Sapthami Gowda in Yuva : ಅಣ್ಣಾವ್ರ ಮೊಮ್ಮಗ ಯುವರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಇದೀಗ ಚಿತ್ರಕ್ಕೆ ನಾಯಕಿ ಆಯ್ಕೆ ಆಗಿದೆ. ಯುವ ರಾಜ್‌ಕುಮಾರ್ ಚೊಚ್ಚಲ ಚಿತ್ರಕ್ಕೆ 'ಯುವ' ಎನ್ನುವ ಟೈಟಲ್ ಫೈನಲ್ ಆಗಿದೆ. ಸಣ್ಣ ಟೀಸರ್ ಸಮೇತ ಸಿನಿಮಾ ಘೋಷಣೆಯಾಗಿತ್ತು. ಜೊತೆಗೆ ಖಾಸಗಿ ಹೋಟೆಲ್‌ನಲ್ಲಿ ಮುಹೂರ್ತ ನೆರವೇರಿತ್ತು. ಇದೀಗ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆ ಆಗಿರುವ ವಿಚಾರ ಬಹಿರಂಗವಾಗಿದೆ.


COMMERCIAL BREAK
SCROLL TO CONTINUE READING

ಹೊಂಬಾಳೆ ಸಂಸ್ಥೆ 'ಯುವ' ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಎಂದು ಘೋಷಿಸಿದೆ. 'ಕಾಂತಾರ' ಚಿತ್ರದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿ ಸಪ್ತಮಿ ಮೋಡಿ ಮಾಡಿದ್ದರು. ಅದರ ಬೆನ್ನಲ್ಲೇ ಅಭಿಷೇಕ್ ಅಂಬರೀಷ್ ನಟನೆಯ 'ಕಾಳಿ' ಚಿತ್ರಕ್ಕೂ ಆಯ್ಕೆ ಆಗಿದ್ದರು. ಬಾಲಿವುಡ್‌ ಸಿನಿಮಾದಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದೀಗ ಬಹುನಿರೀಕ್ಷಿತ 'ಯುವ' ಚಿತ್ರಕ್ಕೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. 'ಯುವ'ರಾಜನ ಅರಸಿಗೆ ಆದರದ ಸ್ವಾಗತ" ಎಂದು ಎಂದು ಹೊಂಬಾಳೆ ಸಂಸ್ಥೆ ಪೋಸ್ಟ್ ಮಾಡಿದೆ. ಈ ಹಿಂದೆ 'ಯುವ' ಚಿತ್ರದ ನಾಯಕಿ ಪಾತ್ರಕ್ಕೆ ಬೇರೆ ನಟಿಯರ ಹೆಸರು ಕೇಳಿಬಂದಿತ್ತು.


Tiger Nageswara Rao : ಅಂತಿಮ ಹಂತ ತಲಪಿದ 'ಟೈಗರ್ ನಾಗೇಶ್ವರ ರಾವ್' ಶೂಟಿಂಗ್‌..! ಕುಖ್ಯಾತ ಕಳ್ಳನ ಕಥೆಯಲ್ಲಿ ʼರವಿತೇಜʼ


 ತಮಿಳಿನ ಕಲ್ಯಾಣಿ ಪ್ರಿಯದರ್ಶನ್ ಅಥವಾ ಉಪೇಂದ್ರ ಮಗಳು ಐಶ್ವರ್ಯ ಅಣ್ಣಾವ್ರ ಮೊಮ್ಮೊಗ ಮೊದಲ ಚಿತ್ರಕ್ಕೆ ನಾಯಕಿ ಆಗ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇನ್ನು ಇತ್ತೀಚೆಗೆ ರುಕ್ಮಿಣಿ ವಸಂತ್ ಹೆಸರು ಕೂಡ ಚಾಲ್ತಿಗೆ ಬಂದಿತ್ತು. ಆದರೆ ಆಕೆ ಅದು ಸುಳ್ಳು ಎಂದಿದ್ದರು. ಇದೀಗ ಸಪ್ತಮಿ ಗೌಡ ಅವರನ್ನು ಯುವ ಜೋಡಿಯಾಗಿ ಆಯ್ಕೆ ಮಾಡುವ ಮೂಲಕ ಹೊಂಬಾಳೆ ಸಂಸ್ಥೆ ಅಚ್ಚರಿ ಮೂಡಿಸಿದೆ.


ಇದನ್ನೂ ಓದಿ-Nora Fatehi-Akshay Kumar: ನೋರಾ ಫತೇಹಿ ಹಾಟ್ ರೆಡ್ ಡ್ರೆಸ್‌ನ ಡ್ಯಾನ್ಸ್‌ ವಿಡಿಯೋ ಫುಲ್ ವೈರಲ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.