Haripriya - Vasishta : ಚಂದನವನದಲ್ಲಿ ಮತ್ತೊಂದು ಮುದ್ದಾದ ಜೋಡಿ ಹಸೆಮಣೆ ಏರಲು ದಿನಗಣನೆ ಆರಂಭವಾಗಿದೆ. ಮೂಗು ಚುಚ್ಚಿಸಿಕೊಂಡು, ದುಬೈ ಟ್ರಿಪ್‌ ಮಾಡಿ, ಬಳಿಕ ಸಿಂಹದ ಪೋಸ್ಟ್‌ ಮೂಲಕ ಲವ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ದರು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ. ಕುಟುಂಬಸ್ಥರ ಸಮ್ಮುಖದಲ್ಲಿ ಡಿಸೆಂಬರ್​ 3 ರಂದು ಹರಿಪ್ರಿಯಾ ನಿವಾಸದಲ್ಲಿ ನಿಶ್ಚಿತಾರ್ಥ ಸಹ ನೆರವೇರಿದೆ. ಎಂಗೇಜ್ಮೆಂಟ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹರಿಪ್ರಿಯಾ ಅಧಿಕೃತವಾಗಿ ಮದುವೆಯ ಸಿಹಿ ಸುದ್ದಿ ನೀಡಿದ್ದರು. ಆದರೆ ಇಬ್ಬರೂ ಒಂದೇ ಒಂದು ಸಿನಿಮಾದಲ್ಲೂ ಒಟ್ಟಾಗಿ ನಟಿಸಿಲ್ಲ. ಹೀಗಿದ್ದಾಗ ಲವ್‌ ಹೇಗಾಯ್ತು? ಎಲ್ಲಾಯ್ತು? ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರ ಮನಸ್ಸಲ್ಲೂ ಮೂಡಿತ್ತು. ಇದಕ್ಕೆ ಹರಿಪ್ರಿಯಾ ವಿಡಿಯೋ ಒಂದನ್ನು ಪೋಸ್ಟ್‌ ಮಾಡುವ ಮೂಲಕ ಉತ್ತರ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Janhvi Kapoor: ಗುಂಡಿನ ಮತ್ತಲ್ಲಿದ್ರಾ ಜಾನ್ವಿ? ಶ್ರೀದೇವಿ ಪುತ್ರಿ ಬಗ್ಗೆ ಹೀಗೋಂದು ಪ್ರಶ್ನೆ ಹುಟ್ಟಿದ್ಯಾಕೆ!


ಇದೀಗ ವಸಿಷ್ಠ ಸಿಂಹ ಕೊಟ್ಟ ಪ್ರೀತಿಯ ಗಿಫ್ಟ್​ ಬಗ್ಗೆ ಹರಿಪ್ರಿಯಾ ವಿಡಿಯೋ  ಮಾಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ವಸಿಷ್ಠ ಅವರು ಕೊಟ್ಟ ಈ ಗಿಫ್ಟ್‌ನಿಂದ ಸ್ನೇಹ, ಪ್ರೀತಿಯಾಗಿ ಬೆಳೆದಿದ್ದು ಹೇಗೆ ಅನ್ನೋದನ್ನು ಖುದ್ದು ಹರಿಪ್ರಿಯಾ ಅವರೇ ವಿವರಿಸಿದ್ದಾರೆ. ಹೀಗೆ ಲವ್‌ ಸ್ಟೋರಿ ಹೇಳುತ್ತಾ ನಾಚಿ ನೀರಾಗಿದ್ದಾರೆ ನಟಿ ಹರಿಪ್ರಿಯಾ.


 


 

 

 

 



 

 

 

 

 

 

 

 

 

 

 

A post shared by Hariprriya (@iamhariprriya)


 


ಕಳೆದ ವರ್ಷ ನಟ ವಸಿಷ್ಠ ಸಿಂಹ ಮುದ್ದಾದ ನಾಯಿ ಮರಿಯೊಂದನ್ನು ನಟಿ ಹರಿಪ್ರಿಯಾಗೆ ಗಿಫ್ಟ್ ಕೊಟ್ಟರಂತೆ. ಆ ನಾಯಿ ಮರಿ ಹೆಸರು ಕ್ರಿಸ್ಟಲ್‌. ಇದೀಗ ಕ್ರಿಸ್ಟಲ್‌ಗೆ 1 ವರ್ಷದ ಸಂಭ್ರಮ. ಕ್ರಿಸ್ಟಲ್ ನನ್ನ ಜೀವನಕ್ಕೆ ಬಂದು ಇದೀಗ ಒಂದು ವರ್ಷ. ಲಕ್ಕಿ ನನ್ನ ಗೋಲ್ಡನ್ ರಿಟ್ರೈವರ್ ಹೋದ ಬಳಿಕ ವಾಪಸ್​ ಬರ್ತಾನೆ ಎಂದು ಆಸೆ ಇಟ್ಕೊಂಡಿದ್ದೆ. ಅದೇ ರೀತಿ ಕ್ರಿಸ್ಟಲ್ ನಮ್ಮ ಮನೆಗೆ ಬಂದ. ಕ್ರಿಸ್ಟಲ್ ಅನ್ನು ವಸಿಷ್ಠ ಸಿಂಹ ನನಗೆ ಗಿಫ್ಟ್‌ ಕೊಟ್ಟಿದ್ರು. ಕ್ರಿಸ್ಟಲ್ ಕೂಡ ಲಕ್ಕಿ ಹುಟ್ಟಿದ ದಿನವೇ ಜನಿಸಿದ್ದು ಆಶ್ಚರ್ಯ. ನಮ್ಮ ಮನೆಗೆ ಕ್ರಿಸ್ಟಲ್ ಆಗಮನ ಕೂಡ ತುಂಬಾ ವಿಶೇಷವಾಗಿದೆ. ಕ್ರಿಸ್ಟಲ್‌ನ ಎದೆಯ ಮೇಲೆ ಲವ್​ ಸಿಂಬಲ್ ಇದೆ. ಇದು ಅವನ ಬರ್ತ್ ಮಾರ್ಕ್​​. ಈ ಮೂಲಕವೇ ನನಗೆ ಸಿಂಹನ ಮೊದಲ ಗಿಫ್ಟ್​ ಹಿಂದಿನ ಬಿಗ್​ ಸೀಕ್ರೇಟ್​ ಅರ್ಥವಾಗಿದ್ದು ಎಂದು ಹರಿಪ್ರಿಯಾ ಕ್ಯೂಟಾಗಿ ನಾಚುತ್ತಾ ವಿವರಿಸಿದ್ದಾರೆ. 


ಇದನ್ನೂ ಓದಿ : Dhruva Sarja : ಅಭಿಮಾನಿಯ ಮನೆಗೆ ಬಂದ ಧ್ರುವ ಸರ್ಜಾ.. ಸರಳತೆಗೆ ಮಾರು ಹೋದ ಫ್ಯಾನ್ಸ್‌


ಕ್ರಿಸ್ಟಲ್‌ ನಮ್ಮ ಮನೆಗೆ ಬಂದು 1 ವರ್ಷ. ಕ್ರಿಸ್ಟಲ್​ ಜೊತೆ ನಮ್ಮ ಸ್ನೇಹ ಕೂಡ ಪ್ರೀತಿಯಾಗಿ ಬೆಳೆದಿದೆ. ಹುಟ್ಟುಹಬ್ಬದ ಶುಭಾಷಯಗಳು ಹ್ಯಾಪಿ ಮತ್ತು ಕ್ರಿಸ್ಟಲ್ ಎಂದು ಮುದ್ದಾದ ನಾಯಿ ಮರಿಗಳಿಗೆ ಬರ್ತ್‌ ಡೇ ವಿಶ್‌ ಮಾಡಿದ್ದಾರೆ. ಜೊತೆಗೆ ತಮ್ಮಿಬ್ಬರ ಪ್ರೇಮ ಹೇಗೆ ಹುಟ್ಟಿತು ಎಂಬುದನ್ನು ಹರಿಪ್ರಿಯಾ ಈ ವಿಡಿಯೋದಲ್ಲಿ ವಿವರಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.