Janhvi Kapoor: ಗುಂಡಿನ ಮತ್ತಲ್ಲಿದ್ರಾ ಜಾನ್ವಿ? ಶ್ರೀದೇವಿ ಪುತ್ರಿ ಬಗ್ಗೆ ಹೀಗೋಂದು ಪ್ರಶ್ನೆ ಹುಟ್ಟಿದ್ಯಾಕೆ!

Janhvi Kapoor Drinking Video : ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಾನ್ವಿ ಕಪೂರ್ ಟ್ರೋಲ್ ಆಗುತ್ತಿದ್ದಾರೆ. ಎಂದಿನಂತೆ ಜಾನ್ವಿ ಕಪೂರ್ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ. ಆಕೆಯ ಉಡುಪು ಯಾವಾಗಲೂ ಹಾಟ್ ಟಾಪಿಕ್ ಆಗಿದೆ. ಸಿನಿಮಾಕ್ಕಿಂತ ಟ್ರೋಲಿಂಗ್ ಮೂಲಕವೇ ಹೆಚ್ಚು ಫೇಮಸ್ ಆಗಿದ್ದಾರೆ. 

Written by - Chetana Devarmani | Last Updated : Dec 6, 2022, 01:59 PM IST
  • ಗುಂಡಿನ ಮತ್ತಲ್ಲಿದ್ರಾ ಜಾನ್ವಿ ಕಪೂರ್?
  • ಕಾರು ಗುರುತಿಸಲಾಗದ ಸ್ಥಿತಿ ಯಾಕೆ ಬಂತು?
  • ಶ್ರೀದೇವಿ ಪುತ್ರಿ ಬಗ್ಗೆ ಹೀಗೋಂದು ಪ್ರಶ್ನೆ ಹುಟ್ಟಿದ್ಯಾಕೆ!
Janhvi Kapoor: ಗುಂಡಿನ ಮತ್ತಲ್ಲಿದ್ರಾ ಜಾನ್ವಿ? ಶ್ರೀದೇವಿ ಪುತ್ರಿ ಬಗ್ಗೆ ಹೀಗೋಂದು ಪ್ರಶ್ನೆ ಹುಟ್ಟಿದ್ಯಾಕೆ! title=
ಜಾನ್ವಿ ಕಪೂರ್

Janhvi Kapoor Drinking Video : ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಾನ್ವಿ ಕಪೂರ್ ಟ್ರೋಲ್ ಆಗುತ್ತಿದ್ದಾರೆ. ಎಂದಿನಂತೆ ಜಾನ್ವಿ ಕಪೂರ್ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ. ಆಕೆಯ ಉಡುಪು ಯಾವಾಗಲೂ ಹಾಟ್ ಟಾಪಿಕ್ ಆಗಿದೆ. ಸಿನಿಮಾಕ್ಕಿಂತ ಟ್ರೋಲಿಂಗ್ ಮೂಲಕವೇ ಹೆಚ್ಚು ಫೇಮಸ್ ಆಗಿದ್ದಾರೆ. ಈಕೆಯ ಬ್ಯೂಟಿ ಶೋ ನೆಟ್‌ನಲ್ಲಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಜಾಹ್ನವಿ ಕಪೂರ್ ಆಗಷ್ಟೇ ರೆಸ್ಟೋರೆಂಟ್‌ನಿಂದ ಹೊರಬಂದಂತೆ ತೋರುತ್ತಿದೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಇದನ್ನೂ ಓದಿ : ಪುನೀತ್‌ - ದರ್ಶನ್‌ ಒಟ್ಟಾಗಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ

ಜಾನ್ವಿ ಎಲ್ಲಿ ಕಾಣಿಸಿಕೊಂಡರೂ ಪಾಪರಾಜಿಗಳು ಮಾತ್ರ ಫೋಟೋ ಕ್ಲಿಕ್ಕಿಸುವುದನ್ನು ಬಿಡಲ್ಲ. ಎಲ್ಲಾ ಕ್ಯಾಮೆರಾ ಕಣ್ಣುಗಳು ಸಹ ಜಾನ್ವಿ ಕಪೂರ್ ಅನ್ನು ಸ್ಕ್ಯಾನ್ ಮಾಡುತ್ತವೆ. ಆದರೆ ಇದೀಗ ವೈರಲ್‌ ಆಗಿದೆ ವಿಡಿಯೋದಲ್ಲಿ ಜಾನ್ವಿ ಮತ್ತಿನಲ್ಲಿರುವಂತೆ ತೋರುತ್ತಿದೆ ಎಂದು ಟ್ರೋಲ್‌ ಮಾಡಲಾಗುತ್ತಿದೆ. ಇದಕ್ಕೆ ಕಾರಣ ತಮ್ಮ ಕಾರು ಎಲ್ಲಿದೆ ಜಾನ್ವಿಗೆ ನೆನಪಿರಲಿಲ್ಲ. ನನ್ನ ಕಾರು ಎಲ್ಲಿದೆ ಎಂದು ಎಲ್ಲರನ್ನೂ ಜಾನ್ವಿ ಕೇಳುತ್ತಿದ್ದಾರೆ. ಅವರ ಹಿಂದೆ ಡ್ರೈವರ್ ಬಂದರೂ ನೆನಪಾಗದಿರುವಂತೆ ಜಾನ್ವಿ ಈ ವಿಡಿಯೋದಲ್ಲಿ ಕಾಣಿಸಿದ್ದಾರೆ. ತನ್ನ ಚಾಲಕ ಹಿಂದೆ ಇದ್ದುದನ್ನು ಗುರುತಿಸಲು ಸಹ ಜಾನ್ವಿಗೆ ಸಾಧ್ಯವಾಗಲಿಲ್ಲ.

 

 

ಕ್ಯಾಮರಾಮನ್‌ಗಳು ಹೇಳಿದರೂ ಆಕೆಗೆ ಗೊತ್ತಾಗಲಿಲ್ಲ. ನಿಮ್ಮ ಹಿಂದೆ ಒಬ್ಬ ಡ್ರೈವರ್ ಇದ್ದಾನೆ ಎಂದು ಹೇಳಿದಾಗ ಜಾನ್ವಿ ಕಪೂರ್ ಗೆ ತಿಳಿಯಿತು. ಜಾನ್ವಿ ಅವರ ಈ ವಿಡಿಯೋ ನೋಡಿದ ಜನ ಗುಂಡಿನ ಮತ್ತಿನಲ್ಲಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಜಾನ್ವಿ ಕಪೂರ್ ಈಗ ಮತ್ತೆ ಟ್ರೋಲ್ ಆಗುತ್ತಿದ್ದಾರೆ.

ಇದನ್ನೂ ಓದಿ : ಪ್ರೇಮ್​ ಪುತ್ರಿಗೆ ಚಾನ್ಸ್​ ಕೊಟ್ಟಿದ್ದಕ್ಕೆ ಟೀಕೆ! ನೆಪೋಟಿಸಂ ಆರೋಪಕ್ಕೆ ಡಾಲಿ ಖಡಕ್‌ ಉತ್ತರ

ಇಷ್ಟು ದಿನ ಉಡುಗೆ ವಿಚಾರವಾಗಿ ಟ್ರೋಲ್‌ ಆಗ್ತಿದ್ದ ಜಾನ್ವಿ ಈಗ ಕುಡಿದಿರುವ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಾಕಷ್ಟು ಜನ ಜಾನ್ವಿ ಈ ಲೋಕದಲ್ಲಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೆ ಕೆಲವರು ಕುಡಿದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಜಾನ್ವಿಯ ಈ ವಿಡಿಯೋ ಸಖತ್‌ ಟ್ರೋಲ್‌ ಆಗ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News