ʼಇದು ಭಾರತದ ಸಂಸ್ಕೃತಿ ಅಲ್ಲ, ಬದಲಾಗುʼ : ಉರ್ಫಿಗೆ ಉಗಿದ ಹಿಂದುಸ್ತಾನಿ ಭಾಹು..!
ಹಿಂದಿ ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ವಿವಾದಗಳ ಮೇಲೆ ವಿವಾದಗಳು ಕೇಳಿಬರುತ್ತಿವೆ. ಉಡುಗೆ ತೊಡುಗೆಗಳಿಂದಲೇ ಹೆಚ್ಚು ಪ್ರಸಿದ್ಧರಾಗಿರುವ ಉರ್ಫಿಗೆ ಸೋಷಿಯಲ್ ಮೀಡಿಯಾ ಸೆನ್ಸೇಷನ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಹಿಂದೂಸ್ತಾನಿ ಭಾವು ಖಡಕ್ ವಾರ್ನಿಂಗ್ ಕೊಟ್ಟು, ಬದಲಾಗುವಂತೆ ಎಚ್ಚರಿಕೆ ನೀಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಲ್ಲದೆ, ಉರ್ಫಿ ಕೂಡ ಭಾವು ವಿರುದ್ಧ ಗುಡುಗಿದ್ದಾರೆ.
Urfi Javed Hindustani Bhau : ಹಿಂದಿ ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ವಿವಾದಗಳ ಮೇಲೆ ವಿವಾದಗಳು ಕೇಳಿಬರುತ್ತಿವೆ. ಉಡುಗೆ ತೊಡುಗೆಗಳಿಂದಲೇ ಹೆಚ್ಚು ಪ್ರಸಿದ್ಧರಾಗಿರುವ ಉರ್ಫಿಗೆ ಸೋಷಿಯಲ್ ಮೀಡಿಯಾ ಸೆನ್ಸೇಷನ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಹಿಂದೂಸ್ತಾನಿ ಭಾವು ಖಡಕ್ ವಾರ್ನಿಂಗ್ ಕೊಟ್ಟು, ಬದಲಾಗುವಂತೆ ಎಚ್ಚರಿಕೆ ನೀಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಲ್ಲದೆ, ಉರ್ಫಿ ಕೂಡ ಭಾವು ವಿರುದ್ಧ ಗುಡುಗಿದ್ದಾರೆ.
ಬೋಲ್ಡ್ ಗರ್ಲ್ ವಿರುದ್ದ ವಿಡಿಯೋ ಮೂಲಕ ಭಾವು, ʼಸುಧಾರ್ ಜಾ ಉರ್ಫಿ.. ಫ್ಯಾಶನ್ ಹೆಸರಿನಲ್ಲಿ ಹೀಗೆ ಸುತ್ತಾಡುತ್ತಿರುವುದು ಸಮಾಜಕ್ಕೆ ತಪ್ಪು ಪರಿಣಾಮ ಬೀರುತ್ತಿದೆ. ಇದು ಭಾರತದ ಸಂಸ್ಕೃತಿಯಲ್ಲ. ಇದನ್ನು ನೀನು ನಿಲ್ಲಿಸದಿದ್ದರೆ ನಾನು ನಿನ್ನನ್ನು ಸರಿಪಡಿಸುತ್ತೇನೆʼ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇನ್ನು ಅರ್ಧಂಬರ್ಧ ಉಡುಗೆ ತೊಡುವುದನ್ನೇ ಕಾಯಕ ಮಾಡಿಕೊಂಡಿರುವ ನಟಿ ಪ್ರತಿದಿನ ಹಾಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ವಿವಾದಗಳಿಗೆ ಗುರಿಯಾಗುತ್ತಿದ್ದಾರೆ.
ಇದನ್ನೂ ಓದಿ: ಹೀರೋ ಕಾರ್ತಿ ಫೇಸ್‌ಬುಕ್ ಖಾತೆ ಹ್ಯಾಕ್ : ಫ್ಯಾನ್ಸ್‌ಗಳನ್ನು ಎಚ್ಚರಿಸಿದ ಸ್ಟಾರ್ ನಟ..!
ಸಿನಿಮಾಗಳಿಗಿಂತಲೂ ವಿವಾದಗಳಿಂದ ಉರ್ಫಿ ಹೆಚ್ಚು ಜನಪ್ರೀಯತೆ ಗಳಿಸಿದ್ದಾರೆ. ಆಕೆ ಡ್ರೇಸ್‌ಸೆನ್ಸ್‌ಗೆ ನೆಟ್ಟಿಗರ ಕೋಪಕ್ಕೆ ಕಾರಣವಾಗುತ್ತಿದೆ. ಇನ್ನೂ ಕೆಲವರು ಅವಳ ಧೈರ್ಯವನ್ನು ಮೆಚ್ಚಿ ಸೂಪರ್ ಎನ್ನುತ್ತಿದ್ದಾರೆ. ಅಲ್ಲದೆ, ಅಶ್ಲೀಲ ಕಾಮೆಂಟ್‌ಗಳು ಸಹ ಹೆಚ್ಚು. ಸದ್ಯ ಬಿಗ್ ಬಾಸ್ ಖ್ಯಾತಿಯ ಹಿಂದೂಸ್ತಾನಿ ಭಾವು ಮಾತಿಗೆ ಉರ್ಫಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
ಭಾವುಗೆ ಮಾತಿಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ ಉರ್ಫಿ... ಬೈಯ್ಯುವುದು ಭಾರತದ ಸಂಸ್ಕೃತಿಯೇ..? ನನಗೆ ಹೇಳುವ ನೀವು ನಿಮ್ಮ ಬೈಗುಳದಿಂದ ಎಷ್ಟು ಜನರನ್ನು ಸುಧಾರಿಸಿದ್ದೀರಿ..? ನಾನು ನಿಮ್ಮನ್ನು ಜೈಲಿಗೆ ಕಳುಹಿಸಬಹುದು.. ಏಕೆಂದ್ರೆ ನೀವು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದೀರಿ ಎಂದು ಎಚ್ಚರಿಸಿದ್ದಾರೆ. ಇನ್ನು ಉರ್ಫಿಯ ಈ ಮಾತಿಗೆ ಹಿಂದುಸ್ತಾನಿ ಭಾವು ಸೇರಿದಂತೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಇದನ್ನೂ ಓದಿ: Ragini Dwivedi : ರಾಗಿಣಿ ದ್ವಿವೇದಿಯ ‘ಬಿಂಗೊ’ ಸಿನಿಮಾಗೆ ಸಚಿವ ವಿ.ಸೋಮಣ್ಣ ಕ್ಲಾಪ್
ಇನ್ನೂ ಈ ಹಿಂದೆ ತನ್ನ ಬಟ್ಟೆಯ ಬಗ್ಗೆ ಮಾತನಾಡಿದ್ದ ಜನರಿಗೆ ಉರ್ಫಿ ಕೊಟ್ಟ ಉತ್ತರ ವೈರಲ್ ಆಗಿತ್ತು. ಅಶ್ಲೀಲ ಎನ್ನುವ ಜನರೇ ನನ್ನ ಹೆಸರನ್ನು ಹೆಚ್ಚಾಗಿ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹುಡುಗಿಯರು ಏನು ಧರಿಸಬೇಕು ಅಂತ ನೀವು ನಿರ್ಧಾರ ಮಾಡೋಕೆ ಇದು ತಾಲಿಬಾನ್ ಅಲ್ಲ. ಇದು ಅಫ್ಘಾನಿಸ್ತಾನ್ ಅಲ್ಲ ಎಂದು ಉರ್ಫಿ ಜಾವೇದ್ ಖಡಕ್ ಆಗಿ ಹೇಳಿದ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.