ನವದೆಹಲಿ: ಆ ಸಿನಿಮಾ ಹೆಸರು ಕೇಳಿದ್ರೆ ಸಾಕು ಕೋಟಿ ಕೋಟಿ ಜನರಿಗೆ ಏನೋ ರೋಮಾಂಚನ. ಬಾಕ್ಸ್‌ ಆಫೀಸ್‍ನ ಡಾನ್‌ ಅಂತಾ ಕರೆಸಿಕೊಂಡಿದ್ದ ಆ ಚಿತ್ರ ಇದೀಗ ರೀ ರಿಲೀಸ್‌ ಆಗುತ್ತಿದೆ. 13 ವರ್ಷಗಳ ಹಿಂದೆ ಎಲ್ಲೆಲ್ಲೂ ಹವಾ ಎಬ್ಬಿಸಿ, ಹೊಸ ಇತಿಹಾಸ ಬರೆದಿದ್ದ ಆ ಬಾಕ್ಸ್‌ ಆಫೀಸ್‍ ರಿಯಲ್‌ ಸುಲ್ತಾನನ ರೀ ಎಂಟ್ರಿ ಕನ್ಫರ್ಮ್‌ ಆಗಿದೆ. ಅಷ್ಟಕ್ಕೂ ಆ ಸಿನಿಮಾ ರೀ ರಿಲೀಸ್‌ ಆಗ್ತಿರೋದು ಯಾಕೆ..? 13 ವರ್ಷಗಳ ಬಳಿಕ ಏನೆಲ್ಲಾ ಬದಲಾವಣೆ ಆಗಿದೆ..? ಬನ್ನಿ ತಿಳಿಯೋಣ.


COMMERCIAL BREAK
SCROLL TO CONTINUE READING

ಕೊರೊನಾ ಸಾಂಕ್ರಾಮಿಕದ ಬಳಿಕ ಸಿನಿಮಾ ಜಗತ್ತು ಮೈಕೊಡವಿ ನಿಂತಿದೆ. ಅದರಲ್ಲೂ ಹಾಲಿವುಡ್‍ನಲ್ಲಿ ಸಾಲು ಸಾಲು ಕಲರ್‌ಫುಲ್‌ ಚಿತ್ರಗಳು ರಿಲೀಸ್‌ಗೆ ಸಿದ್ಧವಾಗಿವೆ. ಆದರೆ ಅದೊಂದು ಸಿನಿಮಾ ಹೊಸ ಇತಿಹಾಸ ಸೃಷ್ಟಿ ಮಾಡಲು ಸಿದ್ಧವಾಗಿದೆ. ಡಿಸೆಂಬರ್‌ 16ಕ್ಕೆ ಜಗತ್ತಿನಾದ್ಯಂತ ಸಿನಿಮಾ ಹಬ್ಬವೇ ಮೇಳೈಸಲಿದೆ. ಆದರೆ ಅದಕ್ಕೂ ಮೊದಲು ಸಣ್ಣ ಝಲಕ್‌ ತೋರಿಸಲು ‘ಅವತಾರ್‌’ ನಿರ್ದೇಶಕರು ಸಜ್ಜಾಗಿದ್ದಾರೆ.‌ ಅಷ್ಟಕ್ಕೂ ಯಾವುದು ಆ ಚಿತ್ರ ಅಂದ್ರಾ..? ಹೇಳ್ತೀವಿ ಕೇಳಿ.


ಡ್ರಾಮಾ ಜೂನಿಯರ್ಸ್ ಸೀಸನ್ 4 ವಿನ್ನರ್‌ ಕುಂದಾಪುರದ ಸಮೃದ್ಧಿ ಎಸ್ ಮೊಗವೀರ್


ಮತ್ತೆ ‘ಅವತಾರ್’ ಆರ್ಭಟ..!


ಹಾಲಿವುಡ್‌ ಇಡೀ ಜಗತ್ತಿನಾದ್ಯಂತ ಅಬ್ಬರಿಸುವ ಸಿನಿಮಾ ಇಂಡಸ್ಟ್ರೀ. ಈ ಸಿನಿಮಾ ಇಂಡಸ್ಟ್ರಿಗೆ ದೇಶದ ಗಡಿ ಇಲ್ಲ. ಯಾಕಂದ್ರೆ ಹಾಲಿವುಡ್‌ ಮಂದಿ ತೆರೆಗೆ ತರುವ ಸಿನಿಮಾಗಳ ತಾಕತ್ತು ಹಾಗೆ ಇರುತ್ತೆ. ಹೊಸ ಹೊಸ ಟೆಕ್ನಾಲಜಿ ಬಳಸುತ್ತಾ ಸಿನಿಮಾಗಳಿಗೆ ಹೊಸ ರೂಪವನ್ನೇ ನೀಡುವ ಹಾಲಿವುಡ್‌ ಮಂದಿ ಎಲ್ಲಾ ವಿಚಾರದಲ್ಲೂ ರೆಕಾರ್ಡ್‌ ಕ್ರಿಯೇಟ್ ಮಾಡಿಬಿಡುತ್ತಾರೆ. ಅದರಲ್ಲೂ ಬಾಕ್ಸ್‌ ಆಫೀಸ್‌ನ ರಿಯಲ್‌ ಸುಲ್ತಾನ ಅಂತಾನೆ ಕರೆಸಿಕೊಳ್ಳುತ್ತಿದ್ದ ‘ಅವತಾರ್‌’ ಸೀಕ್ವೇಲ್‌ ಡಿಸೆಂಬರ್‌ಗೆ ರಿಲೀಸ್‌ ಆಗಲಿದೆ. ಅದಕ್ಕೂ ಮೊದಲು ‘ಅವತಾರ್‌-1’ ರೀ ರಿಲೀಸ್‌ ಮಾಡಲು ಈ ಸಿನಿಮಾ ಟೀಂ ನಿರ್ಧರಿಸಿದೆ.


ರಿಲೀಸ್‍ಗೆ ಮುಹೂರ್ತ ಫಿಕ್ಸ್‌!


ಅದು ಜಗತ್ತನ್ನೇ ಆಳಿದ ಸಿನಿಮಾ. ಆ ಚಿತ್ರ ರಿಲೀಸ್‌ ಆದಾಗ ವರ್ಲ್ಡ್‌ ವೈಡ್ ಬಾಕ್ಸ್‌ ಆಫೀಸ್‍ಅನ್ನು ಧೂಳಿಪಟ ಮಾಡಿತ್ತು. ಆ ರೇಂಜ್‌ಗೆ ಹವಾ ಎಬ್ಬಿಸಿದ್ದ ಸಿನಿಮಾದ ಸೀಕ್ವೆಲ್‌ ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ಬರೋಬ್ಬರಿ 13 ವರ್ಷದ ನಂತರ ಬಾಕ್ಸ್‌ ಆಫೀಸ್‌ ಬಲಭೀಮ ಪಾರ್ಟ್‌ 2 ಮೂಲಕ ಎಂಟ್ರಿ ಕೊಡ್ತಿದ್ದು, ಟ್ರೈಲರ್‌ ಮೂಲಕ ಮಿಂಚಿನ ಸಂಚಲನ ಸೃಷ್ಟಿಮಾಡಿದೆ. ಆದರೆ 13 ವರ್ಷದ ಹಿಂದೆ ‘ಅವತಾರ್‌ ಚಾಪ್ಟರ್‌-1’ ರಿಲೀಸ್‌ ಮಾಡಿ, ಈಗ ‘ಅವತಾರ್‌ ಚಾಪ್ಟರ್‌-2’ ರಿಲೀಸ್‌ ಮಾಡಿದರೆ ಸಿಕ್ಕಾಪಟ್ಟೆ ಕನ್ಫ್ಯೂಷನ್‌ ಕ್ರಿಯೇಟ್‌ ಆಗುತ್ತೆ ಅಲ್ವಾ..? ಅದರಲ್ಲೂ ಪಾತ್ರಗಳ ಬಗ್ಗೆ ಜನರಿಗೆ ಅರ್ಥ ಆಗೋದಿಲ್ಲ. ಹೀಗಾಗಿ ‘ಅವತಾರ್‌ ಚಾಪ್ಟರ್‌-1’ರ ರೀ ರಿಲೀಸ್‌ ಮಾಡಲು ಮುಹೂರ್ತ ಫಿಕ್ಸ್‌ ಮಾಡಲಾಗಿದೆ.


SIIMA 2022 ಗೆ ನಾಮಿನೇಟ್ ಆದ ಕನ್ನಡದ ಟಾಪ್ ನಟರು ಇವರೇ, ನೀವೂ ವೋಟ್‌ ಮಾಡಬಹುದು!


20 ಸಾವಿರ ಕೋಟಿ ರೂ.


‘ಅವತಾರ್‌’.. ಬಹುಶಃ ಈ ಹೆಸರು ಕೇಳಿದ್ರೆ ಸಾಕು ಜಗತ್ತಿನ ಪ್ರತಿಯೊಂದು ಸಿನಿ ಇಂಡಸ್ಟ್ರಿ ಶೇಕ್‌ ಆಗಿಬಿಡುತ್ತೆ. ಯಾಕೆ ಅಂತಾ ಗೊತ್ತಾ? ಯಾಕಂದ್ರೆ ‘ಅವತಾರ್‌’ ಸಿನಿಮಾ ತೋರಿಸಿದ ಅವತಾರಗಳು ಮಿಂಚು ಹರಿಸಿದ್ದವು. ಹೌದು, ‘ಅವತಾರ್‌ ಚಾಪ್ಟರ್‌-1’ 2009ರಲ್ಲಿ ವರ್ಲ್ಡ್‌ವೈಡ್‌ ರಿಲೀಸ್‌ ಆಗಿ ಊಹೆಗೂ ಮೀರಿದ ಸಕ್ಸಸ್‌ ಕಂಡಿತ್ತು. ಒಂದಲ್ಲ.. ಎರಡಲ್ಲ... ಬರೋಬ್ಬರಿ 3 ಬಿಲಿಯನ್‌ ಡಾಲರ್‌ ಅಂದ್ರೆ 20 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಬಾಚಿತ್ತು ‘ಅವತಾರ್‌ ಚಾಪ್ಟರ್‌-1’. ಈಗ ಡಿಸೆಂಬರ್‌ 16ಕ್ಕೆ ‘ಅವತಾರ್‌ ಚಾಪ್ಟರ್‌-2’ ರಿಲೀಸ್ ಆಗಲಿದ್ದು, ಅದಕ್ಕಿಂತಲೂ ಮೊದಲು ಅಂದ್ರೆ ಸೆಪ್ಟೆಂಬರ್‌ 23ಕ್ಕೆ ‘ಅವತಾರ್‌-1’ ರೀ ರಿಲೀಸ್‌ ಆಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.