ಹನ್ಸಿಕಾ ಮೊಟ್ವಾನಿ ಮದುವೆ ಫಿಕ್ಸ್ : ರಾಜಸ್ಥಾನದ ಕೋಟೆಯಲ್ಲಿ ʼಬಿಂದಾಸ್ʼ ಬೆಡಗಿ ವಿವಾಹ..!
ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಎಂದು ಪುನೀತ್ ರಾಜ್‌ಕುಮಾರ್ ಅಭಿನಯದ ʼಬಿಂದಾಸ್ʼ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ಹನ್ಸಿಕಾ ಮೊಟ್ವಾನಿ ಸದ್ಯ ಮದುವೆಯ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಡಿಸೆಂಬರ್ ತಿಂಗಳಲ್ಲಿ ಬಹುಭಾಷಾ ನಟಿ ಹನ್ಸಿಕಾ ರಾಜಸ್ಥಾನದ ಜೈಪುರದಲ್ಲಿರುವ ಮುಂದೋಟಾ ಕೋಟೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು : ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಎಂದು ಪುನೀತ್ ರಾಜ್‌ಕುಮಾರ್ ಅಭಿನಯದ ʼಬಿಂದಾಸ್ʼ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ಹನ್ಸಿಕಾ ಮೊಟ್ವಾನಿ ಸದ್ಯ ಮದುವೆಯ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಡಿಸೆಂಬರ್ ತಿಂಗಳಲ್ಲಿ ಬಹುಭಾಷಾ ನಟಿ ಹನ್ಸಿಕಾ ರಾಜಸ್ಥಾನದ ಜೈಪುರದಲ್ಲಿರುವ ಮುಂದೋಟಾ ಕೋಟೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.
ಬಾಲಿವುಡ್ ಹಿಟ್ ಸಿನಿಮಾ ʼಕೊಯಿ ಮಿಲ್ ಗಯಾʼ ಮೂಲಕ ಬಾಲನಟಿಯಾಗಿ ಸಿನಿರಂಗ ಪ್ರವೇಶಿಸಿದ ಹನ್ಸಿಕಾ ಸದ್ಯ ಮದುವೆ ತಯಾರಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಹನ್ಸಿಕಾ ವರಿಸಲಿರುವ ಹುಡುಗ ಯಾರು..? ಎಲ್ಲಿ ಮದುವೆ ನಡೆಯುತ್ತೆ..? ಎನ್ನುವ ಕುರಿತು ಸ್ಪಷ್ಟ ಮಾಹಿತಿ ಇನ್ನೂ ನಟಿ ತಿಳಿಸಿಲ್ಲ. ರಾಜಸ್ಥಾನದ ಮುಂದೋಟಾ ಪೋರ್ಟ್‌ನಲ್ಲಿ ಹನ್ಸಿಕಾ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಮಾತ್ರ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಅಲ್ಲದೆ, ಡಿಸೆಂಬರ್ ತಿಂಗಳಿನಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Bigg Boss : ಆ ಬಿಗ್‌ಬಾಸ್ ಸ್ಪರ್ಧಿ ನನ್ನ ಖಾಸಗಿ ಭಾಗದ ಸೈಜ್ ಕೇಳಿದ..!
50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಾಶ್ಮಿರಿ ಆಪಲ್ ಬ್ಯೂಟಿ, ಕನ್ನಡದ ಬಿಂದಾಸ್ ಸಿನಿಮಾದಲ್ಲಿ ನಟಿಸಿದ್ದರು. ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಹನ್ಸಿಕಾ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇನ್ನು ಅಲ್ಲು ಅರ್ಜುನ್ ಅಭಿನಯದ ʼದೇಶ ಮುದ್ರುಡುʼ ಸಿನಿಮಾದ ಮೂಲಕ ತೆಲುಗಿನಲ್ಲಿ ಹನ್ಸಿಕಾ ಮೋಡಿ ಮಾಡಿದ್ದರು. ಮೂಲಗಳ ಪ್ರಕಾರ ಖ್ಯಾತ ರಾಜಕಾರಣಿಯ ಕುಟುಂಬದ ಹುಡುಗನನ್ನು ಹನ್ಸಿಕಾ ವಿವಾಹವಾಗಲಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಈ ಕುರಿತು ಎಲ್ಲೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಈ ಸುದ್ದಿಯ ಕುರಿತು ಹನ್ಸಿಕಾ ಯಾವ ರೀತಿ ರಿಯಾಕ್ಟ್ ಆಗ್ತಾರೋ ಕಾಯ್ದು ನೋಡಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.