Aryan Drugs Case : ಆರ್ಯನ್ ಖಾನ್‌ಗೆ ಕೊನೆಗೂ ಸಿಕ್ಕಿತು ಜಾಮೀನು : ಇಂದಿಗೆ ಅಂತ್ಯೆ 25 ದಿನಗಳ ಜೈಲು ವಾಸ!

ಕಳೆದ ಮೂರು ದಿನಗಳಿಂದ ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನಿಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿತ್ತು. ಇಂದು ಈ ವಿಷಯದ ಬಗ್ಗೆ ನಿರ್ಧಾರಕ್ಕೆ ಬಂದಿದ್ದು, ಜಾಮೀನು ತೀರ್ಪಿನ ನ್ಯಾಯಾಲಯದ ವಿವರವಾದ ಪ್ರತಿ ನಾಳೆ ಬರಲಿದೆ.

Written by - Channabasava A Kashinakunti | Last Updated : Oct 28, 2021, 05:12 PM IST
  • ಆರ್ಯನ್ ಖಾನ್ ಗೆ 25 ದಿನಗಳ ನಂತರ ಇಂದು ಜಾಮೀನು
  • ಜೊತೆಗೆ ಅರ್ಬಾಜ್ ಖಾನ್ ಮತ್ತು ಮುನ್ಮುನ್ ಧನೇಚಾಗೆ ಕೂಡ ಜಾಮೀನು
  • ಆರ್ಯನ್ ಖಾನ್ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟಗಿ
Aryan Drugs Case : ಆರ್ಯನ್ ಖಾನ್‌ಗೆ ಕೊನೆಗೂ ಸಿಕ್ಕಿತು ಜಾಮೀನು : ಇಂದಿಗೆ ಅಂತ್ಯೆ 25 ದಿನಗಳ ಜೈಲು ವಾಸ!

ನವದೆಹಲಿ : ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ 25 ದಿನಗಳ ನಂತರ ಇಂದು ಜಾಮೀನು ಸಿಕ್ಕಿದೆ. ಆರ್ಯನ್ ಖಾನ್ ಜೊತೆಗೆ ಅರ್ಬಾಜ್ ಖಾನ್ ಮತ್ತು ಮುನ್ಮುನ್ ಧನೇಚಾಗೆ ಕೂಡ ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ. 

ಕಳೆದ ಮೂರು ದಿನಗಳಿಂದ ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನಿಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿತ್ತು. ಇಂದು ಈ ವಿಷಯದ ಬಗ್ಗೆ ನಿರ್ಧಾರಕ್ಕೆ ಬಂದಿದ್ದು, ಜಾಮೀನು ತೀರ್ಪಿನ ನ್ಯಾಯಾಲಯದ ವಿವರವಾದ ಪ್ರತಿ ನಾಳೆ ಬರಲಿದೆ.

ಈ ದಿನ ಜೈಲಿನಿಂದ ಹೊರಗೆ ಬರುತ್ತೇನೆ

ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟಗಿ, 'ಬಾಂಬೆ ಹೈಕೋರ್ಟ್ ಮೂರು ದಿನಗಳ ವಾದ ಆಲಿಸಿದ ನಂತರ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಅವರಿಗೆ ಜಾಮೀನು ನೀಡಿದೆ. ವಿವರವಾದ ಆದೇಶವನ್ನು ನಾಳೆ ನೀಡಲಾಗುವುದು. ನಾಳೆ ಅಥವಾ ಶನಿವಾರದ ವೇಳೆಗೆ ಎಲ್ಲರೂ ಜೈಲಿನಿಂದ ಹೊರಬರುತ್ತಾರೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News