ಗೂಗ್ಲಿ ಸಿನಿಮಾದ ಖ್ಯಾತಿಯ ನಿರ್ದೇಶಕನ ಎರಡನೆ ಮಗುವಿಗೆ ನಾಮಕರಣ ಮಾಡಿದ್ದಾರೆ. ಸ್ಯಾಂಡಲ್ವುಡ್‌ ಹೆಸರಾಂತ ದಂಪತಿಗಳಾದ ನಿರ್ದೇಶಕ-ನಿರ್ಮಾಪಕ ಪವನ್‌ ಒಡೆಯರ್‌ ಹಾಗೂ ನಟಿ ಅಪೇಕ್ಷಾ ಪುರೋಹಿತ್‌ ತಮ್ಮ ಮನೆಗೆ ಕ್ಯೂಟಾದ ಹೆಣ್ಣು ಮಗುವೊಂದು ಬರಮಾಡಿಕೊಂಡಿದ್ದರು. ಸದ್ಯ ಆ ಮಗುವಿನ ನಾಮಕರಣ ಮಾಡಲಾಗಿದ್ದು ಪವನ್- ಅಪೇಕ್ಷಾ ದಂಪತಿಯ ಮಗಳ ನಾಮಕರಣ ಅದ್ಧೂರಿಯಾಗಿ ನೆರವೇರಿದೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ನಟಿ ಅಪೇಕ್ಷ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿ, ಇವಳೇ ನಮ್ಮ ಜೀವನದ ಹೊಸ ಪ್ರೀತಿ, ರಾಜಕುಮಾರಿ ಹಾಗೂ ಶೌರ್ಯನ ತಂಗಿ. ನಾವು ಇವಳನ್ನ ‘ಯಾದ್ವಿ ಒಡೆಯರ್’ ಅಂತ ಕರೆಯುತ್ತೇವೆ’ ಎಂದು ಬರೆದುಕೊಂಡಿದ್ದಾರೆ.  


ಇದನ್ನೂ ಓದಿ- ಸೌದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ ಇನಾಮ್ದಾರ ಚಿತ್ರ ನಟ ರಂಜನ್ ಛತ್ರಪತಿ


ಈ ಫೋಟೋಗಳಲ್ಲಿ ನಿರ್ದೇಶಕ-ನಿರ್ಮಾಪಕ ಪವನ್‌ ಒಡೆಯರ್‌ ಹಾಗೂ ನಟಿ ಅಪೇಕ್ಷಾ ಪುರೋಹಿತ್‌  ಕುಟುಂಬ ತುಂಬಾ ಕ್ಯೂಟಾಗಿ ಕಾಣುತ್ತಿದೆ. 


ನಟಿ ಅಪೇಕ್ಷ ಮೂರು ವರ್ಷಗಳ ಹಿಂದೆ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ದಂಪತಿ ತಮ್ಮ ಪುತ್ರನಿಗೆ ಶೌರ್ಯ ಎಂದು ನಾಮಕರಣ ಮಾಡಿದ್ದಾರೆ. ಶೌರ್ಯ 2020ರ ಡಿಸೆಂಬರ್‌ ತಿಂಗಳಲ್ಲಿ ಜನಿಸಿದರು. ಈ ತಿಂಗಳ ಜುಲೈ ತಿಂಗಳಿನಲ್ಲಿ ಅಪೇಕ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  


ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಿರ್ದೇಶಕರಲ್ಲಿ ಪವನ್‌ ಒಡೆಯರ್‌ ಕೂಡ ಒಬ್ಬರು. ಇವರು ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸಿನಿಮಾಗಳನ್ನು ಡೈರೆಕ್ಷನ್‌ ಮಾಡಿದ್ದಾರೆ. ಹಾಗೆ ಅಪೇಕ್ಷಾ ಪುರೋಹಿತ್‌ ಅವರು ಹಲವಾರು ಧಾರವಾಹಿಗಳಲ್ಲಿ ನಟಿಸುವುದರ ಮೂಲಕ ಜನಪ್ರಿಯರಾಗಿದ್ದರು. ನಂತರ ಅಪೇಕ್ಷಾ ಪುರೋಹಿತ್‌ 'ಕಾಫಿ ತೋಟ'  ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಪವನ್‌ ಹಾಗೂ ಅಪೇಕ್ಷ  2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 


ಇದನ್ನೂ ಓದಿ- ಸಿನಿರಂಗಕ್ಕೆ ಮತ್ತಿಬ್ಬರು ಸ್ಟಾರ್‌ ಪುತ್ರಿಯರ ಆಗಮನ..ಯಾರವರು ಅಂತೀರಾ?


ಚಂದನವನದ ಜನಪ್ರಿಯ ಜೋಡಿಗಳಲ್ಲಿ ಒಂದಾದ ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್ ಅವರ ನಿರ್ಮಾಣದ 'ಡೊಳ್ಳು'  ಸಿನಿಮಾಗೆ ಕಳೆದ ವರ್ಷ ರಾಷ್ಟ್ರ ಪ್ರಶಸ್ತಿ ದೊರಕಿತ್ತು. ಅದೇ ಸಿನಿಮಾಗೆ ಈ ವರ್ಷ ಸೈಮಾ 2023 ಪ್ರಶಸ್ತಿ ಕೂಡ ಸಿಕ್ಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.