ರಾಜ್ ಕುಂದ್ರಾ ಬಂಧನದ ಬಳಿಕ ಒಂದೊಂದೇ ಪ್ರಾಜೆಕ್ಟ್ ಗಳನ್ನು ಕಳೆದುಕೊಳ್ಳುತ್ತಿರುವ ಶಿಲ್ಪಾಶೆಟ್ಟಿ

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ  ಹೆಸರು ಹೊರ ಬರುತ್ತಿದ್ದಂತೆ ಇದೀಗ ಶಿಲ್ಪಾ ಶೆಟ್ಟಿ ಕೈಯಿಂದ ಒಂದೊಂದೇ ಪ್ರಾಜೆಕ್ಟ್  ಗಳು ಕೈತಪ್ಪುತ್ತಿವೆ. ಪತಿಯ ಬಂಧನದಿಂದಾಗಿ ಇದೀಗ ಶಿಲ್ಪಾ ನಷ್ಟ ಎದುರಿಸುವಂತಾಗಿದೆ. 

Written by - Ranjitha R K | Last Updated : Jul 29, 2021, 09:36 PM IST
  • ರಾಜ್ ಬಂಧನದಿಂದಾಗಿ ನಷ್ಟ ಎದುರಿಸುತ್ತಿರುವ ಶಿಲ್ಪಾ
  • ಟಿವಿ ಕಾರ್ಯಕ್ರಮಗಳಿಂದ, ಚಿತ್ರೀಕರಣದಿಂದ ದೂರ ಉಳಿದ ಶಿಲ್ಪಾ
  • ಬಾಲಿವುಡ್ ನ ಪವರ್ ಫುಲ್ ದಂಪತಿಯಾಗಿದ್ದ ಶಿಲ್ಪಾ –ರಾಜ್
ರಾಜ್ ಕುಂದ್ರಾ ಬಂಧನದ ಬಳಿಕ ಒಂದೊಂದೇ ಪ್ರಾಜೆಕ್ಟ್ ಗಳನ್ನು ಕಳೆದುಕೊಳ್ಳುತ್ತಿರುವ ಶಿಲ್ಪಾಶೆಟ್ಟಿ

ನವದೆಹಲಿ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ರಾಜ್ ಕುಂದ್ರಾ (Raj Kundra) ಮತ್ತು ಶಿಲ್ಪಾ ಶೆಟ್ಟಿ ಬಾಲಿವುಡ್‌ನ ಪವರ್ ಫುಲ್ ದಂಪತಿಗಳ ಪಟ್ಟಿಯಲ್ಲಿದ್ದರು. ಯಾವುದೇ ಶೋಗಳಲ್ಲಿ ಅಥವಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬೇಕಾದರೆ, ಕೋಟಿ ಕೋಟಿ ಶುಲ್ಕವನ್ನು ವಿಧಿಸುತ್ತಿದ್ದರು.

ಆದರೆ, ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ (Raj Kundra) ಹೆಸರು ಹೊರ ಬರುತ್ತಿದ್ದಂತೆ ಇದೀಗ ಶಿಲ್ಪಾ ಶೆಟ್ಟಿ ಕೈಯಿಂದ ಒಂದೊಂದೇ ಪ್ರಾಜೆಕ್ಟ್  ಗಳು ಕೈತಪ್ಪುತ್ತಿವೆ. ಪತಿಯ ಬಂಧನದಿಂದಾಗಿ ಇದೀಗ ಶಿಲ್ಪಾ (Shilpa Shetty) ನಷ್ಟ ಎದುರಿಸುವಂತಾಗಿದೆ. 

ಇದನ್ನೂ ಓದಿ : ಜಮೀನು ಖರೀದಿ ವಿಚಾರದಲ್ಲಿ ಶಿಲ್ಪಾ ಶೆಟ್ಟಿ ತಾಯಿಗೂ ಮೋಸ; ಕೋರ್ಟ್ ಮೆಟ್ಟಿಲೇರಿದ ಸುನಂದಾ ಶೆಟ್ಟಿ

ಸೂಪರ್ ಡ್ಯಾನ್ಸರ್ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ ಶಿಲ್ಪಾ : 
ಶಿಲ್ಪಾ ಶೆಟ್ಟಿ, ರಿಯಾಲಿಟಿ ಟಿವಿ ಶೋ 'ಸೂಪರ್ ಡ್ಯಾನ್ಸರ್ 4' (Super Dancer) ನ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಈ ಮೂಲಕ ಶಿಲ್ಪಾ ಕೋಟಿಗಟ್ಟಲೆ ಸಂಪಾದಿಸುತ್ತಿದ್ದರು. ಆದರೆ, ಪತಿ ರಾಜ್ ಕುಂದ್ರಾ ಬಂಧನಕ್ಕೊಳಗಾದ (Raj Kundra arrest) ನಂತರ, ಶಿಲ್ಪಾ ಶೋನಲ್ಲಿ ಕಾಣಿಸುತ್ತಿಲ್ಲ. ಶಿಲ್ಪಾ ಬದಲಾಗಿ ಈಗ ಕರಿಷ್ಮಾ ಕಪೂರ್ ತೀರ್ಪುಗಾರರ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.  

ಹಂಗಮಾ 2 ಚಿತ್ರದ ಪ್ರಚಾರದಲ್ಲೂ ಭಾಗಿಯಾಗಿಲ್ಲ :
ಅಷ್ಟೇ ಅಲ್ಲ, ವರ್ಷಗಳ ನಂತರ ಶಿಲ್ಪಾ ಶೆಟ್ಟಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೆಸರು ಹಂಗಮಾ -2. ರಾಜ್ ಬಂಧನದ ನಂತರ, ಶಿಲ್ಪಾ ಈ ಚಿತ್ರದ ಪ್ರಚಾರ ಕಾರ್ಯದಲ್ಲೂ ಭಾಗಿಯಾಗಿಲ್ಲ

ನಿಕಮ್ಮ ಬಿಡುಗಡೆ ದಿನಾಂಕ ಮುಂದಕ್ಕೆ : 
ಲಾಕ್‌ಡೌನ್‌ನಲ್ಲಿ (Lock down) ಕರೋನಾ ವೈರಸ್‌ನ ಅಪಾಯದ ನಡುವೆಯೂ, ಶಿಲ್ಪಾ ನಿಕಮ್ಮ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದರು. ಚಿತ್ರವು ಬಿಡುಗಡೆಗೂ ಸಜ್ಜಾಗಿದೆ. ಆದರೆ ಚಿತ್ರ ತಂಡ ಸದ್ಯಕ್ಕೆ ಅದರ ಬಿಡುಗಡೆಯನ್ನು ಮುಂದೂಡಿದೆ. 

ಇದನ್ನೂ ಓದಿ : KGF Chapter 2: ಸಂಜಯ್ ದತ್ ಹುಟ್ಟುಹಬ್ಬಕ್ಕೆ ‘ಅಧೀರ’ನ ಖಡಕ್ ಪೋಸ್ಟರ್ ರಿಲೀಸ್..!

ಶಿಲ್ಪಾ ಫಿಟ್‌ನೆಸ್ ಬ್ರಾಂಡ್‌ಗಳ ಫೇವರಿಟ್ ಆಗಿದ್ದರು. ಆದರೆ ಈಗ ಅಶ್ಲೀಲ ಚಿತ್ರ ವಿವಾದದಿಂದಾಗಿ, ಅನೇಕ ಬ್ರಾಂಡ್‌ಗಳು ತಮ್ಮ ಒಪ್ಪಂದಗಳನ್ನು ನವೀಕರಿಸುವುದಿಲ್ಲ ಎನ್ನಲಾಗಿದೆ. ಜಿ-ಬಿಸಿನೆಸ್ ಪ್ರಕಾರ, ಈ ಒಪ್ಪಂದಗಳನ್ನು ಮುಂದೂಡಬಹುದು ಎನ್ನಲಾಗಿದೆ. ಶಿಲ್ಪಾ 10-15 ಬ್ರಾಂಡ್‌ಗಳನ್ನು ಹೊಂದಿದ್ದು, ಪ್ರತಿಯೊಂದಕ್ಕೂ 1 ಕೋಟಿ ಶುಲ್ಕ ವಿಧಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News