Bigg Boss : ಆ ಬಿಗ್‌ಬಾಸ್‌ ಸ್ಪರ್ಧಿ ನನ್ನ ಖಾಸಗಿ ಭಾಗದ ಸೈಜ್‌ ಕೇಳಿದ..!

ಬಿಗ್ ಬಾಸ್ 16 ಹಿಂದಿ ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿರುವ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ MeToo ಆರೋಪಗಳು ಕೇಳಿ ಬರುತ್ತಿವೆ. ಶೆರ್ಲಿನ್ ಚೋಪ್ರಾ, ಮಂದನಾ ಕರಿಮಿ, ಕನಿಷ್ಕಾ ಸೋನಿ, ಅಹನಾ ಕುಮ್ರಾ, ಸಲೋನಿ ಚೋಪ್ರಾ, ರಾಚೆಲ್ ವೈಟ್ ಸೇರಿದಂತೆ ಹಲವಾರು ಖ್ಯಾತ ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದೀಗ, ಜನಪ್ರಿಯ ಭೋಜ್‌ಪುರಿ ನಟಿ ರಾಣಿ ಚಟರ್ಜಿ ಸಾಜಿದ್‌ ಖಾನ್‌ ವಿರುದ್ಧ ವಿವಾದಾತ್ಮಕ ಆರೋಪ ಮಾಡಿದ್ದಾರೆ.  

Written by - Krishna N K | Last Updated : Oct 17, 2022, 02:36 PM IST
  • ಬಿಗ್ ಬಾಸ್ 16 ಹಿಂದಿ ಸ್ಪರ್ಧಿ ವಿರುದ್ಧ ಲೈಂಗಿಕ ಕಿರುಕುಳ ದೂರು
  • ಬಾಲಿವುಡ್‌ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ MeToo ಆರೋಪ
  • ಸಾಜಿದ್‌ ಖಾನ್‌ ವಿರುದ್ಧ ಆರೋಪಿಸಿದ ಜನಪ್ರಿಯ ಭೋಜ್‌ಪುರಿ ನಟಿ ರಾಣಿ ಚಟರ್ಜಿ
Bigg Boss : ಆ ಬಿಗ್‌ಬಾಸ್‌ ಸ್ಪರ್ಧಿ ನನ್ನ ಖಾಸಗಿ ಭಾಗದ ಸೈಜ್‌ ಕೇಳಿದ..! title=

ಬೆಂಗಳೂರು : ಬಿಗ್ ಬಾಸ್ 16 ಹಿಂದಿ ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿರುವ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ MeToo ಆರೋಪಗಳು ಕೇಳಿ ಬರುತ್ತಿವೆ. ಶೆರ್ಲಿನ್ ಚೋಪ್ರಾ, ಮಂದನಾ ಕರಿಮಿ, ಕನಿಷ್ಕಾ ಸೋನಿ, ಅಹನಾ ಕುಮ್ರಾ, ಸಲೋನಿ ಚೋಪ್ರಾ, ರಾಚೆಲ್ ವೈಟ್ ಸೇರಿದಂತೆ ಹಲವಾರು ಖ್ಯಾತ ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದೀಗ, ಜನಪ್ರಿಯ ಭೋಜ್‌ಪುರಿ ನಟಿ ರಾಣಿ ಚಟರ್ಜಿ ಸಾಜಿದ್‌ ಖಾನ್‌ ವಿರುದ್ಧ ವಿವಾದಾತ್ಮಕ ಆರೋಪ ಮಾಡಿದ್ದಾರೆ.

ಭೋಜ್‌ಪುರಿ ಸಿನಿರಂಗದಲ್ಲಿ ಸಾಕಷ್ಟು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿರುವ ರಾಣಿ ಅವರು 'ಹಿಮ್ಮತ್‌ವಾಲಾ' ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆ ಕುರಿತು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಸಾಜಿದ್‌ ನನಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದರು. ಅಲ್ಲದೆ ಪಿಆರ್‌ಓ ಅಥವಾ ಮ್ಯಾನೇಜರ್‌ನನ್ನು ಕರೆತರಬೇಡ ಇದು ಸೌಜನ್ಯಯುತ ಭೇಟಿ ಅಷ್ಟೆ ಎಂದಿದ್ದರು. ಅವರು ಬಾಲಿವುಡ್‌ನಲ್ಲಿ ತುಂಬಾ ದೊಡ್ಡ ನಿರ್ದೇಶಕರಾಗಿರುವುದರಿಂದ, ನಾನು ಅವರ ಮಾತುಗಳನ್ನು ಕೇಳಿದೆ. ನಾನು ಅವರ ಮನೆಗೆ ಹೋಗಿದ್ದೆ ಎಂದರು.

ಇದನ್ನೂ ಓದಿ: ʼಓ ನನ್ನ ಸಂತೋಷವೇ ನಿನಗೆ ಹುಟ್ಟುಹಬ್ಬದ ಶುಭಾಶಯʼ

ಇನ್ನು ಮಾತು ಮುಂದುವರೆಸಿ, ಅಲ್ಲಿ ಅವರು ಒಬ್ಬರೇ ಇದ್ದರು. ಅವರು ಆರಂಭದಲ್ಲಿ ನನ್ನನ್ನು 'ಧೋಕಾ ಧೋಕಾ' ಐಟಂ ಸಾಂಗ್‌ಗೆ ನಟಿಸುವುದಾಗಿ ಹೇಳಿದರು. ಅಲ್ಲದೆ, ನೀವು ಚಿಕ್ಕ ಲೆಹೆಂಗಾ ಧರಿಸಬೇಕು ಅದಕ್ಕಾಗಿ ನಿಮ್ಮ ನನ್ನ ಕಾಲುಗಳನ್ನು ಒಮ್ಮೆ ತೋರಿಸಿ ಎಂದರು, ನಾನು ಉದ್ದನೆಯ ಸ್ಕರ್ಟ್ ಧರಿಸಿದ್ದೆ, ಅದನ್ನು  ಮೊಣಕಾಲುಗಳವರೆಗೆ ಎತ್ತಿ ತೋರಿಸಬೇಕಾಗಿ ಬಂತು, ನಾನು ಅದನ್ನ ಸಿನಿಮಾದ ಭಾಗವಾಗಿ ನಂಬಿದ್ದೆ. ನನ್ನ ಕಾಲನ್ನು ಪರೀಕ್ಷಿಸಿದ ನಂತರ ಸಾಜಿದ್‌ ನನ್ನ ಸ್ತನದ ಗಾತ್ರದ ಬಗ್ಗೆ ಪ್ರಶ್ನಿಸಿದರು. ಅಲ್ಲದೆ, ನನ್ನ ಲೈಂಗಿಕ ಜೀವನದ ಬ್ಗಗೆ ಕೇಳಿದ್ರು. ಅಲ್ಲದೆ, ಅನುಚಿತವಾಗಿ ಮುಟ್ಟಲು ಪ್ರಯತ್ನಿಸಿದರು ಎಂದು ರಾಣಿ ಬಹಿರಂಗಪಡಿಸಿದ್ದಾರೆ

ಇನ್ನು ನನ್ನ ಸ್ತನ ಗಾತ್ರದ ಬಗ್ಗೆ ಕೇಳಿದಾಗ ನನಗೆ ಭಯವಾಯಿತು. ನಾಚಿಕೆಪಡಬೇಡ, ನಿನಗೆ ಬಾಯ್‌ಫ್ರೆಂಡ್ ಇದ್ದಾನೋ ಇಲ್ಲವೋ? ನೀವು ಎಷ್ಟು ಬಾರಿ ಸಂಭೋಗ ಮಾಡುತ್ತೀರಿ? ಆಗ ನನಗೆ ಕೋಪ ಬಂತು.. ನಾನು ಇದೆಲ್ಲಾ ಏನು..? ಎಂದು ಪ್ರಶ್ನಿಸಿದೆ. ಆದ್ರೆ, ಅವರು ನಾನು ಅವರಿಗೆ ಸಹಕರಿಸುತ್ತೇನೆ ಎಂದು ತಿಳಿದಿದ್ದರು. ತಕ್ಷಣ ನಾನು ಅಲ್ಲಿಂದ ಹೊರಟೆ ಎಂದು ರಾಣಿ ಚರ್ಟರ್ಜಿ ಸಾಜಿದ್‌ ಮನೆಯಲ್ಲಿ ನಡೆದ ಘಟನೆಯ ಕುರಿತು ವಿವರಿಸಿದ್ದಾರೆ.

ಇದನ್ನೂ ಓದಿ: Kantara vs Godfather : ಬಾಕ್ಸಾಫೀಸ್‌ನಲ್ಲಿ ಕಾಂತಾರ vs ಗಾಡ್‌ಫಾದರ್!

ಇನ್ನು ಇತ್ತೀಚೆಗೆ, ಬಿಗ್ ಬಾಸ್ 16 ರ ಮನೆಯಿಂದ ಸಾಜಿದ್ ಅವರನ್ನು ಹೊರಹಾಕಲು ಜನರ ಒತ್ತಡ ಹೇರುತ್ತಿರುವ ಹಿನ್ನೆಲೆ ಕಾರ್ಯಕ್ರಮ ನಿರ್ಮಾಪಕರು ಅವರಿಗೆ ಬಿಗ್‌ಹೌಸ್‌ನಿಂದ ಹೊರಗೆ ಕಳುಹಿಸಲು ಯೋಚನೆ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಆದರೂ, ಸಾಜಿದ್ ಬಿಗ್‌ಬಾಸ್‌ ಭಾಗವಾಗಿ ಮುಂದುವರೆಯುವುದರಲ್ಲಿ ಯಾವುದೇ ಸುಳ್ಳಿಲ್ಲ ಎಂದು ತೋರುತ್ತದೆ. ಮುಂದೆ ಬಿಗ್‌ಬಾಸ್‌ ಯಾವ ನಿರ್ಧಾರ ಕೈಗೊಳ್ಳುತ್ತೆ ಅಂತ ಕಾಯ್ದು ನೋಡ್ಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News