Vasishta simha Haripriya wedding : ಸ್ಯಾಂಡಲ್‌ವುಡ್‌ ಕ್ಯೂಟ್‌ ಹುಡುಗಿ ಹರಿಪ್ರಿಯಾ ಮದುವೆಯಂತೆ. ನಟ ವಸಿಷ್ಠ ಸಿಂಹ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಮದುವೆಗಾಗಿಯೇ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.


COMMERCIAL BREAK
SCROLL TO CONTINUE READING

ತನ್ನ ಬೊಲ್ಡ್‌ ನಟನೆಯಂದ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿರುವ ನಟಿ ಅಂದ್ರೆ ಹರಿಪ್ರಿಯಾ. ಚಾಲೆಂಜಿಂಗ್ ಪಾತ್ರದ ಮೂಲಕ ತಮ್ಮ ನಟನೆಗೆ ನ್ಯಾಯ ಒದಗಿಸುವ ನಟಿ ಹಲವಾರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೆಟ್ರೋಮ್ಯಾಕ್ಸ್‌ನಲ್ಲಿ ಹರಿಪ್ರಿಯಾ ಸಖತ್‌ ಬೊಲ್ಡಾಗಿ ನಟಿಸಿದ್ದರು. ಅಲ್ಲದೆ, ಕೆಲವರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಇನ್ನು ಹರಿಪ್ರಿಯಾ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದು, ವಸಿಷ್ಠ ಸಿಂಹ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ರಿಷಬ್ ಶೆಟ್ಟಿ ಮುಂದಿನ ನಡೆ ಯಾವ ಸಿನಿಮಾ ಕಡೆ ಅನ್ನೋ ಗುಟ್ಟು ಇದೀಗ ರಟ್ಟು..!


 

 

 

 



 

 

 

 

 

 

 

 

 

 

 

A post shared by Hariprriya (@iamhariprriya)


ಹೌದು ಈ ಮಾತು ಕೇಳಿಬರುವಂತೆ ಮಾಡಿದ್ದು, ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ವಿಚಾರ. ಈ ಕುರಿತು ವಿಡಿಯೋ ಒಂದು ವೈರಲ್‌ ಆಗಿತ್ತು. ಅಲ್ಲದೆ, ಮದುವೆಗಾಗಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವಾಗ ಪಕ್ಕದಲ್ಲಿ ವಸಿಷ್ಠ ಸಿಂಹ ಇದ್ದರೂ ಇಬ್ಬರ ಮದುವೆಯಾಗುತ್ತಿದೆ. ಅದಕ್ಕಾಗಿ ಎಲ್ಲಾ ರೀತಿಯಿಂದ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಇನ್ನು ವೈರಲ್‌ ಆದ ವಿಡಿಯೋದಲ್ಲಿ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವಾಗ ವಸಿಷ್ಠ ಸಿಂಹ ಜೊತೆಗಿದ್ದು, ಹರಿಪ್ರಿಯಾ ನೋವಿನಿಂದ ಕಣ್ಣಿರು ಹಾಕಿದಾಗ, ಕಣ್ಣೀರು ಒರೆಸಿ, ಪ್ರೀತಿಯಿಂದ ತಲೆ ಸವರಿ ಮುತ್ತಿಟ್ಟಿದ್ದಾರೆ. ಅಲ್ಲದೆ, ಏನು ಆಗಲ್ಲ ಎನ್ನುವ ವಸಿಷ್ಠ ಸಿಂಹ ಧ್ವನಿ ವಿಡಿಯೋದಲ್ಲಿ ಕೇಳುತ್ತಿದೆ. ಈ ಎಲ್ಲಾ ಸಂಗತಿಗಳು ಇಬ್ಬರು ಸ್ಟಾರ್ಸ್‌ ಮದುವೆಯಾಗ್ತಾರೆ ಎಂಬ ಅನುಮಾನಗಳು ಹುಟ್ಟಲು ಕಾರಣವಾಗಿದೆ. ಆದ್ರೆ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.