Katrina-Vicky Wedding: ಕತ್ರಿನಾ -ವಿಕ್ಕಿ ವಿವಾಹದ ಭೋಜನದಲ್ಲಿ ಏನಿರಲಿದೆ ವಿಶೇಷ, ಕೇಕ್ ತಯಾರಿಸಲು ಇಟಲಿಯಿಂದ ಬಂದಿರುವ ಶೆಫ್
ಈ ಮದುವೆಯಲ್ಲಿ, ದೇಶೀಯ ಮತ್ತು ವಿದೇಶಿ ಅತಿಥಿಗಳು ಅಂದರೆ ವರ ಮತ್ತು ವಧು ಇಬ್ಬರ ಕಡೆಯವರ ಆಹಾರ ಪದ್ದತಿ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಇಲ್ಲಿ ವಸತಿ ಮಾತ್ರವಲ್ಲದೆ, ಊಟ ಪಚಾರಗಳ ಬಗ್ಗೆಯೂ ವಿಶೇಷ ಗಮನ ಹರಿಸಲಾಗುತ್ತಿದೆ.
ನವದೆಹಲಿ: ಕತ್ರೀನಾ ಕೈಫ್ (Katreena Kaif) ಮತ್ತು ವಿಕ್ಕಿ ಕೌಶಲ್ ವಿವಾಹ ಶಾಸ್ತ್ರಗಳು ನಿನ್ನೆಯಿಂದಲೇ ಪ್ರಾರಂಭವಾಗಿವೆ. ಈ ಮದುವೆಗೆ (Vicky-Katreena wedding) ಭಾರತ ಮಾತ್ರವಲ್ಲದೆ ವಿದೇಶದಿಂದಲೂ ಅನೇಕ ಅತಿಥಿಗಳು ಆಗಮಿಸಿದ್ದಾರೆ. ಈ ರಾಯಲ್ ವೆಡ್ಡಿಂಗ್ ಗೆ ಬರುವ ಅತಿಥಿಗಳಿಗೆ ರಾಯಲ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವೆನ್ಯೂ ಸಿಕ್ಸ್ ಸೆನ್ಸ್ ರೆಸಾರ್ಟ್‌ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿವೆ. ಆದರೆ ಈ ವಿವಾಹದಲ್ಲಿ ಭೋಜನ ವ್ಯವಸ್ಥೆ ಹೇಗಿರಲಿದೆ, ಏನೆಲ್ಲಾ ಇರಲಿವೆ ಎನ್ನುವ ಮಾಹಿತಿ ಇಲ್ಲಿದೆ.
ದೇಸಿ ಮತ್ತು ವಿದೇಶಿ ಆಹಾರ :
ಈ ಮದುವೆಯಲ್ಲಿ (Vicky Katreena wedding), ದೇಶೀಯ ಮತ್ತು ವಿದೇಶಿ ಅತಿಥಿಗಳು ಅಂದರೆ ವರ ಮತ್ತು ವಧು ಇಬ್ಬರ ಕಡೆಯವರ ಆಹಾರ ಪದ್ದತಿ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಇಲ್ಲಿ ವಸತಿ ಮಾತ್ರವಲ್ಲದೆ, ಊಟ ಪಚಾರಗಳ ಬಗ್ಗೆಯೂ ವಿಶೇಷ ಗಮನ ಹರಿಸಲಾಗುತ್ತಿದೆ. ವಿವಾಹದ ಭೋಜನದಲ್ಲಿ ಕಚೋರಿಗಳ ಜೊತೆಗೆ ಚಾಟ್, ಕಬಾಬ್ ಮತ್ತು ರಾಜಸ್ಥಾನಿ ಭಕ್ಷ್ಯಗಳನ್ನು ಸೇರಿಸಲಾಗಿದೆ. ಇದರೊಂದಿಗೆ 5 ಅಂತಸ್ತಿನ ಕೇಕ್ ಅನ್ನು ಕೂಡ ಮೆನುವಿನಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ : Sara Tendulkar: ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಮದುವೆಯ ಭೋಜನದಲ್ಲಿ ಏನೆಲ್ಲಾ ಇರಲಿದೆ?
-ಚೌಪಾಟಿ- ಕಚೋರಿ, ದಹಿ ಭಲ್ಲಾ, ಫ್ಯೂಷನ್ ಚಾಟ್, ಲೈವ್ ಸ್ಟಾಲ್, ಗೋಲ್ ಗಪ್ಪ, ಪಾನ್ ಇರಲಿದೆ.
-ಉತ್ತರ ಭಾರತೀಯ ಆಹಾರ - ಕಬಾಬ್ , ಮೀನು ಮತ್ತು ಥಾಲ್ ಒಳಗೊಂಡಿದೆ .
ರಾಜಸ್ಥಾನಿ ಪಾಕಪದ್ಧತಿ- ದಾಲ್ ಬಾಟಿ ಚುರ್ಮಾದಂತಹ ಅನೇಕ ಸಾಂಪ್ರದಾಯಿಕ ಭಕ್ಷ್ಯ.
-ಸಿಹಿತಿಂಡಿಗಳು - ಈ ಮದುವೆಯಲ್ಲಿ ಅತಿಥಿಗಳು ದೇಶದ ಎಲ್ಲಾ ಪ್ರಸಿದ್ಧ ಸಿಹಿತಿಂಡಿಗಳನ್ನು ಸವಿಯಬಹುದು.
ಇಟಲಿಯಿಂದ ಕೇಕ್ ಬಾಣಸಿಗ :
ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ ಮದುವೆಯ ಕೇಕ್ (Marriage cake) ಎಲ್ಲರಿಗೂ ನೆನಪಿರುತ್ತದೆ. ಇದೀಗ ಈ ಮದುವೆಯಲ್ಲಿ ಕೂಡಾ ವಧು-ವರರು ಕಟ್ ಮಾಡಿಲಿರುವ ಗ್ರ್ಯಾಂಡ್ ಕೇಕ್ ಕೂಡ ಜನರ ಮನಸ್ಸಿನಲ್ಲಿ ಹಾಗೆಯೇ ಉಳಿಯಲಿದೆ. ಇಲ್ಲಿ 5 ಅಂತಸ್ತಿನ ಕೇಕ್ ತಯಾರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಕೇಕ್ ತಯಾರಿಸಲು ಇಟಲಿಯಿಂದ (Italy) ವಿಶೇಷ ಬಾಣಸಿಗರನ್ನು ಕರೆಸಲಾಗಿದೆ.
ಇದನ್ನೂ ಓದಿ : ಕತ್ರೀನಾ - ವಿಕ್ಕಿ ಮದುವೆಗೆ ಬರುವ ಗೆಸ್ಟ್ ಗಳಿಗೆ ನೀಡಲಾಗುತ್ತಿದೆ Instruction ಲೆಟರ್, ನೋಟ್ ನಲ್ಲಿರುವ ಪ್ರಮುಖ ವಿಷಯಗಳೇನು ಗೊತ್ತಾ ?
ಅತಿಥಿಗಳ ಪಟ್ಟಿ :
ಮೂರು ದಿನಗಳ ಕಾಲ ಕ್ಯಾಟ್-ವಿಕ್ಕಿ ಮದುವೆ (kat- Vicky marriage) ಕಾರ್ಯಕ್ರಮ ನಡೆಯಲಿದೆ. ನಿನ್ನೆ ಮದುವೆಯ ಸಂಗೀತ ಕಾರ್ಯಕ್ರಮ ನೆರವೇರಿದೆ. ಇಂದು ಮೆಹಂದಿ ಶಾಸ್ತ್ರ ಮತ್ತು ಡಿಸೆಂಬರ್ 9 ರಂದು ಮದುವೆ ನಡೆಯಲಿದೆ. ಸವಾಯಿ ಮಾಧೋಪುರ್ ಜಿಲ್ಲೆಯ ಚೌತೇ ಬರ್ವಾರಾ ಪಟ್ಟಣದ ಬರ್ವಾರಾ ಫೋರ್ಟ್‌ನ ಸಿಕ್ಸ್ ಸೆನ್ಸ್ ರೆಸಾರ್ಟ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಸಪ್ತಪದಿ ತುಳಿಯಲಿದ್ದಾರೆ. ಈ ರೆಸಾರ್ಟ್‌ಗೆ ದಿನಕ್ಕೆ ಸುಮಾರು 6 ರಿಂದ 7 ಲಕ್ಷ ರೂಪಾಯಿ ವೆಚ್ಚ ಎಂದು ಹೇಳಲಾಗುತ್ತಿದೆ. ಒಟ್ಟು 120 ಅತಿಥಿಗಳು (guest list)ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ