ನವದೆಹಲಿ: ‘ಹ್ಯಾರಿ ಪಾಟರ್’, ‘ಕ್ರ್ಯಾಕರ್’, ‘ಜೇಮ್ಸ್ ಬಾಂಡ್’ ಮತ್ತು ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಾಲಿವುಡ್ ನಟ ರಾಬಿ ಕೋಲ್ಟ್ರೇನ್ ವಿಧಿವಶರಾಗಿದ್ದಾರೆ. ‘ಹ್ಯಾರಿ ಪಾಟರ್’ ಸಿನಿಮಾಗಳಲ್ಲಿ ರುಬೆಸ್ ಹ್ಯಾಗ್ರಿಡ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಸ್ಕಾಟಿಶ್ ನಟನಿಗೆ 72 ವರ್ಷ ವಯಸ್ಸಾಗಿತ್ತು.  


COMMERCIAL BREAK
SCROLL TO CONTINUE READING

ನಟ ರಾಬಿ ಕೋಲ್ಟ್ರೇನ್‍ ಪ್ರಸಿದ್ಧ ‘ಕ್ರ್ಯಾಕರ್’ ಟಿವಿ ಸರಣಿಯಿಂದ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಈ ಸಿರೀಸ್‍ನಲ್ಲಿ ಅವರು ಅಪರಾಧ-ಪರಿಹರಿಸುವ ಮನಶ್ಶಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡು ಅಪಾರ ಜನಮೆಚ್ಚುಗೆ ಪಡೆದುಕೊಂಡಿದ್ದರು. ಶುಕ್ರವಾರ ರಾತ್ರಿ ಸ್ಕಾಟ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ರಾಬಿಯವರು ಪತ್ನಿ ರೋನಾ ಗೆಮ್ಮೆಲ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


‘ರಾಬಿ ಅವರು ಅದ್ಭುತ ನಟ, ಬುದ್ಧಿವಂತರಾಗಿದ್ದರು. ಕಳೆದ 40 ವರ್ಷದಿಂದ ಅವರ ಏಜೆಂಟ್ ಆಗಿ ಕೆಲಸ ಮಾಡಿದ್ದಕ್ಕೆ ನಮಗೆ ಹೆಮ್ಮೆಯಿದೆ. ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ತೀನಿ’ ಅಂತಾ ರಾಬಿಯವರ ಏಜೆಂಟ್ ತಿಳಿಸಿದ್ದಾರೆ. ಆದರೆ ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.  


ಇದನ್ನೂ ಓದಿ: ಕುತೂಹಲ ಕೆರಳಿಸಿದ ನೈಜ ಘಟನೆ ಆಧಾರಿತ ‘ಅಂಬುಜಾ’ ಟೀಸರ್


1990ರ ದಶಕದಲ್ಲಿ ಕ್ರ್ಯಾಕರ್ ಸಿರೀಸ್‌ನಲ್ಲಿ ಡಿಟೆಕ್ಟಿವ್ ಪಾತ್ರ ಮಾಡಿದ್ದಕ್ಕೆ ರಾಬಿಯವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿತು. ಈ ಸಿರೀಸ್‌ನಲ್ಲಿನ ಉತ್ತಮ ನಟನೆಗಾಗಿ ಅವರಿಗೆ ಬ್ರಿಟಿಷ್ ಅಕಾಡೆಮಿ ಟೆಲಿವಿಷನ್ ಅವಾರ್ಡ್ಸ್(BAFTA) ದೊರಕಿತ್ತು. 1980ರಿಂದ ರಾಬಿ ಅವರು ಟಿವಿ, ಸಿನಿಮಾ ಮತ್ತು ವೆಬ್ ಸಿರೀಸ್‌ಗಳಲ್ಲಿ ಸಕ್ರಿಯವಾಗಿದ್ದರು.


ನಂತರ ಅವರು JK ರೌಲಿಂಗ್ ಅವರ ಹ್ಯಾರಿ ಪಾಟರ್ ಸಿರೀಸ್‌ನಲ್ಲಿ ಹ್ಯಾಗ್ರಿಡ್ ಪಾತ್ರ ಮಾಡಿ ವಿಶ್ವದಾದ್ಯಂತ ದೊಡ್ಡ ಮಟ್ಟದ ಖ್ಯಾತ ಗಳಿಸಿದರು. 2001-2011ರ ಅವಧಿಯಲ್ಲಿ ಬಂದ 8 ಹ್ಯಾರಿ ಪಾಟರ್ ಸಿರೀಸ್‌ನಲ್ಲಿ ರಾಬಿ ಕಾಣಿಸಿಕೊಂಡಿದ್ದರು. ಅವರ ಅದ್ಭುತ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ರಾಬಿ ಸಂಪಾದಿಸಿದ್ದರು. ಇದಲ್ಲದೆ ‘ಜೇಮ್ಸ್ ಬಾಂಡ್’, ‘ಗೋಲ್ಡನ್ ಐ’ ‘ದಿ ವರ್ಲ್ಡ್ ಈಸ್ ನಾಟ್ ಇನಫ್’ ಸಿನಿಮಾಗಳಲ್ಲಿ ರಾಬಿ ನಟಿಸುವ ಮೂಲಕ ಮಿಂಚಿದ್ದರು.


ಇತ್ತೀಚಿನ ವರ್ಷಗಳಲ್ಲಿ ರಾಬಿ 2016ರ ಕಿರುಸರಣಿ ನ್ಯಾಷನಲ್ ಟ್ರೆಷರ್‌ನಲ್ಲಿ ಕರಾಳ ರಹಸ್ಯ ಹೊಂದಿರುವ ಪ್ರೀತಿಯ ಟಿವಿ ತಾರೆಯಾಗಿ ಕಾಣಿಸಿಕೊಂಡಿದ್ದರು. ಇದರ ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದರು. ಅವರು ಕೊನೆಯ ಬಾರಿಗೆ ಹ್ಯಾರಿ ಪಾಟರ್ 20ನೇ ವಾರ್ಷಿಕೋತ್ಸವದಲ್ಲಿ ಕಾಣಿಸಿಕೊಂಡಿದ್ದರು. ರಾಬಿ ನಿಧನಕ್ಕೆ ಜೆಕೆ ರೌಲಿಂಗ್, ನಟ ಡೇನಿಯಲ್ ರಾಡ್‌ಕ್ಲಿಫ್ ಮತ್ತು ಅನೇಕ ಬಾಲಿವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.   


ಇದನ್ನೂ ಓದಿ: XXX Web Series: 'ಯುವ ಪೀಳಿಗೆಯ ತಲೆ ಹಾಳು ಮಾಡುತ್ತಿರುವಿರಿ', ಏಕ್ತಾ ಕಪೂರ್ ಗೆ ಸುಪ್ರೀಂ ಛೀಮಾರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.