ಬೆಂಗಳೂರು: ಬರೋಬ್ಬರಿ ಒಂದೂವರೆ ವರ್ಷಗಳ ನಂತರ ಬೆಳ್ಳಿ ತೆರೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣನ ಎಂಟ್ರಿಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನೂರಾರು  ಥಿಯೇಟರ್​ಗಳಲ್ಲಿ ‘ಭಜರಂಗಿ-2’(Bajarangi-2 Movie Grand Release) ಅಬ್ಬರಿಸುತ್ತಿದೆ. ಶುಕ್ರವಾರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಿನಿಮಾ ನೋಡಲು ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದರು.


COMMERCIAL BREAK
SCROLL TO CONTINUE READING

‘ಜೈ.. ಭಜರಂಗಿ..’ ಅಂತಾ ಥಿಯೇಟರ್​ಗೆ ಫ್ಯಾನ್ಸ್ ಮುಗಿಬಿದಿದ್ದರು. ಥಿಯೇಟರ್​ಗಳ ಎದುರು ‘ಭಜರಂಗಿ-2’ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಬೆಂಗಳೂರಿನಲ್ಲಿ ಬೆಳಗ್ಗೆಯೇ ‘ಭಜರಂಗಿ-2’ ಹಬ್ಬ ಶುರುವಾಗಿತ್ತು. ಪಟಾಕಿ ಸಿಡಿಸಿ ಶಿವಣ್ಣ(Shivaraj Kumar)ನ ಅಭಿಮಾನಿಗಳು ಸಂಭ್ರಮಿಸಿದರು. ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಖುದ್ದು ಶಿವರಾಜ್ ಕುಮಾರ್ ಅವರು ಬೆಂಗಳೂರಿನ ಸಿದ್ದೇಶ್ವರ ಮತ್ತು ಶ್ರೀನಿವಾಸ ಥಿಯೇಟರ್ ಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಫ್ಯಾನ್ಸ್ ಶಿವಣ್ಣನಿಗೆ ಜೈಕಾರ ಹಾಕಿ ಖುಷಿ ವ್ಯಕ್ತಪಡಿಸಿದರು.


ಇದನ್ನೂ ಓದಿ: Rajinikanth: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು


ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಫ್ಯಾನ್ಸ್​ ಷೋ ನಡೆದಿದೆ. ಮಹಿಳೆಯರು ಕೂಡ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ರಿಲೀಸ್ ಹಿನ್ನೆಲೆ ಕೆಲವು ಥಿಯೇಟರ್ ಗಳ ಮುಂದೆ ಶಿವರಾಜ್ ಕುಮಾರ್ ಕಟೌಟ್​ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದರು. ಅಭಮಾನಿಗಳಿಂದ ಸಖತ್ ರೆಸ್ಪಾನ್ಸ್ ಪಡೆದಿರುವ ‘ಭಜರಂಗಿ-2’(Bhajarangi 2) ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫಸ್ಟ್ ಶೋ ವೀಕ್ಷಿಸಿದ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು, ‘ಭಜರಂಗಿ-2’ 100 ದಿನ ಪೂರೈಸಲಿದೆ ಎಂದು ತಿಳಿಸಿದ್ದಾರೆ.


ಅಭಿಮಾನಿಗಳ ಜೊತೆ ಫಸ್ಟ್ ಶೋ ವೀಕ್ಷಿಸಿದ ಶಿವಣ್ಣ


‘ಭಜರಂಗಿ-2’ ರಿಲೀಸ್(Bhajarangi 2) ಹಿನ್ನೆಲೆ ಬೆಂಗಳೂರಿನ ಸಿದ್ದೇಶ್ವರ್ ಥಿಯೇಟರ್ ಗೆ ಶಿವಣ್ಣ ಭೇಟಿ ನೀಡಿದ್ದರು. ಈ ವೇಳೆ ನೆಚ್ಚಿನ ನಟನಿಗೆ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸಿ ಗ್ರ್ಯಾಂಡ್ ಆಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ‘ಅಭಿಮಾನಿಗಳ ಖುಷಿಯೇ ನನ್ನ ಖುಷಿ. ‘ಭಜರಂಗಿ-2’ ಸಿನಿಮಾಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನು ಕೂಡ ಎಲ್ಲಾ ಚಿತ್ರಮಂದಿಗಳಿಗೂ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸುತ್ತೇನೆ’ ಅಂತಾ ಹೇಳಿದ್ದಾರೆ.  


ಇದನ್ನೂ ಓದಿ: Aryan Drugs Case : ಆರ್ಯನ್ ಖಾನ್‌ಗೆ ಕೊನೆಗೂ ಸಿಕ್ಕಿತು ಜಾಮೀನು : ಇಂದಿಗೆ ಅಂತ್ಯೆ 25 ದಿನಗಳ ಜೈಲು ವಾಸ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ