ಉಪ್ಪಿ ʼUIʼ ಸಿನಿಮಾದಲ್ಲಿ ಸನ್ನಿ : ಕಿಕ್‌ ಏರಿಸಲು ಸ್ಯಾಂಡಲ್‌ವುಡ್‌ಗೆ ಮತ್ತೇ ಬಂದ ಶೇಷಮ್ಮ..!

ಉಪ್ಪಿ ಡೈರೆಕ್ಷನ್ ಸಿನಿಮಾಗಳಲ್ಲಿ ಆಕ್ಟ್ ಮಾಡೋಕೆ ಅವಕಾಶ ಸಿಕ್ರೆ ಸಾಕಪ್ಪ ಅಂತ ನಟ ನಟಿಯರು ಕಾಯ್ತಾರೆ. ಅದರೆ ಅ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತೆ. ಈಗ ಆ ಅದೃಷ್ಟ ಬಾಲಿವುಡ್ ನಿಂದ ಬಂದು ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿರೊ ಹಾಟ್ ಬ್ಯೂಟಿ ಪಾಲಾಗಿದೆ. ಅರೆರೆ ಇದೇನು ಉಪ್ಪಿ ಚಿತ್ರಕ್ಕೆ ಬಾಲಿವುಡ್ ನಾಯಕಿ ಫೈನಲ್ ಆದ್ರ ಅಂತ ಕನ್ಪೂಸ್ ಆಗಬೇಡಿ. ಯಾಕಂದ್ರೆ ಯುಐ ಚಿತ್ರಕ್ಕೆ ಇನ್ನು ನಾಯಕಿ ಫೈನಲ್ ಆಗಿಲ್ಲ. ಅದ್ರು ಒಂದು ಸ್ಪೆಷಲ್ ಪಾತ್ರಕ್ಕೆ ಸ್ಪೆಷಲ್ ನಟಿ ಉಪ್ಪಿ ಡೈರೆಕ್ಷನ್ ನಲ್ಲಿ ಆಕ್ಟ್ ಮಾಡಿದ್ದಾರೆ.

Written by - YASHODHA POOJARI | Edited by - Krishna N K | Last Updated : Nov 28, 2022, 11:50 AM IST
  • ರಿಯಲ್‌ ಸ್ಟಾರ್‌ ಉಪೇಂದ್ರ ಚಿತ್ರಕ್ಕೆ ಬಾಲಿವುಡ್ ನಾಯಕಿ
  • ಉಪ್ಪಿ UI ಅಡ್ಡದಲ್ಲಿ ಹಾಟ್ ಬ್ಯೂಟಿ ಸನ್ನಿ ಲಿಯೋನ್‌
  • ಐಟಂ ಸಾಂಗ್‌ನಲ್ಲಿ ಮಾದಕ ಬೆಡಗಿ ಶೇಷಮ್ಮ
ಉಪ್ಪಿ ʼUIʼ ಸಿನಿಮಾದಲ್ಲಿ ಸನ್ನಿ : ಕಿಕ್‌ ಏರಿಸಲು ಸ್ಯಾಂಡಲ್‌ವುಡ್‌ಗೆ ಮತ್ತೇ ಬಂದ ಶೇಷಮ್ಮ..! title=

Sunny Leone in UI movie : ಉಪ್ಪಿ ಡೈರೆಕ್ಷನ್ ಸಿನಿಮಾಗಳಲ್ಲಿ ಆಕ್ಟ್ ಮಾಡೋಕೆ ಅವಕಾಶ ಸಿಕ್ರೆ ಸಾಕಪ್ಪ ಅಂತ ನಟ ನಟಿಯರು ಕಾಯ್ತಾರೆ. ಅದರೆ ಅ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತೆ. ಈಗ ಆ ಅದೃಷ್ಟ ಬಾಲಿವುಡ್ ನಿಂದ ಬಂದು ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿರೊ ಹಾಟ್ ಬ್ಯೂಟಿ ಪಾಲಾಗಿದೆ. ಅರೆರೆ ಇದೇನು ಉಪ್ಪಿ ಚಿತ್ರಕ್ಕೆ ಬಾಲಿವುಡ್ ನಾಯಕಿ ಫೈನಲ್ ಆದ್ರ ಅಂತ ಕನ್ಪೂಸ್ ಆಗಬೇಡಿ. ಯಾಕಂದ್ರೆ ಯುಐ ಚಿತ್ರಕ್ಕೆ ಇನ್ನು ನಾಯಕಿ ಫೈನಲ್ ಆಗಿಲ್ಲ. ಅದ್ರು ಒಂದು ಸ್ಪೆಷಲ್ ಪಾತ್ರಕ್ಕೆ ಸ್ಪೆಷಲ್ ನಟಿ ಉಪ್ಪಿ ಡೈರೆಕ್ಷನ್ ನಲ್ಲಿ ಆಕ್ಟ್ ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಏಳು ವರ್ಷಗಳ ನಂತ್ರ ಮಾಡ್ತುರುವ ಸಿನಿಮಾ UI. ಈ ಸಿನಿಮಾ ಅನೌನ್ಸ್ ಆದ ದಿನದಿಂದಲೂ ಈ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗೆ. ಉಪ್ಪಿ ಡೈರೆಕ್ಷನ್ ಮಾಡ್ತಾರೆ ಅಂದ್ರೆ ಅಲ್ಲಿ ಏನಾದ್ರು ಸ್ಪೆಷಲ್ ಕಂಟೆಂಟ್ ಇದ್ದೆ ಇರುತ್ತೆ‌. ಜೊತೆಗೆ ಪಡ್ಡೆಗಳ ಹಾರ್ಟ್ ಡ್ಯಾನ್ಸ್ ಮಾಡೊತರ ಮೋಡಿ ಮಾಡೊ ಬೆಡಗಿಯರು ಇರ್ತಾರೆ. ಅದ್ರೆ ಉಪ್ಪಿ ಚಿತ್ರ ಇನ್ನೆನು ಮುಗಿಯೊ ಹಂತಕ್ಕೆ ಬಂದಿದ್ರು ಇನ್ನು ಚಿತ್ರಕ್ಕೆ ನಾಯಕಿ ಫೈನಲ್ ಆಗಿಲ್ಲ. ಅದರೆ ನಾಯಕಿಗೂ ಮೊದಲೆ ಉಪ್ಪಿ UI ಅಡ್ಡ ದಲ್ಲಿ ಹಾಟ್ ಬ್ಯೂಟಿಯೊಬ್ರು ಕಾಣಿಸಿದ್ದಾರೆ. ಇನ್ನು ಆ ಬ್ಯೂಟಿ ಯಾರು‌ ಅಂತ ಗೊತ್ತಾದ್ರೆ ಅಭಿನಯ ಚಕ್ರವರ್ತಿಯ ಅಭಿಮಾನಿಗಳು ಕುಣಿದು ಕುಪ್ಪಳಿಸ್ತಾರೆ.

ಇದನ್ನೂ ಓದಿ: Shruti Haasan : ಮೇಕಪ್ ಇಲ್ಲದೆ ಶೃತಿ ಹಾಸನ್ ಹೀಗೆ ಕಾಣ್ತಾರಾ.. ದಂಗಾದ ಫ್ಯಾನ್ಸ್‌..!

ಯಸ್.. ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಕೆಲಸ ಕೊಟ್ಟು ಅಭಿಮಾನಿಗಳ ಬುರುಡೆಗೆ ಹುಳ ಬಿಟ್ಟು ಮಾಡ್ತಿರುವ UI ಚಿತ್ರದ ಶೂಟಿಂಗ್ 50%. ಪರ್ಸೆಂಟ್ ಕಂಪ್ಲೀಟ್ ಆಗಿದೆ.‌ ಅದ್ರು ಇನ್ನು ಉಪ್ಪಿ ಮಾತ್ರ ಚಿತ್ರಕ್ಕೆ ನಾಯಕಿಯನ್ನು ಕರೆತಂದಿಲ್ಲ. ಅದರೂ ಉಪ್ಪಿ ಮಾಸ್ಟರ್ ಮೈಂಡ್ ಯು ಐ ಅಡ್ಡಕ್ಕೆ ಬಾಲಿವುಡ್ ನ ಹಾಟ್ ಬ್ಯೂಟಿನ ವಿಶೇಷ ಪಾತ್ರಕ್ಕೆ ಕರೆತಂದಿದ್ದಾರೆ. ಆ ಬ್ಯೂಟಿ ಯಾರು ಅಂತ ಕೇಳಿದ್ರೆ ಅದಕ್ಕೆ ಸ್ವೀಟ್ ಅಂಡ್ ಹಾಟ್ ಉತ್ತರ.. ಸ್ಯಾಂಡಲ್‌ವುಡ್‌ ಶೇಷಮ್ಮ ಸನ್ನಿ ಲಿಯೋನ್‌.

ಹೌದು.. ಉಪ್ಪಿಯ ಯು ಐ ಚಿತ್ರದಲ್ಲಿ ಹಾಟ್ ಬ್ಯೂಟಿ ಶೇಷಮ್ಮ ಸನ್ನಿ ಲಿಯೋನ್ ಬಣ್ಣ ಹಚ್ವಿದ್ದಾರೆ.‌ ಸನ್ನಿ ಬಂದಿದ್ದಾರೆ ಅಂದರೆ ಸ್ಪೆಷಲ್ ಸಾಂಗ್‌ಗೆ ಸೊಂಟ ಬಳುಕಿಸಿರಬೇಕು ಅಂತ ಅಂದಾಜು ಮಾಡೊ ಮಂದಿ ಜಾಸ್ತಿ. ಅದ್ರೆ ಉಪ್ಪಿ ಸನ್ನಿನಾ ಹಾಡಿಹಾಗಿ ಕರೆತಂದಿಲ್ಲ. ಬದಲಿಗೆ ಚಿತ್ರದಲ್ಲಿ ಬರುವ ಒಂದು ವಿಶೇಷ ಪಾತ್ರಕ್ಕೆ ಸನ್ನಿನ ಕರೆತಂದಿದ್ದಾರೆ. ಅಲ್ಲದೆ ಬುದ್ದಿವಂತ ಉಪ್ಪಿ ಯಾರಿಗೂ ತಿಳಿಯದಂತೆ ಸನ್ನಿ ಜೊತೆ ಎರಡು ದಿನ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿ. ಚಿತ್ರದಲ್ಲಿ ಸನ್ನಿ ಇರೋ ಮ್ಯಾಟರ್ ನ ಸಿಕ್ರೇಟ್ ಆಗಿ ಇಟ್ಟಿದ್ದಾರೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News