Rashmika mandanna dating : ನಟ ನಟಿಯರು ಜಸ್ಟ್‌ ಒಂದು ಫೋಟೋಗೆ ಪೋಸ್‌ ಕೊಟ್ಟರೆ ಸಾಕು ನೆಟ್ಟಿಗರು ಅಲ್ಲೊಂದು ಹೊಸ ಕಥೆ ಕಟ್ಟುತ್ತಾರೆ. ಇದೀಗ ಭಾರತೀಯ ಸಿನಿ ರಂಗದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಕುರಿತು ಮತ್ತೊಂದು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟಾಲಿವುಡ್‌ ಖ್ಯಾತ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ನ್ಯಾಷುನಲ್‌ ಕ್ರಶ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ರಾಜಮೌಳಿ ನಿರ್ದೇಶನದ ಛತ್ರಪತಿ ಚಿತ್ರವನ್ನು ಪ್ರಭಾಸ್ ಅದೇ ಹೆಸರಿನಲ್ಲಿ  ಹಿಂದಿಯಲ್ಲಿ ರಿಮೇಕ್ ಮಾಡುತ್ತಿದ್ದಾರೆ. ಪ್ರಭಾಸ್ ಪಾತ್ರದಲ್ಲಿ ಸಾಯಿ ಶ್ರೀನಿವಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಸಾಯಿ ಶ್ರೀನಿವಾಸ್ ಅಭಿನಯದ ಹಲವು ಸಿನಿಮಾಗಳು ಹಿಂದಿಗೆ ಡಬ್ ಆಗುವ ಮೂಲಕ ಯೂಟ್ಯೂಬ್ ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿರುವ ಹಿನ್ನೆಲೆಯಲ್ಲಿ ಪೆನ್ ಸ್ಟುಡಿಯೋಸ್ ಛತ್ರಪತಿ ರಿಮೇಕ್ ನಿರ್ಮಾಣಕ್ಕೆ ಮುಂದಾಗಿದೆ.


ಇದನ್ನೂ ಓದಿ: Parineeti Chopra: ಮದುವೆ ಸಿದ್ಧತೆಯಲ್ಲಿ ಪರಿಣಿತಿ ಚೋಪ್ರಾ.! ಕೊನೆಗೂ ಪಾಪರಾಜಿಗಳ ಕ್ಯಾಮರಾದಲ್ಲಿ ಸಿಕ್ಕಿಬಿದ್ರಾ?


ಹಾಗಾಗಿ ಒಂದು ಕಡೆ ರಶ್ಮಿಕಾ ಮಂದಣ್ಣ ಮತ್ತೊಂದು ಕಡೆ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಬಾಲಿವುಡ್ ನಲ್ಲಿ ಕಾಲಿಡಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವವಾಗಿ, ರಶ್ಮಿಕಾ ಮಂದಣ್ಣ ಅವರ ಕೆಲವು ಚಿತ್ರಗಳು ಹಿಂದಿಯಲ್ಲೂ ಬಿಡುಗಡೆಯಾಗಿವೆ. ಆದರೆ ಕನ್ನಡತಿಗೆ ನಿರೀಕ್ಷೆಗೆ ತಕ್ಕಷ್ಟು ಕ್ರೇಜ್ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಹೆಚ್ಚಾಗಿ ಮುಂಬೈನಲ್ಲಿಯೇ ಉಳಿದಿರುವ ನಟಿ ಉತ್ತಮ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಇತ್ತೀಚೆಗೆ ಸಿನಿಮಾ ಸಮಾರಂಭವೊಂದರಲ್ಲಿ ಸಾಯಿ ಶ್ರೀನಿವಾಸ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರೂ ಈ ಹಿಂದೆ ಯಾವುದೇ ಸಿನಿಮಾದಲ್ಲಿ ನಟಿಸದಿದ್ದರೂ ಸಹ ಜೊತೆಯಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವೆ ಏನೋ ಇದೆ ಎಂಬ ಗುಸುಗುಸು ಸುದ್ದಿಗೆ ಕಾರಣವಾಗಿದೆ. ವಾಸ್ತವವಾಗಿ, ರಶ್ಮಿಕಾ ಮಂದಣ್ಣ ಈ ಹಿಂದೆ ರಕ್ಷಿತ್ ಶೆಟ್ಟಿ ಎಂಬ ನಾಯಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಾರಣಾಂತರದಿಂದ ಅದು ರದ್ದಾಗಿತ್ತು.


ಇದನ್ನೂ ಓದಿ: Nabha Natesh : ʼನಭಾʼ ನೈಜ ಸೌಂದರ್ಯ ವೈಭವದ ಮುಂದೆ ದೇವೇಂದ್ರನ ಸ್ವರ್ಗವೂ ಶೂನ್ಯ..!


ನಂತರ ಅವರು ವಿಜಯ್ ದೇವರಕೊಂಡ ಅವರನ್ನು ಪ್ರೀತಿಸುತ್ತಿದ್ದು ಇಬ್ಬರು ಮದುವೆ ಆಗ್ತಾರೆ ಎಂಬ ಸುದ್ದಿ ಹಬ್ಬಿತ್ತು. ಎಲ್ಲರೂ ಇದನ್ನು ನಿಜ ಅಂತ ನಂಬಿದ್ದರು. ಅಲ್ಲದೆ, ವಿಜಯ್ ದೇವರಕೊಂಡ ರಶ್ಮಿಕಾ ಜೊತೆ ರಶ್ಮಿಕಾ ಜೊತೆ ಮಾಲ್ಡೀವ್ಸ್ ಗೆ ಹೋಗಿದ್ದರು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ಪ್ರಚಾರ ಪಡೆದುಕೊಂಡಿದ್ದರು. ಆದರೆ ಏನಾಯಿತೋ ಗೊತ್ತಿಲ್ಲ ಇವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ.


ಇನ್ನು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಈ ಸುದ್ದಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಮೇ 12 ರಂದು ಹಿಂದಿ ಚಿತ್ರ ಛತ್ರಪತಿ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ. ಅದಕ್ಕಾಗಿಯೇ ಶ್ರೀನಿವಾಸ್ ಬಾಲಿವುಡ್‌ನ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಶ್ಮಿಕಾ ಡೇಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದು ನಾವಿಬ್ಬರೂ ಒಮ್ಮೆ ಭೇಟಿಯಾಗಿದ್ದೇವೆ. ಡೇಟಿಂಗ್ ಅದೇಲ್ಲ ಸುಳ್ಳು ಸುದ್ದಿ, ನಾವಿಬ್ಬರು ಒಳ್ಳೆಯ ಸ್ನೇಹಿತರು ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲಸದ ನಿಮಿತ್ತ ಹೈದರಾಬಾದಿನಿಂದ ಮುಂಬೈಗೆ ಹೋಗುವಾಗ ಭೇಟಿಯಾಗಿದ್ದರು ಆದ್ರೆ, ನಾವು ಜೊತೆಯಾಗಿ ಪ್ರಯಾಣಿಸಿಲ್ಲ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.