ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕನ ಕಥೆಗೆ ಸೆಂಚುರಿ ಸ್ಟಾರ್ನಿಂದ ಗ್ರೀನ್ ಸಿಗ್ನಲ್!
Shivarajkumar-Hemanth Rao Combo:ಚಂದನವನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಲವ್ ಸೋರಿಯ ಬಳಿ ಮಾಸ್ ಚಿತ್ರದ ಕಡೆ ಮುಖ ಮಾಡಿದ್ದು, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಇದೀಗ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಹಾಗಾದರೆ ಅದು ಯಾವ ಚಿತ್ರ? ಇಲ್ಲದೆ ಸಂಪೂರ್ಣ ಮಾಹಿತಿ.
Actor Shivarajkumar And Director Hemanth Rao: ಸ್ಯಾಂಡಲ್‌ವುಡ್‌ನ ಕ್ರಿಯೇಟಿವ್ ಡೈರೆಕ್ಟರ್ ಹೇಮಂತ್ ರಾವ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ದೇಶದೆಲ್ಲೆಡೆ ಸದ್ದು ಮಾಡಿದ್ದು, ಸದ್ಯ ಪ್ರೀತಿ, ಪ್ರೇಮ ಎಲ್ಲ ಬೇಡ ಎಂದು ಮಾಸ್ ಮೂವಿ ಕಡೆ ಮುಖ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಮನು-ಪ್ರಿಯಾ ಪ್ರೇಮಕಥೆಯನ್ನು ಪ್ರೇಕ್ಷಕರ ಮನ ಮುಟ್ಟುವಂತೆ ತೋರಿಸಿ ಗೆದ್ದ ಬಳಿಕ, ಹಲವು ಭಾಷೆಗಳಲ್ಲಿ ತೆರೆ ಕಂಡು ಭಾರೀ ಮೆಚ್ಚುಗೆ ಪಾತ್ರವಾಗಿತು. ಸದ್ಯ ಹೇಮಂತ್ ರಾವ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ ಚಿತ್ರ ಮಾಡ್ತಾರೆ ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡಿದೆ.
ಇತ್ತೀಚೆಗೆ ಚಂದನವನದ ಅಂಗಳದಲ್ಲಿ ಡೈರೆಕ್ಟರ್ ಹೇಮಂತ್ ರಾವ್ ಸೆಂಚುರಿ ಸಾರ್ ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ ಎಂಬ ಗುಸುಗುಸು ಶುರುವಾಗಿದ್ದು, ಅದರಂತೆ ಹೇಮಂತ್ ರಾವ್ ಈಗಾಗಲೇ ಹ್ಯಾಟ್ರಿಕ್ ಹೀರೂ ಶಿವರಾಜ್‌ಕುಮಾರ್‌ಗೆ ಕಥೆ ಹೇಳಿದ್ದಾರಂತೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸೆಂಚುರಿ ಸ್ಟಾರ್ ಕಥೆ ಕೇಳಿ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರಂತೆ. ಶೀಘ್ರವೇ ಹೇಮಂತ್ ರಾವ್ ಹಾಗೂ ಶಿವರಾಜ್ ಕುಮಾರ್ ಚಿತ್ರ ಸೆಟ್ಟೇರಲಿದೆ ಎನ್ನಲಾಗ್ತಿದ್ದು, ಆದರೇ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ.
ಸೂಪರ್ ಸ್ಟಾರ್ ಸಿನಿಮಾದಲ್ಲಿ ನಾಯಕಿ ಚಾನ್ಸ್.. ಒಂದು ಅಫೇರ್ ನಿಂದ ಕೆರಿಯರ್ ನಾಶ.. ಸದ್ಯ ಕಣ್ಮರೆಯಾದ ನಟಿ ಈಕೆ!
ನಿರ್ದೇಶಕ ಹೇಮಂತ್ ರಾವ್ ಪ್ರೀತಿ, ಪ್ರೇಮದ ಕಥೆಯನ್ನು ತೆರೆಗೆ ತಂದ ಮೇಲೆ ತಮಗೆ ಆಕ್ಷನ್ ಸಿನಿಮಾಗಳು ಅಂದ್ರೆ ಇಷ್ಟ. ಅಷ್ಟೇ ಅಲ್ಲದೇ ಶಿವಣ್ಣ ತಮ್ಮ ನೆಚ್ಚಿನ ಹೀರೋ ಅಂತ ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ನಿರ್ದೇಶಕ ಇತ್ತೀಚೆಗೆ ನೋಡಿದ ಸಿನಿಮಾಗಳಲ್ಲಿ ‘ಜೈಲರ್’ನಲ್ಲಿ ಶಿವಣ್ಣ ನಡೆದುಕೊಂಡ ಬಂದ ರೀತಿ ತುಂಬಾ ಇಷ್ಟವಾಗಿದ್ದು, ಚಿತ್ರದಲ್ಲಿನ ಅವರ ಪಾತ್ರ ಸಖತ್ ಆಗಿತ್ತು ಎಂದು ಹೇಳಿದ್ದರು. ಇದೀಗ ಶಿವಣ್ಣ ಜೊತೆಯೇ ಸಿನಿಮಾ ಮಾಡಲು ಹೇಮಂತ್ ಕುಮಾರ್ ಮಸ್ತ್ ಮಾಸ್ ಕಥೆಯನ್ನು ಬರೆದಿವಂತೆ ಸೂಚಿಸುತ್ತಿದೆ.
ಸದ್ಯ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಹಾಗೆಯೇ ಟಾಲಿವುಡ್-ಕಾಲಿವುಡ್ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ‘ಭೈರತಿ ರಣಗಲ್’ ರಿಲೀಸ್‌ಗೆ ರೆಡಿಯಾಗುತ್ತಿದ್ದು, ಈಗಾಗಲೇ ‘ಕರಟಕ-ಧಮನಕ’ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಲಿದೆ. ಇನ್ನೂ ದಿನಕರ್ ತೂಗುದೀಪ ಜೊತೆಗೆ ಚಿತ್ರ ಘೋಷಣೆ ಆಗಿದ್ದು, ಮತ್ತೆ ‘ಘೋಸ್ಟ್ 2’ ಸಿನಿಮಾದ ಕೆಲಸ ಕೂಡ ಶುರುವಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.