Bigg Boss Kannada Season 11 Grand Finale Date: ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭಗೊಂಡು ಅದಾಗಲೆ 3 ತಿಂಗಳು ಆಗಿದೆ. ಸ್ಪರ್ಧಿಗಳ ಆಟ ನೋಡುತ್ತಾ ದಿನಗಳು ಸಾಗಿರುವುದೇ ತಿಳಿಯಲಿಲ್ಲ ಎನ್ನುತ್ತಿರುವಾಗಲೇ ಫಿನಾಲೆ ಕೂಡ ಹತ್ತಿರ ಬಂದಿದೆ. ಈಗಾಗಲೇ ದೊಡ್ಮನೆಯಲ್ಲಿ 9 ಮಂದಿ ಇದ್ದು ಈ ಪೈಕಿ ಐವರಷ್ಟೇ ಫಿನಾಲೆಗೆ ಕಾಲಿಡಲಿದ್ದಾರೆ. ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ... ಜನವರಿ 12 ರಿಂದ ಶಾಲೆಗಳಿಗೆ 6 ದಿನಗಳ ಕಾಲ ರಜೆ! ಕಾರಣ ಸಮೇತ ಆದೇಶ...


ಸದ್ಯ ಬಿಗ್‌ ಬಾಸ್‌ ಸೀಸನ್‌ 11 ಫಿನಾಲೆ ಯಾವಾಗ ನಡೆಯಲಿದೆ? ಸಮೀಕ್ಷೆ ಪ್ರಕಾರ ಯಾರು ಗೆಲ್ಲಬಹುದು? ಎಂಬುದನ್ನು ಅಂದಾಜಿನ ಉತ್ತರಗಳು ದೊರೆತಿವೆ.


ಕಳೆದ ಸೀಸನ್‌ ಅಂದರೆ ಬಿಗ್‌ ಬಾಸ್‌ ಸೀಸನ್‌ 10, 112 ದಿನಗಳ ಕಾಲ ನಡೆದಿತ್ತು. ಅಕ್ಟೋಬರ್ 8ರಂದು ಆರಂಭವಾಗಿದ್ದ ಶೋ ಜನವರಿ 28ರವರೆಗೆ ನಡೆದಿತ್ತು. ಕಾರ್ತಿಕ್ ಮಹೇಶ್ ಆ ಸೀಸನ್‌ ವಿನ್ನರ್ ಆಗಿದ್ದರು.


ಇನ್ನು ಈ ಬಾರಿಯ ಬಿಗ್ ಬಾಸ್ ಆರಂಭ ಆಗಿದ್ದು ಸೆಪ್ಟೆಂಬರ್ 29ರಂದು. ಅಂದರೆ ಕಳೆದ ಸೀಸನ್​ಗಿಂತ ಒಂದು ವಾರ ಮೊದಲೇ ಶುರುವಾಗಿತ್ತು. ಇನ್ನು ಈ ಸಲ, ಒಂದು ವಾರ ಹೆಚ್ಚುವರಿಯಾಗಿ ಬಿಗ್ ಬಾಸ್ ಶೋ ನಡೆಯಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಈ ವರದಿ ನಿಜವಾದಲ್ಲಿ ಜನವರಿ 26ರಂದು ಫಿನಾಲೆ ನಡೆಯಲಿದೆ. ಅಂದು ಭಾನುವಾರ ಹಾಗೂ ಗಣರಾಜ್ಯೋತ್ಸವ ಎರಡೂ ಇದ್ದು, ಈ ವಿಶೇಷ ದಿನದಂದೇ ಫಿನಾಲೆ ನಡೆಯುವ ಸಾಧ್ಯತೆಯಿದೆ.


ದೊಡ್ಮನೆಯಲ್ಲಿ ಇದೀಗ 9 ಮಂದಿ ಇದ್ದು, ಈ ಪೈಕಿ ಐವರು ಮಾತ್ರ ಫಿನಾಲೆ ತಲುಪಲಿದ್ದಾರೆ. ಉಳಿದ ನಾಲ್ವರ ಪೈಕಿ ಒಂದು ಡಬಲ್ ಎಲಿಮಿನೇಷನ್ ಮತ್ತು ವಾರದ ಮಧ್ಯೆ ಮತ್ತಿಬ್ಬರು ಹೊರಹೋಗುವ ಸಾಧ್ಯತೆ ಇದೆ. ‌


ಇದನ್ನೂ ಓದಿ: ಧಕ್ ಧಕ್ ಸುಂದರಿ ಮಾಧುರಿ ಧೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್ ರೂಮಿನಲ್ಲಿ ಬಿಕ್ಕಳಿಸಿ ಅತ್ತಿದ್ದರಂತೆ ಈ ಸ್ಟಾರ್ ಆಟಗಾರ !


ಇನ್ನು ಈಗಾಗಲೇ ಅನೇಕ ಸೋಶಿಯಲ್‌ ಮೀಡಿಯಾ ಸಮೀಕ್ಷೆಗಳು ನಡೆಯುತ್ತಿವೆ. ಈ ಪೈಕಿ ತ್ರಿವಿಕ್ರಮ್‌ ಈ ಬಾರಿಯ ವಿನ್ನರ್‌ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇವರಿಗೆ ರಜತ್‌ ಮತ್ತು ಉಗ್ರಂ ಮಂಜು ಕೂಡ ಭರ್ಜರಿ ಫೈಟ್‌ ನೀಡುತ್ತಿದ್ದು, ಅಂತಿಮ ಕ್ಷಣದಲ್ಲಿ ಯಾರು ಬಿಗ್‌ ಬಾಸ್‌ ಟ್ರೋಫಿ ಎತ್ತಿಹಿಡಿಯಲಿದ್ದಾರೆ ಎಂಬುದು ತಿಳಿದುಬರಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.