು. ಆದರೂ, ಚೆನ್ನಾಗಿ ಹೋಯ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ. 


ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆ: ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ


'ಸಂದೇಶ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿ 'ಘೋಸ್ಟ್' ನಿರ್ಮಾಣವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಅಬ್ಬರ ತೋರಿತ್ತು ಸಿನಿಮಾ. ಇನ್ನು ಈ ಸಿನ್ಮಾಗೆ ಅರ್ಜುನ್‌ ಜನ್ಯಾ ಸಂಗೀತ ಇದೆ. ನಟ ಶಿವಣ್ಣ ಅವರ ಜೊತೆಗೆ ಮಲಯಾಳಂ ನಟ ಜಯರಾಮ್‌ & ಬಾಲಿವುಡ್ ನಟ ಅನುಪಮ್‌ ಖೇರ್‌, ಸತ್ಯಪ್ರಕಾಶ್‌, ನಿರ್ದೇಶಕ ಎಂಜಿ ಶ್ರೀನಿವಾಸ್‌ ಮತ್ತು ಇತರರು ಸಾಥ್ ನೀಡಿದ್ದರು. ಹೀಗಾಗಿ ಸಿನಿಮಾ ಭಾರತದ ಮೂಲೆ ಮೂಲೆಯಲ್ಲು ಸದ್ದು ಮಾಡಿತ್ತು. ಈಗ ಓಟಿಟಿ ಅಂಗಳದಲ್ಲೂ ದಾಖಲೆ ಬರೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.