ಕೆಜಿಎಫ್ 2 ಪ್ಯಾನ್ ಇಂಡಿಯಾ ಸಿನಿಮಾ. ಭಾರತ ಸೇರಿದಂತೆ ವಿಶ್ವಾದ್ಯಂತ ಈ ಸಿನಿಮಾ ರಿಲೀಸ್‌ ಆಗಿದೆ. ಟ್ರೈಲರ್, ಟೀಸರ್ ಮತ್ತು​ ಹಾಡುಗಳಿಂದ ಹೈಪ್‌ ಕ್ರಿಯೇಟ್‌ ಮಾಡಿದ್ದ ಕೆಜಿಎಫ್‌ 2 ಸಿನಿಮಾ ಇದೀಗ ವಿಶ್ವದಾದ್ಯಂತ 10,500 ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡಿದೆ. ಭಾರತದಲ್ಲಿಯೇ 6000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KGF 3: ಕೆಜಿಎಫ್‌ 2 ಬಳಿಕ ಬರಲಿದ್ಯಾ ಕೆಜಿಎಫ್ 3! ಚಿತ್ರದ ಕೊನೆಯಲ್ಲಿ ಟ್ವಿಸ್ಟ್‌ ಬಿಚ್ಚಿಟ್ಟ ಗುಟ್ಟೇನು?


ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್2 ಸೃಷ್ಟಿಸಿದ್ದ ಕ್ರೇಜ್ ಅಷ್ಟಿಷ್ಟಲ್ಲ. 2018 ರಲ್ಲಿ ರಿಲೀಸ್ ಆಗಿದ್ದ  ಕೆಜಿಎಫ್ ಇಡೀ ವಿಶ್ವವೇ ಕನ್ನಡ  ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಅಲ್ಲಿಂದ ಕೆಜಿಎಫ್ ಕೇವಲ ಸಿನಿಮಾ ಆಗಿ ಮಾತ್ರವಲ್ಲ ಒಂದು ಬ್ರ್ಯಾಂಡ್ ಆಗಿ ಹವಾ ಹುಟ್ಟು ಹಾಕಿತು. 


 


ಕೆಜಿಎಫ್ 2 ವೀಕ್ಷಿಸಿದ ನಂತರ, ಅನೇಕ ನೆಟಿಜನ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ: KGF 2 Box Office:ಬಾಕ್ಸ್ ಆಫೀಸಿನಲ್ಲಿ ಇದು ವರೆಗೆ ಕೆಜಿಎಫ್2 ಕಲೆ ಹಾಕಿದ್ದೆಷ್ಟು?


ಕನ್ನಡದ ಡಬ್ಬಿಂಗ್ ಚಲನಚಿತ್ರವು ಕೇರಳದಲ್ಲಿ ಭರ್ಜರಿ ಹವಾ ಹುಟ್ಟು ಹಾಕಿದೆ. ಕೇರಳದಲ್ಲಿ ಚಿಂಗಾರಿ ಮೇಳದ ಮೂಲಕ ರಾಕಿಭಾಯ್‌ಗೆ ಫ್ಯಾನ್ಸ್‌ ಸ್ವಾಗತ ಕೋರಿದ್ದಾರೆ. ಇದರ ವಿಡಿಯೋ ತುಣುಕೊಂದನ್ನು ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.