HC To Shilpa Shetty - ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ವಿರುದ್ಧ ಮಾಧ್ಯಮದವರು ಮಾಡುತ್ತಿರುವ ವರದಿಗಾರಿಕೆಯ ಮೇಲೆ ತಡೆ ವಿಧಿಸಲು ಬಾಂಬೆ ಹೈಕೋರ್ಟ್ (Bombay HC) ನಿರಾಕರಿಸಿದೆ. ಈ ರೀತಿ ಮಾಡುವುದರಿಂದ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಕೆಲ ಖಾಸಗಿ ವ್ಯಕ್ತಿಗಳ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿರುವ 3 ವಿಡಿಯೋಗಳನ್ನು ತೆಗೆದುಹಾಕಬೇಕು, ಅವು ದುರುದ್ದೇಶಪೂರಿತವಾಗಿರುವುದರಿಂದ ಅವುಬಳನ್ನು ಮತ್ತೆ ಅಪ್ಲೋಡ್ ಮಾಡಬಾರದು ಎಂದು ಜಸ್ಟಿಸ್ ಗೌತಮ್ ಪಟೇಲ್ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ ಪ್ರಕರಣದ ಸತ್ಯಾಸತ್ಯತೆಯನ್ನು ಕಂಡು ಹಿಡಿಯುವ ಕಿಂಚಿತ್ತು ಪ್ರಯತ್ನ ನಡೆಸಬಾರದು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪತ್ರಿಕಾ ಸ್ವಾತಂತ್ರ್ಯವ್ಯಕ್ತಿಯ ಗೌಪ್ಯತೆಯ ಹಕ್ಕಿನೊಂದಿಗೆ ಸಮತೋಲನದಲ್ಲಿರಬೇಕು. ಶಿಲ್ಪಾ ಪತಿ ರಾಜ್ ಕುಂದ್ರಾ (Raj Kundra) ಅಶ್ಲೀಲ ಚಲನಚಿತ್ರಗಳನ್ನು ತಯಾರಿಸಿ (Raj Kundra Pornography Video Case) ಆಪ್‌ನಲ್ಲಿ ಬಿಡುಗಡೆ ಮಾಡಿ, ಬಂಧನಕ್ಕೊಳಗಾದ ನಂತರ, ನಟಿಯ ನೈತಿಕತೆಯ ಕುರಿತು ಎಲ್ಲಾ ಮೂರು ವೀಡಿಯೊಗಳಲ್ಲಿ ಕಾಮೆಂಟ್ ಮಾಡಲಾಗಿದೆ ಮತ್ತು ಪೋಷಕರಾಗಿ ಆಕೆಯಪಾತ್ರವನ್ನು ಪ್ರಶ್ನಿಸಲಾಗಿದೆ. ಜುಲೈ 19 ರಂದು ಕುಂದ್ರಾ ಬಂಧನದ ನಂತರ ನಟಿ ಶಿಲ್ಪಾ ಮತ್ತು ಆಕೆಯ ಕುಟುಂಬದ ವಿರುದ್ಧ ಅವಹೇಳನಕಾರಿ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ನಟಿ ಸಲ್ಲಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.


ರಾಜ್ ಕುಂದ್ರಾ (45) ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾನೆ (Judicial Custody). ಏತನ್ಮಧ್ಯೆ ಶಿಲ್ಪಾ, ಮಧ್ಯಂತರ ಅರ್ಜಿಯನ್ನು ದಾಖಲಿಸುವ ಮೂಲಕ, ಯಾವುದೇ ತಪ್ಪು, ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಷಯವನ್ನು" ಪ್ರಕಟಿಸುವುದನ್ನು ತಡೆಯುವಂತೆ ನ್ಯಾಯಾಲಯವನ್ನು ಕೋರಿದ್ದರು. ಆದರೆ, "ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. "ಒಳ್ಳೆಯ ಅಥವಾ ಕೆಟ್ಟ ಪತ್ರಿಕೋದ್ಯಮಕ್ಕೆ ನ್ಯಾಯಾಂಗದ ಒಂದು ಮಿತಿ ಇದೆ. ಏಕೆಂದರೆ ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಬಹಳ ನಿಕಟ ಸಂಬಂಧ ಹೊಂದಿದೆ" ಎಂದು ನ್ಯಾಯಾಲಯ ಹೇಳಿದೆ.


ತನ್ನ ವಾದದಲ್ಲಿ ಶಿಲ್ಪಾ ಶೆಟ್ಟಿ ಉಲ್ಲೇಖಿಸಿರುವ ಆರ್ಟಿಕಲ್ ಗಳು ಮಾನಹಾನಿ ರೀತಿ ತೋರುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಕುರಿತು ಮಾತನಾಡಿರುವ  ನ್ಯಾಯಮೂರ್ತಿ ಪಟೇಲ್, "ಒಂದು ವೇಳೆ ನೀವು ನನ್ನ ಬಗ್ಗೆ ಒಳ್ಳೆಯದನ್ನು ಬರೆಯುವುದಿಲ್ಲ ಅಥವಾ ಮಾತನಾಡುವುದಿಲ್ಲ ಎಂದಾದರೆ, ಏನನ್ನೂ ಮಾತನಾಡಬೇಡಿ" ಎಂಬಂತೆ ತೋರುವುದಿಲ್ಲವೇ? ಅಷ್ಟೇ ಅಲ್ಲ ಮಂಡಿಸಲಾಗಿರುವ ವಾದದಲ್ಲಿ ಉಲ್ಲೇಖಿಸಲಾಗಿರುವ ಮಾಧ್ಯಮ ವರದಿಗಳು ಪೊಲೀಸ್ ಮೂಲಗಳನ್ನು ಆಧರಿಸಿವೆ. ಇಂತಹುದೇ ಒಂದು ವರದಿಯಲ್ಲಿ ಪೊಲೀಸರು ರಾಜ್ ಕುಂದ್ರಾನನ್ನು ಶಿಲ್ಪಾ ಜೊತೆಗೆ ಕೂರಿಸಿ ಪ್ರಶ್ನಿಸಲು ಅವರ ನಿವಾಸಕ್ಕೆ ಕರೆದೊಯ್ದ ಸಂದರ್ಭದಲ್ಲಿ ಶಿಲ್ಪಾ ಕಣ್ಣೀರಿತ್ತಿದ್ದಳು ಮತ್ತು ತನ್ನ ಪತಿಯ ಜೊತೆಗೆ ಜಗಳವಾಡುತ್ತಿದ್ದಳು ಎನ್ನಲಾಗಿದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ-ರಾಜ್ ಕುಂದ್ರಾ ಬಂಧನದ ಬಳಿಕ ಒಂದೊಂದೇ ಪ್ರಾಜೆಕ್ಟ್ ಗಳನ್ನು ಕಳೆದುಕೊಳ್ಳುತ್ತಿರುವ ಶಿಲ್ಪಾಶೆಟ್ಟಿ


" ಪೊಲೀಸ ಮೂಲಗಳನ್ನು ಆಧಾರವಾಗಿಟ್ಟುಕೊಂಡು ಬರೆಯಲಾಗಿರುವ ವರದಿಗಳು ಮಾನಹಾನಿಯನ್ನು ಬಿಂಬಿಸುವುದಿಲ್ಲ. ಒಂದು ವೇಳೆ ಈ ಸಂಗತಿ ನಿಮ್ಮ ಮನೆಯಲ್ಲಿ ಜರುಗಿದ್ದು, ಆ ಸಂದರ್ಭದಲ್ಲಿ ಅಕ್ಕ-ಪಕ್ಕದಲ್ಲಿ ಯಾರು ಇಲ್ಲದಿದ್ದರೆ, ಆ ವಿಷಯ ಬೇರೆಯಾಗಿರುತ್ತಿತ್ತು. ಆದರೆ, ಈ ಘಟನೆ ಹೊರಗಿನ ಜನರು ನಿಮ್ಮ ಮನೆಯಲ್ಲಿ ಇರುವ ವೇಳೆ ಸಂಭವಿಸಿದೆ. ಹೀಗಿರುವಾಗ ಅದನ್ನು ಮಾನಹಾನಿ ಹೇಗೆ ಆಗಲು ಸಾಧ್ಯ?" ಎಂದು ಜಸ್ಟಿಸ್ ಪಟೇಲ್ ಪ್ರಶ್ನಿಸಿದ್ದಾರೆ. ಸುಮಾರು 25 ಕೋಟಿ ರೂ ಮಾನ ಹಾನಿ ಪ್ರಕರಣ ದಾಖಲಿಸಿರುವ ಶಿಲ್ಪಾ ಶೆಟ್ಟಿ, ಪ್ರತಿವಾದಿಗಳಿಗೆ (ಹಲವು ಮಾಧ್ಯಮ ಸಂಸ್ಥೆಗಳು ಹಾಗೂ ಗೂಗಲ್, ಫೇಸ್ ಬುಕ್, ಯು ಟ್ಯೂಬ್ ಗಳಂತಹ ಸಾಮಾಜಿಕ ಮಾಧ್ಯಮ ತಾಣಗಳು) ತಮಗೆ ಹಾಗೂ ತಮ್ಮ ಪ್ರತಿಷ್ಠೆಗೆ ಹಾನಿ ತಲುಪಿದೆ (Defamation Case) ಎಂದು ಹೇಳಲಾಗಿದೆ. ಈ ಎಲ್ಲಾ ಮಾಧ್ಯಮಗಳಿಂದ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವಿರುದ್ಧ ಇರುವ ಮತ್ತು ಮಾನಹಾನಿ ತರುವ ಕಂಟೆಂಟ್ ಅನ್ನು ತೆಗೆದುಹಾಕಲು ಸೂಚಿಸಬೇಕು ಎಂದು ಶಿಲ್ಪಾ  ಕೋರಿದ್ದರು.


ಇದನ್ನೂ ಓದಿ-ಜಮೀನು ಖರೀದಿ ವಿಚಾರದಲ್ಲಿ ಶಿಲ್ಪಾ ಶೆಟ್ಟಿ ತಾಯಿಗೂ ಮೋಸ; ಕೋರ್ಟ್ ಮೆಟ್ಟಿಲೇರಿದ ಸುನಂದಾ ಶೆಟ್ಟಿ


ಆದರೆ, "Google, YouTube ಮತ್ತು Facebook ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಸಂಪಾದಕೀಯ ವಿಷಯದ ಮೇಲೆ ನಿಯಂತ್ರಣವನ್ನು ಕೋರುವ ನಿಮ್ಮ ವಿನಂತಿಯು ಅಪಾಯಕಾರಿಯಾಗಿದೆ" ಎಂದು ನ್ಯಾಯಾಲಯ ಶಿಲ್ಪಾಗೆ ಹೇಳಿದೆ. ಆದರೆ, ಈ ಪ್ರಕರಣದಲ್ಲಿರುವ ಎಲ್ಲ ಪ್ರತಿವಾದಿಗಳಿಗೆ ತಮ್ಮ ಅಫಿಡವಿಟ್ ಸಲ್ಲಿಸುವಂತೆ  ಹೈಕೋರ್ಟ್ ನಿರ್ದೇಶನ ನೀಡಿದೆ  ಮತ್ತು ಮುಂದಿನ ವಿಚಾರಣೆಗೆ ಸೆಪ್ಟೆಂಬರ್ 20 ಕ್ಕೆ ಮುಂದೂಡಿದೆ.


ಇದನ್ನೂ ಓದಿ-ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಮೂರು ಲಕ್ಷ ದಂಡ ಹಾಕಿದ SEBI