Sihi Kahi Chandru daughter Hitha  : ಖ್ಯಾತ ನಟ ಸಿಹಿ ಕಹಿ ಚಂದ್ರು ಪುತ್ರಿ ಹಿತ ಚಂದ್ರಶೇಖರ್‌ ಅವರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಹಿತ ಸಲೂನ್‌ನಲ್ಲಿ ತಮಗಾದ ಕೆಟ್ಟ ಅನುಭವವನ್ನು ತೆರೆದಿಟ್ಟಿದ್ದಾರೆ. ಯಾರೇ ಆಗಿರಲಿ ಸಲೂನ್‌ಗೆ ಹೋಗುವ ಮುನ್ನ ಕೆಲವು ವಿಚಾರಗಳ ಬಗ್ಗೆ ಗಮನಹರಿಸಿ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಹಿತ ಚಂದ್ರ ಶೇಖರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಿದ್ದಾರೆ. ನಾನು ಸಲೂನ್‌ಗೆ ಹೋಗಿದ್ದೆ. ನನಗೆ ಹೇರ್‌ ಕಲರ್‌ ಮಾಡಿಸಬೇಕಿತ್ತು. ನಾನು ಒಳ್ಳೆಯ ಅನುಭವ ಪಡೆಯಬಹುದು ಎಂದು ಕೊಂಡಿದ್ದೆ. ಬಹಳ ಸೆಲಿಬ್ರಿಟಿಗಳು ಆ ಸಲೂನ್‌ ಬಗ್ಗೆ ಹೇಳಿದ್ದರು. ಅದೇ ಭರವಸೆಯಲ್ಲಿ ನಾನು ಅಲ್ಲಿಗೆ ಹೋದೆ. ಆದರೆ ಆಗಿದ್ದೆ ಬೇರೆ ಎಂದು ಹಿತ ಹೇಳಿದ್ದಾರೆ. 


ಇದನ್ನೂ ಓದಿ : ಬಿಗ್‌ ಬಾಸ್‌ ಸ್ಫರ್ಧಿ ನಮ್ರತಾ ಗೌಡ ವಯಸ್ಸೆಷ್ಟು? ಮದುವೆ ಆಗಿದೆಯಾ? 


ಹೇರ್‌ ಕಟ್‌, ಹೇರ್‌ ಕಲರ್‌ ಎಲ್ಲವೂ ಚೆನ್ನಾಗಿ ಆಯಿತು. ಆದರೆ ನನ್ನ ಮುಖ ಈಗ ಊದಿಕೊಂಡಿದ್ದೆ. ನನ್ನ ಕಣ್ಣಿನ ಸುತ್ತಲಿನ ಭಾಗ, ನನ್ನ ಹಣೆ ಎಲ್ಲ ಬಾತಿದೆ. ಇದಕ್ಕೆ ಕಾರಣ ಅವರು ಬಳಿಸಿದ ಹೇರ್‌ ಕಲರ್‌ ಎಂದು ಹಿತ ಹೇಳಿದ್ದಾರೆ. 


 



 


ನಾನು ಸಲೂನ್‌ಗೆ ಹೋದಾಗ ಯಾವ ಹೇರ್‌ ಕಲರ್‌, ಯಾವ ಪ್ರೊಡಕ್ಟ್‌ ಎಂದು ಏನನ್ನು ಕೇಳಲಿಲ್ಲ. ಕಾರಣ ಇದೊಂದು ಒಳ್ಳೆಯ ಸಲೂನ್‌ ಎಂಬುದು ನನ್ನ ತಲೆಯಲ್ಲಿತ್ತು. ಅವರು ಚೆನಾಗಿರುವ ಪ್ರೊಡಕ್ಟ್‌ ಬಳಸ್ತಾರೋ ಇಲ್ಲವೋ ಅಂತ ನಾನು ಯೋಚನೆನೆ ಮಾಡಲಿಲ್ಲ. ಕುರುಡಾಗಿ ಅವರನ್ನ ನಂಬಿದೆ ಎಂದು ಹಿತ ಚಂದ್ರಶೇಖರ್‌ ಹೇಳಿದ್ದಾರೆ. 


ನಾನು ಹೇರ್‌ ಕಲರ್‌ ಮುಗಿಸಿ ಮನೆಗೆ ಬಂದಾಗ, ನನಗೆ ತುರಿಕೆ ಇತ್ತು. ಇದು ಹಾಗೆಯೇ ಹೆಚ್ಚಾಗುತ್ತಲೇ ಇತ್ತು. ರಾತ್ರಿಯಂತೂ ನನಗೆ ತಡೆಯಲಾರದಷ್ಟು ತುರಿಕೆ ಇತ್ತು. ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ನನ್ನ ಮುಖ ಊದಿಕೊಂಡಿತ್ತು. ಆಗ ನಾನು ವೈದ್ಯರ ಬಳಿ ಹೋದೆ. ಅವರು ಹೇಳಿದರು. PPD ಎಂಬ ಕೆಮಿಕಲ್‌ ಇತ್ತು. ಇದರಿಂದ ಹೀಗೆ ಆಗುತ್ತೆ ಎಂದು ವೈದ್ಯರು ಹೇಳಿದರು ಎಂದು ಹಿತ ಹೇಳಿದ್ದಾರೆ. 


ಇದು ನನಗಾಗಿದೆ ಎಂದರೆ ನಿಮಗೂ ಹೀಗಾಗುತ್ತೆ ಅಂತಲ್ಲ. ಆದರೆ ನನಗೆ ಆಗಿದ್ದು ನಿಮ್ಮಲ್ಲೂ ಕೆಲವರಿಗೆ ಆಗಬಹುದು ಎಂದು ಹಿತ ಅವೇರ್‌ನೆಸ್‌ ಮೂಡಿಸಿದ್ದಾರೆ. 


ಇದನ್ನೂ ಓದಿ : ವಿಜಯ್ ಮಲ್ಯ ಮಗನ ನಿಶ್ಚಿತಾರ್ಥ.. ಮದ್ಯದ ದೊರೆಯ ಸೊಸೆ ಇವರೇ ನೋಡಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.