ಅಭಿನಯ ಚಕ್ರವರ್ತಿ ಸುದೀಪ್‌ 13 ವರ್ಷಗಳ ನಂತರ ರಾಜಧಾನಿ ದೆಹಲಿಗೆ ಹೋಗಿದ್ದೇಕೆ..?

Written by - Malathesha M | Edited by - Manjunath N | Last Updated : Jul 16, 2022, 03:31 PM IST
  • ತಮ್ಮ ದೆಹಲಿ ವಿಸಿಟ್‌ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಆಗಿದ್ದಾರೆ.
  • ಈ ಸಂತಸದ ಸಂಗತಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಖುಷಿಪಟ್ಟಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್‌ 13 ವರ್ಷಗಳ ನಂತರ ರಾಜಧಾನಿ ದೆಹಲಿಗೆ ಹೋಗಿದ್ದೇಕೆ..? title=

ಕಿಚ್ಚ ಸುದೀಪ್‌ ಅಂದ್ರೆ ಖದರ್‌, ಕಿಚ್ಚ ಸುದೀಪ್‌ ಅಂದರೆ ಕೋಟಿ ಕೋಟಿ ಫ್ಯಾನ್ಸ್‌ ಪಾಲಿನ ಆರಾಧ್ಯ ದೈವ. ಹೀಗೆ ಕಿಚ್ಚ ಸುದೀಪ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ಆರಾಧಿಸುತ್ತಾರೆ. ಜಗತ್ತಿನಾದ್ಯಂತ ಹವಾ ಎಬ್ಬಿಸಿರುವ ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್ ರೋಣ’ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಹೀಗಿರುವಾಗಲೇ ದೆಹಲಿಯ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ 13 ವರ್ಷಗಳ ನಂತರ ಬಿಗ್ ಸರ್ಪ್ರೈಸ್‌ ನೀಡಿದ್ದಾರೆ.

ಸುದೀಪ್‌ ಅವರು ನೆಗೆಟಿವ್‌ ಶೇಡ್‌ನಲ್ಲಿ ಕಮಾಲ್‌ ಮಾಡಿದ್ದ ‘ಈಗ’ ಚಿತ್ರದ ಬಳಿಕ ಇದೀಗ ‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ವಿಸಿಟ್‌ ಕೊಟ್ಟಿದ್ದಾರೆ. ‘ಈಗ’ ಸಿನಿಮಾ ಮಾಡುವಾಗ ದೆಹಲಿಗೆ ಹೋಗಿದ್ದ ನಟ ಸುದೀಪ್ ಮತ್ತೆ ದೆಹಲಿಗೆ ವಿಸಿಟ್‌ ಕೊಟ್ಟಿರಲಿಲ್ಲ. ಆದರೆ ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ಸುದೀಪ್‌ ಅವರು ‘ವಿಕ್ರಾಂತ್ ರೋಣ’ನಿಗಾಗಿ ದೆಹಲಿಗೆ ಹೋಗಿದ್ದಾರೆ.

ಇದನ್ನೂ ಓದಿ- ನುಗ್ಗೆ ಸೊಪ್ಪಿನ ಸೇವನೆಯಿಂದ ಬಗೆಹರಿಯುತ್ತದೆ ಈ ಎಲ್ಲಾ ಸಮಸ್ಯೆಗಳು

ತಮ್ಮ ದೆಹಲಿ ವಿಸಿಟ್‌ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಆಗಿದ್ದಾರೆ. ಈ ಸಂತಸದ ಸಂಗತಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಖುಷಿಪಟ್ಟಿದ್ದಾರೆ. ದೆಹಲಿಯಲ್ಲಿ ಸುದೀಪ್‌ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು,  ‘ವಿಕ್ರಾಂತ್ ರೋಣ’ ಅಬ್ಬರಕ್ಕೆ ಕೌಂಟ್‌ಡೌನ್‌ ಶುರುವಾಗಿದೆ.

ಸಚಿವರ ಸಂತಸ
ಇನ್ನು ಸುದೀಪ್‌ ಅವರ ದೆಹಲಿ ಭೇಟಿ ಕುರಿತು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ‘ಇಂದು ದೆಹಲಿಯ ನನ್ನ ನಿವಾಸಕ್ಕೆ ಕನ್ನಡದ ಖ್ಯಾತ ಚಿತ್ರನಟ @KicchaSudeep ಅವರು ಭೇಟಿ ನೀಡಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.

ಇದನ್ನೂ ಓದಿ-  Pomegranate Benefits: ಬಿಪಿ ರೋಗಿಗಳಿಗೆ ವರದಾನ ದಾಳಿಂಬೆ.. ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಸಿಗುತ್ತೆ ಅದ್ಭುತ ಪ್ರಯೋಜನ

13 ವರ್ಷಗಳ ನಂತರ ದೆಹಲಿಗೆ ಭೇಟಿ ನೀಡುತ್ತಿರುವ ಸುದೀಪ್ ಅವರು, ಕಲೆ ಸಂಸ್ಕೃತಿ ಮತ್ತು ಸಾಮಾಜಿಕ‌ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಒಟ್ಟಾರೆ ಸುದೀಪ್‌ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಜುಲೈ 28ರಂದು ಅದ್ಧೂರಿಯಾಗಿ ಜಗತ್ತಿನಾದ್ಯಂತ ರಿಲೀಸ್‌ ಆಗಲಿದೆ. ಈ ಹೊತ್ತಲ್ಲಿ ಸುದೀಪ್‌ ಅವರ ಅಭಿಮಾನಿ ಬಳಗ ಸಂಭ್ರಮಿಸಲು ಸಜ್ಜಾಗಿದ್ದು, ಇದರ ಜೊತೆಗೆ ಅಬ್ಬರದ ಪ್ರಮೋಷನ್‌ ಮಾಡುತ್ತಿರುವ ‘ವಿಕ್ರಾಂತ್ ರೋಣ’ ತಂಡ ಚಿತ್ರದ ಹವಾ ಮತ್ತಷ್ಟು ಹೆಚ್ಚಿಸಿದೆ. ಇದರ ಜೊತೆಗೆ ಜುಲೈ 28ಕ್ಕಾಗಿ ಸಕಲ ಸಿದ್ಧತೆಯಲ್ಲಿ ತೊಡಗಿರುವ ಕೋಟಿ ಕೋಟಿ ಕನ್ನಡಿಗರು ‘ವಿಕ್ರಾಂತ್ ರೋಣ’ ಸಿನಿಮಾ ಸೆಲೆಬ್ರೇಟ್‌ ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News