Christopher Plummer Dies: Oscar ಪ್ರಶಸ್ತಿ ವಿಜೇತ ನಟ ಕ್ರಿಸ್ಟೋಫರ್ ಪ್ಲಮರ್ ನಿಧನ
Christopher Plummer Dies - ಕ್ರಿಷ್ಟೊಫರ್ ಪ್ಲಮರ್ ಅವರ ನಿಧನದ (Christopher Plummer Dies) ಸುದ್ದಿಯನ್ನು ಆವರ ಆಪ್ತ ಸ್ನೇಹಿತ ಹಾಗೂ ವ್ಯವಸ್ಥಾಪಕರಾಗಿರುವ ಲೌ ಪಿಟ್ ಖಚಿತಪಡಿಸಿದ್ದಾರೆ. ತಮ್ಮ ಕೊನೆಯ ದಿನಗಳಲ್ಲಿ ಕ್ರಿಷ್ಟೊಫರ್ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು ಎಂದು ಅವರು ಹೇಳಿದ್ದಾರೆ. ಕಳೆದ ಹಲವು ದಿನಗಳಿಂದ ಪ್ಲಮ್ಮರ್ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಪಿಟ್ ಹೇಳಿದ್ದಾರೆ.
ಮುಂಬೈ: Christopher Plummer Dies - ಖ್ಯಾತ ಹಾಲಿವುಡ್ ನಟ ಕ್ರಿಸ್ಟೋಫರ್ ಪ್ಲಮ್ಮರ್ ಇನ್ನಿಲ್ಲ. ಅವರು ತಮ್ಮ 91 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ರಿಸ್ಟೋಫರ್ ಅವರು ತಮ್ಮ ಕನೆಕ್ಟಿಕಟ್ ಮನೆಯಲ್ಲಿ ನಿಧನರಾದರು. ಕ್ರಿಸ್ಟೋಫರ್ ಪ್ಲಮ್ಮರ್ ಸಾವಿನ ಸುದ್ದಿಯ ಬಳಿಕ ಜಾಗತಿಕ ಚಿತ್ರೋದ್ಯೋಮದಲ್ಲಿ ಶೋಕದ ಅಲೆಯಿದೆ. ಪ್ಲಮ್ಮರ್‌ನ ಸಹ ಕಲಾವಿದರು ಮತ್ತು ಅವರ ಅಭಿಮಾನಿಗಳು ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಆಸ್ಕರ್ ಪ್ರಶಸ್ತಿ ಸೇರಿದಂತೆ ಎರಡು ಟೋನಿ ಪ್ರಶಸ್ತಿಗಳು ಮತ್ತು ಎರಡು ಎಮ್ಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪ್ಲಮ್ಮರ್ ಅತ್ಯುತ್ತಮ ಸಂಗೀತ ಚಿತ್ರ 'ದಿ ಸೌಂಡ್ ಆಫ್ ಮ್ಯೂಸಿಕ್' (The Sound Of Music) ನಲ್ಲಿಯೂ ಕೆಲಸ ಮಾಡಿದ್ದಾರೆ. ಕ್ರಿಷ್ಟೊಫರ್ ಅವರ ಸಾವಿನ ಸುದ್ದಿ ಪ್ರಕಟವಾಗುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಭಾರಿ ನಿರಾಶೆ ಮೂಡಿಸಿದೆ.
ಇದನ್ನು ಓದಿ-ಖ್ಯಾತ Hollywood ನಟಿ ಕೆಲ್ಲಿ ಪ್ರಿಸ್ಟನ್ ನಿಧನ
ಕ್ರಿಸ್ಟೋಫರ್ ಪ್ಲಮರ್ ಅವರ ನಿಧನದ (Christopher Plummer Dies) ಸುದ್ದಿಯನ್ನು ಆವರ ಆಪ್ತ ಸ್ನೇಹಿತ ಹಾಗೂ ವ್ಯವಸ್ಥಾಪಕರಾಗಿರುವ ಲೌ ಪಿಟ್ ಖಚಿತಪಡಿಸಿದ್ದಾರೆ. ತಮ್ಮ ಕೊನೆಯ ದಿನಗಳಲ್ಲಿ ಕ್ರಿಷ್ಟೊಫರ್ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು ಎಂದು ಅವರು ಹೇಳಿದ್ದಾರೆ. ಕಳೆದ ಹಲವು ದಿನಗಳಿಂದ ಪ್ಲಮ್ಮರ್ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಪಿಟ್ ಹೇಳಿದ್ದಾರೆ. ಕ್ರಿಸ್ಟೋಫರ್ ಪ್ಲಮ್ಮರ್ ಅವರ 'ದಿ ಸೌಂಡ್ ಆಫ್ ಮ್ಯೂಸಿಕ್' ಚಿತ್ರದಲ್ಲಿ ಕ್ಯಾಪ್ಟನ್ ಜಾರ್ಜ್ ವಾನ್ ಟ್ರ್ಯಾಪ್ ಪಾತ್ರವನ್ನು ಇದುವರೆಗೂ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಅವಿಸ್ಮರಣೀಯ ಛಾಪು ಮೂಡಿಸಿದೆ. ತಮ್ಮ ಜೀವನದ ಸುಮಾರು 70 ವರ್ಷಗಳನ್ನುಅವರು ಜಾಗತಿಕ ಚಿತ್ರೋದ್ಯೋಮಕ್ಕೆ (Hollywood) ನೀಡಿದ್ದಾರೆ.
ಇದನ್ನು ಓದಿ- Flashback 2020: ಇಹಲೋಕ ತ್ಯಜಿಸಿದ ಚಿತ್ರೋದ್ಯೋಮದ ಖ್ಯಾತನಾಮರು
ಕ್ರಿಸ್ಟೋಫರ್ ಪ್ಲಮ್ಮರ್ 'ಬಿಗಿನರ್ಸ್' (Biginners) ಗಾಗಿ 2012 ರ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ತಮ್ಮ 82 ನೇ ವಯಸ್ಸಿನಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. 'ಬಿಗಿನರ್ಸ್' ನಲ್ಲಿ ಕ್ರಿಸ್ಟೋಫರ್ ಪ್ಲಮ್ಮರ್, ತನ್ನ ಜೀವನದಲ್ಲಿ ಹಲವಾರು ವರ್ಷಗಳು ಗತಿಸಿದ ಬಳಿಕ ವ್ಯಕ್ತಿಯೊಬ್ಬ ತಾನು ಓರ್ವ ಸಲಿಂಗಕಾಮಿಯಾಗಿದ್ದೇನೆ ಎಂದು ಒಪ್ಪಿಕೊಳ್ಳುವ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದರು. ಇದಲ್ಲದೆ ವಿಲಿಯಂ ಷೇಕ್ಸ್‌ಪಿಯರ್ ಬರೆದ ಹಲವು ಪಾತ್ರಗಳಿಗೆ ಅವರು ತೆರೆಯ ಮೇಲೆ ಜೀವ ತುಂಬಿದ್ದರು.
ಇದನ್ನು ಓದಿ- ಸಂಶೋಧನೆಗಾಗಿ ಮತ್ತೊಮ್ಮೆ ತಮ್ಮ ಪ್ಲಾಸ್ಮಾ ದಾನ ಮಾಡಿದ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.