ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಯೋಗಗಳು ನಡೆಯುತ್ತಿರುತ್ತದೆ. ಆದರೆ ಈ ಬಾರಿ ವಿಭಿನ್ನ ಹಾಗೂ ಈ ಹಿಂದೆ ನಡೆದಿರದ ಪ್ರಯೋಗವೊಂದು ಕನ್ನಡ ಚಿತ್ರರಂಗದದಲ್ಲಿ ನಡೆದಿದೆ. ಸ್ಕೈಪ್(ಅಂತರಜಾಲ)ದ ಮೂಲಕವೇ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. 


COMMERCIAL BREAK
SCROLL TO CONTINUE READING

ಈ ಚಿತ್ರದ ನಾಯಕ ಮತೀನ್ ಹುಸೇನ್ ಮೂಲತಃ ಯು ಎಸ್ ಎ ನಿವಾಸಿ. ಕೆಲವು ವರ್ಷಗಳ ನಂತರ ಮುಂಬೈಗೆ ಆಗಮಿಸಿದ್ದ ಮತೀನ್,  ಆನಂತರ ಅನುಪಮ್ ಖೇರ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಭೇತಿ ಪಡೆಯುತ್ತಾರೆ. ಆ ಬಳಿಕ ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ.


ನಿರ್ದೇಶನಕ್ಕಾಗಿ ಹಾಲಿವುಡ್ ನ ಖ್ಯಾತ ನಿರ್ದೇಶಕ ರಾಂಡಿ ಕೆಂಟ್ ಅವರನ್ನು ಸಂಪರ್ಕಿಸುತ್ತಾರೆ. ರಾಂಡಿ ಕೆಂಟ್ ಒಪ್ಪುತ್ತಾರೆ. ಆದರೆ ವೀಸಾ ತೊಂದರೆಯಿಂದ ರಾಂಡಿ ಕೆಂಟ್ ಇಲ್ಲಿಗೆ ಬರಲಾಗುವುದಿಲ್ಲ.‌ ಆಗ, ಈಗಿನ ತಂತ್ರಜ್ಞಾನ ಬಳಸಿಕೊಂಡು ಅಲ್ಲಿಂದಲೇ ಸ್ಕೈಪ್ ಮೂಲಕ ನಿರ್ದೇಶನ‌ ಮಾಡಲು ಆರಂಭಿಸುತ್ತಾರೆ. ಕಲಾವಿದರು ಬೆಂಗಳೂರಿನಲ್ಲಿ. ನಿರ್ದೇಶಕ ಲಾಸ್ ಎಂಜಲೀಸ್ ನಲ್ಲಿ. ಹೀಗೆ "ರೋಡ್ ಕಿಂಗ್" ಚಿತ್ರ ಸಿದ್ದವಾಗುತ್ತದೆ.


ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್‌ 13 ವರ್ಷಗಳ ನಂತರ ರಾಜಧಾನಿ ದೆಹಲಿಗೆ ಹೋಗಿದ್ದೇಕೆ..?


ಮತೀನ್ ಹುಸೇನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ.ರುಕ್ಷರ್ ದಿಲ್ಹಾನ್ (ರನ್ ಆಂತೋನಿ ಖ್ಯಾತಿ) ನಾಯಕಿಯಾಗಿ ನಟಿಸಿದ್ದಾರೆ. 


ಲವ್ ಬ್ರೇಕಪ್ ನಿಂದ ಎಕ್ಸ್ 


ಸಿಂಡ್ರೋಮ್ ಗೆ ತುತ್ತಾದ ಯುವಪ್ರೇಮಿಗಳ ಸುತ್ತ ಹೆಣೆದಿರುವ ಕಥೆಯಿದು. ರೊಮ್ಯಾಂಟಿಕ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರ ಸೆಪ್ಟೆಂಬರ್ ನಲ್ಲಿ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ. 


ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ಹಾಡಿರುವ "ಕೊಡು ನನಗೆ" ಎಂಬ ಹಾಡು ಕೂಡ ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಅರೀಫ್ ಲಲಾನಿ ಈ ಚಿತ್ರದ ಛಾಯಾಗ್ರಹಕರು.


ಇದನ್ನೂ ಓದಿ: ಶಿವಣ್ಣನ 60ನೇ ಹುಟ್ಟುಹಬ್ಬಕ್ಕೆ ‘ಗೋಸ್ಟ್’! ಪೊಸ್ಟರ್ ರಿಲೀಸ್ ಮಾಡಲಿರುವ ಕಿಚ್ಚ ಸುದೀಪ್


ಹಾಲಿವುಡ್ ನ ಖ್ಯಾತ ಚಿತ್ರಗಳಿಗೆ ಸೌಂಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿರುವ ಸ್ಕಾಟ್ ವಾಲ್ಫ್ ಈ ಚಿತ್ರಕ್ಕೂ ಸೌಂಡ್‌ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ಕಾಟ್ ವಾಲ್ಫ್ ಅವರ ಸೌಂಡ್ ಡಿಸೈನ್ "ರೋಡ್ ಕಿಂಗ್" ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.