ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್(Shivaraj Kumar) ಸಜ್ಜಾಗಿದ್ದಾರೆ. ಸೆಂಚ್ಯೂರಿ ಸ್ಟಾರ್ ಗಾಗಿ ಬಹುಕೋಟಿ ವೆಚ್ಚದಲ್ಲಿ ಕ್ರೈಂ ಥ್ರಿಲ್ಲರ್ ಸಿನಿಮಾ ಸಿದ್ಧವಾಗುತ್ತಿದೆ. 1973ರ ಕಾಲಘಟ್ಟದ ರೆಟ್ರೋ ಸ್ಟೋರಿಯ ಸಿನಿಮಾ ಇದಾಗಿದ್ದು, ‘ಓಂ’ ಸಿನಿಮಾ(OM Movie)ದ ಸತ್ಯನ ರೀತಿ ಮತ್ತೊಂದು ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡಲು ಶಿವಣ್ಣ ಸಿದ್ಧರಾಗಿದ್ದಾರೆ


COMMERCIAL BREAK
SCROLL TO CONTINUE READING

ಇಂದು(ಜ.24) ಪ್ಯಾನ್ ಇಂಡಿಯಾ(Pan-India films) ಲೆವೆಲ್ ನಲ್ಲಿ ಸಿನಿಮಾ ಮಾಡಲು ಶಿವಣ್ಣನ ಜೊತೆ ಚಿತ್ರತಂಡ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿದೆ. ರೆಟ್ರೋ ಸ್ಟೈಲ್ ನ ಮಾಸ್ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.  ‘ಕಬ್ಜ’, ‘ವಿಕ್ರಾಂತ್ ರೋಣ’ ರೀತಿಯೇ ಈ ಸಿನಿಮಾ ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ.


Puneeth Rajkumar : 'ಜೇಮ್ಸ್ ಸಿನಿಮಾ'ದ ಶೂಟಿಂಗ್ ಕಂಪ್ಲೀಟ್ ಮಾಡಿದ ಚಿತ್ರ ತಂಡ


ಭೂಗತ ಲೋಕದ ಕಥೆ(Underworld Story)ಯಲ್ಲಿ ಶಿವರಾಜ್​​ಕುಮಾರ್ ನಟಿಸುತ್ತಿರುವ ವಿಚಾರ ಕೇಳಿ ಅವರ ಲಕ್ಷಾಂತರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಿಜವಾಗಿ ನಡೆದ ರಕ್ತಸಿಕ್ತ ಕಥೆಯನ್ನಾಧರಿಸಿ ಹೊಸ ಸಿನಿಮಾದ ಸ್ಟೋರಿ ಸಿದ್ಧಗೊಂಡಿದೆ ಎಂದು ತಿಳಿದುಬಂದಿದೆ. ‘ಬುದ್ಧಿವಂತ 2’ ಸಿನಿಮಾ‌ ನಿರ್ದೇಶನ ಮಾಡಿದ್ದ ಜಯರಾಮ್ ಭದ್ರಾವತಿ ಈ ಚಿತ್ರಕ್ಕೆ ಆ್ಯಕ್ಷನ್ ​ಕಟ್ ಹೇಳಲಿದ್ದಾರೆ. ‘ಲಕ ಲಕ ಲ್ಯಾಂಬೋರ್ಗಿನಿ’ ಹಾಡು ನಿರ್ಮಾಣ ಮಾಡಿದ್ದ ಆರ್.ಕೇಶವ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.


ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದ ಟೈಟಲ್(Movie Title) ಅನ್ನು ಚಿತ್ರತಂಡ ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ರಿವಿಲ್ ಮಾಡುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿಯೇ ಈ ಸಿನಿಮಾಗೆ ಮೂಹೂರ್ತ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಆ ಬಳಿಕ ಶೂಟಿಂಗ್​ ನಡೆಯಲಿದೆ. ದೊಡ್ಡ ಕಾರ್ಯಕ್ರಮ ಮಾಡಿ ಸಿನಿಮಾ ಟೈಟಲ್ ಅನೌನ್ಸ್ ಮಾಡಲಾಗುತ್ತದೆ. ಈ ಮೂಲಕ ಶಿವಣ್ಣನನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ತೋರಿಸಲಾಗುತ್ತದೆ.


Amazon Prime Offer: ಪವರ್ ಸ್ಟಾರ್ ಪುನೀತ್ ಸ್ಮರಣೆಗಾಗಿ ಉಚಿತ ಸಿನಿಮಾ ನೋಡುವ ಅವಕಾಶ


ಸೋಮವಾರ ಸೆಂಚ್ಯೂರಿ ಸ್ಟಾರ್(Hat-trick hero Shivaraj Kumar) ಮನೆಗೆ ಹೋಗಿ ಚಿತ್ರತಂಡವು ಕೊನೆ ಹಂತದ ಮಾತುಕತೆ ನಡೆಸಿದೆ. ಸದ್ಯ ಶಿವಣ್ಣನ ಬತ್ತಳಿಕೆಯಲ್ಲಿ ಹಲವು ಸಿನಿಮಾಗಳಿವೆ. ಹೊಸ ಚಿತ್ರದ ಕಥೆ ಕೇಳಿರುವ ಶಿವಣ್ಣ ಮೆಚ್ಚಿಕೊಂಡಿದ್ದು, ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ಕರುನಾಡ ಚಕ್ರವರ್ತಿ’ ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವುದು ಅವರ ಅಭಿಮಾನಿಗಳ ಸಂತಸ ಇಮ್ಮಡಿಯಾಗಿದೆ.     


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.