ಕತ್ರೀನಾ - ವಿಕ್ಕಿ ಮದುವೆಗೆ ಬರುವ ಗೆಸ್ಟ್ ಗಳಿಗೆ ನೀಡಲಾಗುತ್ತಿದೆ Instruction ಲೆಟರ್, ನೋಟ್ ನಲ್ಲಿರುವ ಪ್ರಮುಖ ವಿಷಯಗಳೇನು ಗೊತ್ತಾ ?

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಅವರ ರಾಯಲ್ ವೆಡ್ಡಿಂಗ್‌ಗೆ ಹಾಜರಾಗುವ ಅತಿಥಿಗಳು ಈ ನೋಟ್ ನಲ್ಲಿ ಬರೆದಿರುವ ವಿಷಯಗಳನ್ನು ಚಾಚು ತಪ್ಪದೆ ಪಾಲಿಸಬೇಕಾಗುತ್ತದೆ. 

Written by - Ranjitha R K | Last Updated : Dec 7, 2021, 03:46 PM IST
  • ಇಂದು ವಿಕ್ಕಿ-ಕತ್ರಿನಾ ಸಂಗೀತ ಕಾರ್ಯಕ್ರಮ
  • ಅತಿಥಿಗಳಿಗೆ ನೀಡಲಾಗುತ್ತಿದೆ ವಿಶೇಷ ಸೂಚನೆ
  • ಅತಿಥಿಗಳಿಗೆ ವಿಶೇಷ Instruction ಲೆಟರ್
ಕತ್ರೀನಾ - ವಿಕ್ಕಿ ಮದುವೆಗೆ ಬರುವ ಗೆಸ್ಟ್ ಗಳಿಗೆ ನೀಡಲಾಗುತ್ತಿದೆ Instruction ಲೆಟರ್, ನೋಟ್ ನಲ್ಲಿರುವ ಪ್ರಮುಖ ವಿಷಯಗಳೇನು ಗೊತ್ತಾ ?  title=
ಇಂದು ವಿಕ್ಕಿ-ಕತ್ರಿನಾ ಸಂಗೀತ ಕಾರ್ಯಕ್ರಮ (file photo)

ನವದೆಹಲಿ : ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆಯ (katrina Vicky wedding) ಸಿದ್ಧತೆಗಳು ಪೂರ್ಣಗೊಂಡಿವೆ. ಸವಾಯಿ ಮಾಧೋಪುರಕ್ಕೆ  ಅತಿಥಿಗಳು ಆಗಮಿಸುತ್ತಿದ್ದಾರೆ. ಆದರೆ ಮದುವೆಗೆ ಆಗಮಿಸುವ ಎಲ್ಲಾ ಅತಿಥಿಗಳಿಗೆ ವಿಕ್ಕಿ ಮತ್ತು ಕತ್ರಿನಾ ತಂಡದಿಂದ Instruction ಲೆಟರ್ ನೀಡಲಾಗುತ್ತಿದೆ. ಈ ಲೆಟರ್ ನಲ್ಲಿ ಒಂದು ಮುಖ್ಯವಾದ ವಿಷಯದ ಬಗ್ಗೆ ಗಮನ ಹರಿಸುವಂತೆ ಹೇಳಲಾಗಿದೆ. ಅಲ್ಲದೆ, ಪ್ರತೊಯೋಬ್ಬರು ಇದನ್ನೂ ತಪ್ಪದೆ ಅನುಸರಿಸುವಂತೆ ಕೋರಲಾಗಿದೆ. 

ಅತಿಥಿಗಳಿಗೆ ಒಂದು ಪುಟದ ವಿಶೇಷ ನೋಟ್ ನೀಡಲಾಗುತ್ತಿದೆ :
ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಅವರ ರಾಯಲ್ ವೆಡ್ಡಿಂಗ್‌ಗೆ ಹಾಜರಾಗುವ ಅತಿಥಿಗಳು ಈ ನೋಟ್ ನಲ್ಲಿ ಬರೆದಿರುವ ವಿಷಯಗಳನ್ನು ಚಾಚು ತಪ್ಪದೆ ಪಾಲಿಸಬೇಕಾಗುತ್ತದೆ. 

ಇದನ್ನೂ ಓದಿ : Vikrant Rona Release Date: ಫೆ.24ರಂದು ಬಿಡುಗಡೆಯಾಗಲಿದೆ ಸುದೀಪ್​ ನಟನೆಯ ಬಹುನಿರೀಕ್ಷಿತ ಚಿತ್ರ

ಫೋನ್ ನಿಷೇಧ : 
ಈ ರಾಯಲ್ ವೆಡ್ಡಿಂಗ್ ನಲ್ಲಿ ಭಾಗವಹಿಸುವ ಅತಿಥಿಗಳು ಫೋನ್ ಗಳನ್ನು ತರುವುದನ್ನು ನಿಷೇಧಿಸಲಾಗಿದೆ.  'ಕೊನೆಗೂ ನೀವು ಇಲ್ಲಿಗೆ ಬಂದಿದ್ದೀರಿ. ಜೈಪುರದಿಂದ ರಣಥಂಬೋರ್‌ವರೆಗಿನ ರಸ್ತೆ ಪ್ರಯಾಣವನ್ನು ಆನಂದಿಸಿದ್ದೀರಿ ಎಂದು ಭಾವಿಸುತ್ತೇವೆ. ಕುಳಿತು ವಿಶ್ರಾಂತಿ ಪಡೆಯಿರಿ. ನಿಮ್ಮ ಮೊಬೈಲ್ (Mobile) ಅನ್ನು ಕೊಠಡಿಯಲ್ಲಿಯೇ ಬಿಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ. ಈ ವಿವಾಹ ಸಮಾರಂಭದ ಯಾವುದೇ ಕಾರ್ಯಕ್ರಮದ ಫೋಟೋವನ್ನು ಯಾವುದೇ ಸಾಮಾಜಿಕ ತಾಣದಲ್ಲಿ (Social media) ಅಪ್‌ಲೋಡ್ ಮಾಡುವುದಿಲ್ಲ ಎಂದು ನಿರೀಕ್ಷಿಸಲಾಗಿದೆ ಎಂದು ನೋಟ್ ನಲ್ಲಿ ಬರೆಯಲಾಗಿದೆ. 

ಇಂದು ವಿಕ್ಕಿ-ಕತ್ರಿನಾ ಸಂಗೀತ ಕಾರ್ಯಕ್ರಮ : 
ಕತ್ರಿನಾ (Katrina Kaif) ಮತ್ತು ವಿಕ್ಕಿಯ ವಿವಾಹದ ಸಂಗೀತ ಸಮಾರಂಭ ಇಂದು ನಡೆಯಲಿದೆ. ಇನ್ನು ಇಂದಿನ ಸಮಾರಂಭದಲ್ಲಿ  ಕತ್ರಿನಾ 'ತೆನು ಕಲಾ ಚಷ್ಮಾ' . ನಾಚ್ಡೆ ನೇ ಸಾರೆ ಮತ್ತು 'ತೇರಿ ಓರ್' ಹಾಡುಗಳಿಗೆ ಡಾನ್ಸ್ ಮಾಡಲಿದ್ದಾರೆ. 

ಇದನ್ನೂ ಓದಿ : ಚಿರಂಜೀವಿ, ರಜನಿಕಾಂತ್ ಗೆ​ RGV ಸವಾಲು! ಸ್ಟಾರ್ ನಟರ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ರಾಮ್ ಗೋಪಾಲ್ ವರ್ಮಾ ಟ್ವೀಟ್!

 ಪಂಜಾಬಿ ಹಾಡುಗಳಿಗೆ ಹೆಜ್ಜೆ ಹಾಕಲಿರುವ ವಿಕ್ಕಿ ಕೌಶಲ್ : 
ಡಿಸೆಂಬರ್ 7 ರಿಂದ ಅಂದರೆ ಇಂದಿನಿಂದ ವಿಕ್ಕಿ ಮತ್ತು ಕತ್ರಿನಾ ಮದುವೆ (Katrina kaif wedding) ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಇಂದು ಸಂಗೀತ ಕಾರ್ಯಕ್ರಮವಿದೆ. ಸಂಗೀತ ಕಾರ್ಯಕ್ರಮದಲ್ಲಿ ಕತ್ರಿನಾ ಸಹೋದರಿ ಇಸಾಬೆಲ್ಲೆ ಕೈಫ್ ತನ್ನ ಸಹೋದರ ಸಹೋದರಿಯರೊಂದಿಗೆ ಕತ್ರಿನಾಗೆ ಸರ್ ಪ್ರೈಸ್ ನೃತ್ಯವನ್ನು ನೀಡಲಿದ್ದಾರೆ. ಲೈವ್ ಶೋ ಗಾಗಿ ಅನೇಕ ಗಾಯಕರನ್ನು ಸಹ ಆಹ್ವಾನಿಸಲಾಗಿದೆ. ಸಂಜೆಯ ವೇಳೆಗೆ ಎಲ್ಲರೂ ಜೈಪುರ ತಲುಪಲಿದ್ದಾರೆ. ಮೂಲಗಳ ಪ್ರಕಾರ, ನೇಹಾ ಕಕ್ಕರ್, ಪತಿ ರೋಹನ್ ಮತ್ತು ಸಚಿತ್ ಪರಂಪರ  ಈಗಾಗಲೇ ಜೈಪುರದಲ್ಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News