ಬೆಳಗಾವಿ: ಇಲ್ಲಿನ ರಾಣಿ ಚೆನ್ನಮ್ಮ ವಿವಿಯ 10ನೇ ಘಟಿಕೋತ್ಸವದಲ್ಲಿ ಹಿರಿಯ ನಟ ರಮೇಶ್ ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಲಾಯಿತು.


COMMERCIAL BREAK
SCROLL TO CONTINUE READING

ಇದೆ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಅರವಿಂದ್ "ನನ್ನ ಈ ಸಂಭ್ರಮದ ಕ್ಷಣದಲ್ಲಿ ತಂದೆ ಇರಬೇಕಿತ್ತು, ನನಗೆ ಗೌರವ ಡಾಕ್ಟರೇಟ್ ಸಿಗ್ತಿದ್ದಂತೆ ಸಂಬಂಧಿಕರಿಗೆ ವಾಟ್ಸಪ್ ಮೆಸೆಜ್ ಮಾಡಿದೆ. ಅವರು ಅದಕ್ಕೆ ಅಭಿನಂದನೆಗಳು, ತಂದೆ ಇರಬೇಕಿತ್ತು ಎಂದು ಆ ಕಡೆಯಿಂದ ಪ್ರತಿಕ್ರಿಯೆ ಬಂತು" ಎಂದು ಅವರು ತಂದೆಯವರನ್ನು ನೆನೆದು ಭಾವುಕರಾದರು.


ಇದನ್ನೂ ಓದಿ: Snake Found In Scooty: ಸ್ಕೂಟರ್‌ ಒಳಗಿನಿಂದ ಹೊರಬಂತು 5 ಅಡಿ ಉದ್ದದ ಹಾವು


30 ವರ್ಷ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ.ಟಿಕೆಟ್ ತೆಗೆದುಕೊಂಡು ಚಿತ್ರ ನೋಡಿದ ಪ್ರತಿ ಪ್ರೇಕ್ಷಕನಿಗೆ ನಾನು ಋಣಿ ಆಗಿರುವೆ.ನನ್ನ ಜೊತೆಗೆ ನಟಿಸಿರುವ ಹಲವು ನಾಯಕ-ನಟಿಯರನ್ನು ನಾನು ಸ್ಮರಿಸುವೆ.ಎಲ್ಲರ ಸಹಾಕರವೇ ನನ್ನ ಈ ಸಾಧನೆಗೆ ಕಾರಣ" ಎಂದು ಅವರು ಸ್ಮರಿಸಿದರು.


ಇದೆ ವೇಳೆ ನಟ ರಮೇಶ್ ಅರವಿಂದ್ ಅವರ ಜೊತೆಗೆ ಸಮಾಜ ಸೇವೆ ಕ್ಷೇತ್ರದಲ್ಲಿ ವಿ.ರವಿಚಂದರ್, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಮಾತೆ ಅಕ್ಕ ಅನ್ನಪೂರ್ಣ ‌ತಾಯಿ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.