ಖ್ಯಾತ Hollywood ನಟಿ ಕೆಲ್ಲಿ ಪ್ರಿಸ್ಟನ್ ನಿಧನ

ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ಹಾಲಿವುಡ್ ನಟಿಯಾಗಿದ್ದ ಕೇಲಿ ಪ್ರಿಸ್ಟನ್ ನಿಧನರಾಗಿದ್ದಾರೆ. ಕಳೆದ ಸುಮಾರು ಎರಡು ವರ್ಷಗಳಿಂದ 57 ವರ್ಷದ ಕೇಲಿ ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಕುರಿತು ಮಾಹಿತಿ ನೀಡಿರುವ ಕೇಲಿ ಪತಿ ಹಾಗೂ ಬರಹಗಾರ ಜಾನ್ ಟ್ರಾವೊಲ್ಟಾ, ಕೇಲಿಗೆ ಶೃದ್ಧಾಂಜಲಿ ಅರ್ಪಿಸಲು ಒಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

Last Updated : Jul 13, 2020, 05:56 PM IST
ಖ್ಯಾತ Hollywood ನಟಿ ಕೆಲ್ಲಿ ಪ್ರಿಸ್ಟನ್ ನಿಧನ title=

ನವದೆಹಲಿ: ಹಾಲಿವುಡ್ ನಟಿ ಮತ್ತು ಬರಹಗಾರ ಜಾನ್ ಟ್ರಾವೊಲ್ಟಾ ಅವರ ಪತ್ನಿ ಕೆಲ್ಲಿ ಪ್ರಿಸ್ಟನ್ ಇಂದು ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಅವರು ಕಳೆದ ಎರಡು ವರ್ಷಗಳಿಂದ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಟ್ರಾವೊಲ್ಟಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ಮಾಹಿತಿಯನ್ನು ನೀಡಿ, ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಕೆಲ್ಲಿ ಪ್ರಿಸ್ಟನ್ ಅವರ ಮಗಳು ಎಲಾ ಕೂಡ ತಮ್ಮ ಅನುಭವಗಳನ್ನು ತಮ್ಮ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಜಾನ್ ಟ್ರಾವೊಲ್ಟಾ, "ಇದು ತುಂಬಾ ದುಃಖಕರವಾಗಿದೆ. ಎರಡು ವರ್ಷಗಳಿಂದ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ನನ್ನ ಸುಂದರ ಮಡದಿ ಕೆಲ್ಲಿ. ಅವರು ಅನೇಕ ಜನರ ಪ್ರೀತಿ ಮತ್ತು ಬೆಂಬಲದ ಮೇಲೆ ಧೈರ್ಯದಿಂದ ಹೋರಾಡಿದರು, ಆದರೆ ಈ ಯುದ್ಧದಲ್ಲಿ ಅವರು ಸೋಲೋಪ್ಪಿಕೊಂಡಿದ್ದಾಳೆ. ನನ್ನ ಕುಟುಂಬ ಮತ್ತು ನಾನು ಯಾವಾಗಲೂ ಅವಳಿಗೆ ಹೋರಾಡಲು ಸಹಕರಿಸಿದ ವೈದ್ಯರು, ದಾದಿಯರು ಮತ್ತು ಅವಳಿಗೆ ಸಹಾಯ ಮಾಡಿದ ವೈದ್ಯಕೀಯ ಕೇಂದ್ರಕ್ಕೆ ಕೃತಜ್ಞರಾಗಿರುತ್ತೇವೆ. ಕೆಲ್ಲಿಯ ಪ್ರೀತಿ ಮತ್ತು ಅವಳ ಜೀವನವು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. " ತಾಯಿಯನ್ನು ಕಳೆದುಕೊಂಡಿರುವ ತನ್ನ ಮಕ್ಕಳಿಗೆ ಸ್ವಲ್ಪ ಸಮಯವನ್ನು ನೀಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

 
 
 
 

 
 
 
 
 
 
 
 
 

It is with a very heavy heart that I inform you that my beautiful wife Kelly has lost her two-year battle with breast cancer. She fought a courageous fight with the love and support of so many. My family and I will forever be grateful to her doctors and nurses at MD Anderson Cancer Center, all the medical centers that have helped, as well as her many friends and loved ones who have been by her side. Kelly’s love and life will always be remembered. I will be taking some time to be there for my children who have lost their mother, so forgive me in advance if you don’t hear from us for a while. But please know that I will feel your outpouring of love in the weeks and months ahead as we heal. All my love, JT

A post shared by John Travolta (@johntravolta) on

ಇದೇ ವೇಳೆ ಕೆಲ್ಲಿ ಪ್ರಿಸ್ಟನ್ ಅವರ ಮಗಳು ಎಲಾ ಟ್ರಾವೊಲ್ಟಾ ಕೂಡ ತಾಯಿಯನ್ನು ನೆನಪಿಸಿಕೊಂಡರು ಮತ್ತು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಎಲಾ, 'ನಾನು ನಿಮ್ಮಂತಹ ಧೈರ್ಯಶಾಲಿ, ಬಲವಾದ, ಸುಂದರ ಮತ್ತು ಪ್ರೀತಿಯ ಮಹಿಳೆಯನ್ನು ಭೇಟಿಯಾಗಲಿಲ್ಲ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನಿಮ್ಮ ಸಹಾಯಕ್ಕಾಗಿ ಧನ್ಯವಾದಗಳು ಮತ್ತು ನನಗಾಗಿ ಈ ಜಗತ್ತನ್ನು ಸುಂದರವಾದ ಸ್ಥಳವನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನ ಜೀವನವನ್ನು ಸುಂದರಗೊಳಿಸಿದ್ದೀರಿ ಮತ್ತು ನೀವು ಯಾವಾಗಲೂ ಹಾಗೆ ಮಾಡುತ್ತೀರಿ ಎಂದು ನನಗೆ ತಿಳಿದಿದೆ. ನಿಮಗೆ ನನ್ನ ತುಂಬಾ ಪ್ರೀತಿ ಅಮ್ಮಾ" ಎಂದಿದ್ದಾರೆ.

ಕೆಲ್ಲಿ ಪ್ರಿಸ್ಟನ್ 'ಜೆರಿ ಮ್ಯಗೊರ್', ಟ್ವಿನ್ಸ್, ಜಾಕ್ ಫ್ರಾಸ್ಟ್, ಫೋರ್ ಲಾವ್ ಆಫ್ ದಿ ಗೇಮ್ ಹಾಗೂ ವ್ಯೂ ಫ್ರಮ್ ದಿ ಟಾಪ್ ಗಳಂತಹ ಚಿತ್ರಗಳಲ್ಲಿನ ತಮ್ಮ ನಟನೆಗಾಗಿ ಗುರಿತಿಸಿಕೊಂಡಿದ್ದಾರೆ. ವರ್ಷ 2000ರಲ್ಲಿ ಬಿಡುಗಡೆಯಾಗಿದ್ದ ಬ್ಯಾಟಲ್ ಫೀಲ್ಡ್ ಅರ್ಥ್ ನಲ್ಲಿ ಕೆಲ್ಲಿ ತಮ್ಮ ಪತಿ ಜಾನ್ ಟ್ರಾವೋಲ್ಟಾ  ಜೊತೆಗೆ ಸ್ಕ್ರೀನ್ ಹಂಚಿಕೊಂಡಿದ್ದರು. 2018ರಲ್ಲಿ ತೆರೆಕಂಡ ಹಾಲಿವುಡ್ ಚಿತ್ರ ಗ್ಯಾಂಗ್ ಸ್ಟರ್ ಡ್ರಾಮಾ ಗೋಟ್ಟಿ ಯಲ್ಲಿ ಕೆಲ್ಲಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರ ಪತಿ ಕೂಡ ನಟಿಸಿದ್ದರು. 

Trending News